ಸುಳ್ಯ: ಅರಂತೋಡು ತೆಕ್ಕಿಲ್ ಹೆಚ್.ಪಿ ಗ್ಯಾಸ್ ಏಜೆನ್ಸಿ ವತಿಯಿಂದ ಅರಂತೋಡು ಗ್ರಾಮ ಪಂಚಾಯತ್ ಹಾಗೂ ಅಕ್ಷಯ ಸ್ತ್ರೀ ಶಕ್ತಿ ಗೊಂಚಲು ಸಮಿತಿಯ ಸಂಯೋಗದೊಂದಿಗೆ ಕೇಂದ್ರ ಸರಕಾರದ ಇಂಧನವನ್ನು ಮಿತವಾಗಿ ಬಳಸೋಣ ಬನ್ನಿ ಪರಿಸರವನ್ನು ಸಂರಕ್ಷಿಸೋಣ ಎಂಬ ಸ್ಲೋಗನ್ ನೊಂದಿಗೆ ಸಕ್ಷಮ್ ಎಲ್.ಪಿ.ಜಿ ಪಂಚಾಯತ್ ಕಾರ್ಯಕ್ರಮವು ಪೆಬ್ರವರಿ 11 ರಂದು ಅರಂತೋಡು ಗ್ರಾ.ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಪೆಟ್ರೋಲಿಯಂ ಉತ್ಪನ್ನಗಳನ್ನು ಸಂರಕ್ಷಿಸಲು ಉತ್ತಮ ಪರಿಸರವನ್ನು ಖಚಿತಪಡಿಸುವ ಮೂಲಕ ನಮ್ಮ ಭವಿಷ್ಯದ ಪೀಳಿಗೆಗೆ ಹೊಸ ಮತ್ತು ಆರೋಗ್ಯಕರ ಭಾರತವನ್ನು ನಿರ್ಮಿಸಲು ಜನರಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ವ್ಯರ್ಥ ಬಳಕೆ ಆಗದಂತೆ ಜಾಗೃತಿ ಮೂಡಿಸುವ ಮೂಲಕ ಜವಾಬ್ದಾರಿಯುತ ನಾಗರಿಕನ ಹೊಣೆ ನಿರ್ವಹಿಸುತ್ತೇವೆ ಎಂಬ ಪ್ರತಿಜ್ಞೆಯನ್ನು ತೆಕ್ಕಿಲ್ ಹೆಚ್.ಪಿ. ಗ್ಯಾಸ್ ನ ವ್ಯವಸ್ಥಾಪಕ ಅಶ್ರಫ್ ಗುಂಡಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್, ಅಕ್ಷಯ ಸ್ತ್ರೀ ಗೊಂಚಲು ಸಮಿತಿ ಅಧ್ಯಕ್ಷೆ ಗಾಯತ್ರಿ ಉಳುವಾರು, ಅನ್ವಾರುಲ್ ಹುದಾ ಎಸೋಸಿಯೇಶನ್ ಅಧ್ಯಕ್ಷ ಎಸ್.ಎಮ್,ಮಜೀದ್ ಗ್ರಾಂ.ಪಂಚಾಯತ್ ಸದಸ್ಯೆ ದೇವಕಿ ಕೋಡಿ, ಅರಂತೋಡು ಅಂಗನವಾಡಿ ಕಾರ್ಯಕರ್ತೆ ಹೊನ್ನಮ್ಮ, ಬಿಳಿಯಾರ್ ಅಂಗನವಾಡಿ ಕಾರ್ಯಕರ್ತೆ ಲಲಿತಾ ಜಯಲಕ್ಮೀ, ದೇರಾಜೆ ಅಂಗನವಾಡಿ ಕಾರ್ಯಕರ್ತೆ ಕುಸುಮ, ಕಳುಬ್ಯೆಲು ಅಂಗನವಾಡಿ ಕಾರ್ಯಕರ್ತೆ ಧನಲಕ್ಮೀ, ತೆಕ್ಕಿಲ್ ಎಚ್.ಪಿ.ಗ್ಯಾಸ್ನ ಸಿಬ್ಬಂದಿಗಳಾದ ಧನುರಾಜ್ ಊರುಪಂಜ , ಹನೀಫ್ ಮೊಟ್ಟೆಂಗಾರ್ ಮೊದಲಾದವರು ಉಪಸ್ಥಿತರಿದ್ದರು.