Advertisement
Categories: ಅಂಕಣ

ಅರಸಿನ ಸೇವಿಸಲು ಮಾಡಬೇಡಿ ಉದಾಸೀನ

Share
ಮುಂದೊಂದು ದಿನ ಭಾರತ ದೇಶವು ಸಕ್ಕರೆ ಕಾಯಿಲೆಯ ರಾಜಧಾನಿ ಯಾಗುತ್ತದೆ ಎಂದು ಚೀರಾಡುತ್ತಿರುವವರ  ಕೋಲಾಟ, ಸಕ್ಕರೆ ತಿಂದು ಸಕ್ಕರೆ ಕಾಯಿಲೆಯಿಂದ ಮುಕ್ತರಾಗಿ ಎಂಬ ಜಾಹೀರಾತಿನ ಮೇಲಾಟ, ಈಗಾಗಲೇ ಸಕ್ಕರೆ ಕಾಯಿಲೆಯಿಂದ ನರಳುತ್ತಿರುವವರ  ಕಾಯಿಲೆ ಯೊಂದಿಗಿನ ಹೋರಾಟ, ಅಯ್ಯಯ್ಯೋ ಎಷ್ಟೊಂದು ಮಾತ್ರೆಗಳನ್ನು  ಜೀವನಪೂರ್ತಿ ಸೇವಿಸಬೇಕು  ಎನ್ನುತ್ತಿರುವವರ ಗೊಣಗಾಟ-  ಇವೆಲ್ಲದರ ನಡುವೆ ನನ್ನಂತಹ ವೈದ್ಯನೊಬ್ಬ ಮೂಲೆಯಲ್ಲಿ ಕುಳಿತು-” ಹಾಗಾದರೆ ಭಾರತ ವಿಶ್ವಗುರುವಾಗುವ ಸಂದರ್ಭದಲ್ಲಿ ಎಲ್ಲರದ್ದೂ ಸಕ್ಕರೆ ಕಾಯಿಲೆಯ ನರಳಾಟವಾದರೆ  ಪರಿಸ್ಥಿತಿ  ಹೇಗಿರಬಹುದೆಂದು ಊಹಿಸುತ್ತಾ  ಉಂಟಾಗುವ ಆಂತರಿಕವಾದ ತಿಕ್ಕಾಟ….  … ಇವೆಲ್ಲದಕ್ಕೂ ಪರಿಹಾರವೇ ಇಲ್ಲವೇ ಎಂಬುದಾಗಿ ಯೋಚಿಸುವಾಗ ಕಂಡದ್ದು ಅರಸಿನ.
ರೂಪವೊಂದು ನಾಮ ಹಲವು:
ಸಂಸ್ಕೃತದಲ್ಲಿ ಹರಿದ್ರ ಕನ್ನಡದಲ್ಲಿ ಅರಸಿನ ಮತ್ತು ಇಂಗ್ಲೀಷಿನಲ್ಲಿ  ಟರ್ಮರಿಕ್ ಎಂದು ಕರೆಯಲ್ಪಡುವ ಇದರ ರಾಸಾಯನಿಕ  ಸಸ್ಯಶಾಸ್ತ್ರೀಯ ಹೆಸರು ‘ Curcuma longa ‘.
ಉಪಯೋಗಗಳು:
1. ಸೋಂಕು ನಿವಾರಕವಾಗಿ:  ಗಾಯಗಳಿಗೆ ಮತ್ತು ಬೆಂಕಿಯಿಂದ ಗಾಯಗಳಿಗೆ ಹಚ್ಚುವುದರಿಂದ ಸೋಂಕು ನಿವಾರಕವಾಗಿ ಕೆಲಸ ಮಾಡುತ್ತದೆ. ಮತ್ತು  ಗಾಯವು ಬೇಗನೆ ಮಾಯುತ್ತದೆ.
2.ಹಲ್ಲುಗಳ ಆರೋಗ್ಯಕ್ಕೆ:  ಹಲ್ಲುಗಳನ್ನು ಗಟ್ಟಿಯಾಗಿಸಲು,  ಹಲ್ಲುಗಳ ಹುಳುಕುಗಳನ್ನು ತಡೆಗಟ್ಟುವುದು ಎಂದು ನಂಬಲಾದ ಫ್ಲೋರೈಡ್ ಅಂಶ ಅರಸಿನದಲ್ಲಿ ಇರುವುದು.
3. ಪ್ರತಿ ಜೈವಿಕವಾಗಿ:  ಸೂಕ್ಷ್ಮಾಣುಗಳಾದ ಬ್ಯಾಕ್ಟೀರಿಯಾಗಳನ್ನು ನಾಶಮಾಡುವ ,ಅವುಗಳ ಬೆಳವಣಿಗೆಯನ್ನು ತಡೆಗಟ್ಟುವ ಪ್ರತಿಜೈವಿಕ ಅಥವಾ ಆಂಟಿಬಯೋಟಿಕ್ ಗಳಂತೆ ಇದು ಕೆಲಸ ಮಾಡಬಲ್ಲದು.
4. ಅಲ್ಜಿಮರ್ ಕಾಯಿಲೆಯಲ್ಲಿ:  ಮೆದುಳಿನ ನರಕೋಶಗಳ ಸವೆತದಿಂದ ಉಂಟಾಗುವ ಅಲ್ಜಿಮರ್ ರೋಗದಲ್ಲಿ, ಅದನ್ನು ತಡೆಗಟ್ಟುವಲ್ಲಿ ಇದು ಪ್ರಯೋಜನಕಾರಿ.
5. ಔಷಧೀಯ ಜಾಡಮಾಲಿ:  ಆಂಟಿ ಆಕ್ಸಿಡೆಂಟ್ ಎಂದು ಕರೆಯಲ್ಪಡುವ ಗುಣವಿರುವುದರಿಂದ ಇದು ಕ್ಯಾನ್ಸರ್ ಬಾರದಂತೆ ತಡೆಗಟ್ಟುವಲ್ಲಿ ಹಾಗೂ ಪಿತ್ತಜನಕಾಂಗದ ಅಂದರೆ ಲಿವರ್ ಕಾಯಿಲೆಯಲ್ಲಿ ಪ್ರಯೋಜನಕಾರಿ.
6. ಕ್ಯಾನ್ಸರ್ ಹರಡುವಿಕೆಯನ್ನು ತಡೆಗಟ್ಟುವಿಕೆ:  ಕ್ಯಾನ್ಸರ್ ನಮ್ಮ ದೇಹದ ಒಂದು ಅಂಗದಿಂದ ಇನ್ನೊಂದು ಅಂಗಕ್ಕೆ ಹರಡಿ ಬೆಳೆಯುವ ಕ್ರಿಯೆಗೆ ಮೆಟಾಸ್ಟ್ಯಾಸಿಸ್  ಎನ್ನುತ್ತೇವೆ. ಈ ರೀತಿಯ ಹರಡುವಿಕೆಯನ್ನು  ಅರಸಿನ ತಡೆಗಟ್ಟುತ್ತದೆ. ಅಧ್ಯಯನವೊಂದರ ಪ್ರಕಾರ ,ಸ್ತನದ ಕ್ಯಾನ್ಸರ್ ಶ್ವಾಸಕೋಶಗಳಿಗೆ ಹಾಗೂ ದೇಹದ ಇತರ ಭಾಗಗಳಿಗೆ ಹರಡುವುದನ್ನು ಅರಸಿನ ತಡೆಗಟ್ಟುತ್ತದೆ ಎಂದು ಸಾಬೀತಾಗಿದೆ.
7. ನೋವು ನಿವಾರಕವಾಗಿ:  ಗಂಟುಗಳಲ್ಲಿ ಉಂಟಾಗುವ ಉರಿಯೂತವನ್ನು ಶಮನಗೊಳಿಸುವ ಮೂಲಕ ಸಂಧಿವಾತ ರೋಗಿಗಳಲ್ಲಿ ನೋವು ನಿವಾರಕವಾಗಿ  ಬಳಕೆ ಆಗುತ್ತದೆ. ಆದಕಾರಣ ನಾವು ಸಂಧಿವಾತ( ಆಸ್ಟಿಯೋ ಆರ್ಥರೈಟಿಸ್), ಆಮವಾತ( ರುಮಟಾಯ್ಡ್ ಆರ್ಥ್ರೈಟಿಸ್) ಇತ್ಯಾದಿ ಕೀಲುಗಳಿಗೆ ಸಂಬಂಧಿಸಿದ ರೋಗಗಳಲ್ಲಿ ವಿಶೇಷ ಪರಿಣಾಮಕಾರಿ.
8. ಸಕ್ಕರೆ ಕಾಯಿಲೆಯಲ್ಲಿ:  2008 ಜೂನ್ ತಿಂಗಳಿನಲ್ಲಿ ಫ್ರಾನ್ಸಿಸ್ಕೋ ದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಅರಸಿನದ ಕುರಿತು ಪ್ರಬಂಧ ಮಂಡನೆಯಾಯಿತು .ಡಯಾಬಿಟಿಸ್ ಟೈಪ್  2 ಉಂಟಾಗುವ ಸಾಧ್ಯತೆ  ಅರಸಿನವನ್ನು  ನಿತ್ಯವೂ ಸೇವಿಸುವವರಲ್ಲಿ ಅತ್ಯಂತ ಕಡಿಮೆ ಎಂದು ಕಂಡುಕೊಳ್ಳಲಾಯಿತು. ಡಯಾಬಿಟಿಸ್ ಇದ್ದವರಲ್ಲಿ  ಕಾಯಿಲೆಯಿಂದ ಆಗುವ ಹಾನಿಯನ್ನು ಇದು ಕಡಿಮೆಗೊಳಿಸುತ್ತದೆ.
9.  ಕಾಂತಿ ವರ್ಧಕವಾಗಿ-: ಸೂರ್ಯನ ಬೆಳಕಿನಿಂದ ಚರ್ಮದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ನಿವಾರಿಸಲು ತ್ವಚೆಯ ರಕ್ಷಕ ಕ್ರೀಮ್ಗಳಲ್ಲೂ ಅರಸಿನವನ್ನು ಬಳಸುತ್ತಾರೆ.
10. ವಯಸ್ಥಾಪನವಾಗಿ:  ಇದರಲ್ಲಿ  ಅದರ ಹಳದಿ ಬಣ್ಣಕ್ಕೆ ಕಾರಣವಾದ ಕರ್ಕ್ಯೂಮಿನ್ ಎಂಬ ಜಾಡಮಾಲಿ ಅಂಶ ಇರುವುದರಿಂದ ವಯಸ್ಸಾಗುವಿಕೆಯನ್ನು ನಿಧಾನಗೊಳಿಸುತ್ತದೆ.
11. ಕೊಲೆಸ್ಟರಾಲ್ ನಿಯಂತ್ರಣಕ್ಕೆ:  ಹೃದಯಕ್ಕೆ ಹಿತಕಾರಿಯಾದ ಎಚ್. ಡಿ .ಎಲ್   ಎಂಬ ಒಳ್ಳೆಯ ಕೊಲೆಸ್ಟ್ರಾಲ್ ಅಂಶವನ್ನು  ರಕ್ತದಲ್ಲಿ ಹೆಚ್ಚಿಸಿ ಹಾನಿಕಾರಕವಾದ ಎಲ್.ಡಿ.ಎಲ್ ಎಂಬ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ರಕ್ತದಲ್ಲಿ ಕಡಿಮೆಗೊಳಿಸುವುದು. ಈ ಕಾರಣಕ್ಕೆ ಹೃದಯಾಘಾತ ಹಾಗೂ ರಕ್ತನಾಳಗಳಲ್ಲಿ ಉಂಟಾಗುವ ತೊಂದರೆಗಳನ್ನು ತಪ್ಪಿಸುವುದು.
ನೆನಪಿನಲ್ಲಿಡಿ:
“ಹರಿದ್ರಾ ಪ್ರಮೇಹ  ಹರಾಣಾಮ್ ಶ್ರೇಷ್ಠ‌” ಎಂದು ಆಯುರ್ವೇದದಲ್ಲಿ ಹೇಳಿದಂತೆ ಅರಸಿನಕ್ಕೆ ಸಕ್ಕರೆ ಕಾಯಿಲೆಯನ್ನು ತಡೆಗಟ್ಟುವ ಗುಣವಿದೆ ಎಂಬುದೇನೋ ನಿಜ. ಆದರೆ ಸಕ್ಕರೆ ಕಾಯಿಲೆ  ಉಲ್ಬಣ ಅವಸ್ಥೆಗೆ ತೆರಳಿ , ಆಧುನಿಕ ಔಷಧ ಅಥವಾ ಇನ್ಸುಲಿನ್ ಇಂಜೆಕ್ಷನ್ ತೆಗೆದುಕೊಳ್ಳುವ ಅಗತ್ಯವಿರುವ ಸಂದರ್ಭಗಳಲ್ಲಿ ನೀವು ನನ್ನ ಬಳಿ ಬಂದು “ಅರಸಿನ ಕೊಟ್ಟು ನನ್ನ ಕಾಯಿಲೆ ಗುಣಪಡಿಸಿ” ಎಂದು ಗೋಗರೆದರೆ  ಅದೊಂದು ಹಾಸ್ಯ ಪ್ರಸಂಗ ಆದೀತು.  ಯಾವುದೋ ಔಷಧ ಕೊಟ್ಟು ಸಕ್ಕರೆ ಕಾಯಿಲೆಯನ್ನು ಸಂಪೂರ್ಣ ಗುಣಪಡಿಸುತ್ತೇನೆ  ಎಂಬ ಪೊಳ್ಳು ಭರವಸೆಗಳನ್ನು ನಂಬಿ ಮೋಸಹೋಗಬೇಡಿ, ದುಡ್ಡು ಕಳೆದುಕೊಳ್ಳಬೇಡಿ. ನರಕಯಾತನೆ ಅನುಭವಿಸಬೇಡಿ, . ಸಕ್ಕರೆ ಕಾಯಿಲೆಯು ಜೀವನಪೂರ್ತಿ ಔಷದ ಸೇವನೆಯ ಅಗತ್ಯವಿರುವ ಕಾಯಿಲೆ ಎಂಬುದನ್ನು ಖಚಿತಪಡಿಸಿಕೊಳ್ಳಿ.  ಕಾಯಿಲೆ ಬಾರದಂತೆ ತಾನು ಪಾಲಿಸಬೇಕಾದ ನಿಯಮಗಳ  ಕಡೆಗೆ ಗಮನ ಕೊಡದೆ, ಬೇಕಾದದ್ದನ್ನು ಬೇಕಾದ ಹಾಗೆ ತಿಂದು, ಮಾಡಬಾರದ ವ್ಯಸನಗಳನ್ನು ಮಾಡಿ, ಕೊನೆಗೆ ಪರಿಸ್ಥಿತಿ ಕೈ ಮೀರಿದಾಗ   ಏನೋ ಪವಾಡಗಳು  ಜರುಗಬಹುದು   ಎಂದು ಕಾಯುತ್ತ ಕುಳಿತುಕೊಳ್ಳುವ ವರ್ತನೆಯು, ಮರಣಶಯ್ಯೆಯಲ್ಲಿ ಪ್ರಾಣ ಉಳಿಸಿಕೊಳ್ಳಲು ಸರಳ ವಿಧಾನವನ್ನು ಅರಸುವ ಮನುಷ್ಯನ ಮಾನಸಿಕ ಅವಸ್ಥೆಗೆ ಅದೊಂದು ಕೈಗನ್ನಡಿಯಾಗಬಹುದು ಅಷ್ಟೇ.
ಹೇಗೆ ಬಳಸಬಹುದು?
ಒಂದು ಗ್ಲಾಸ್ ನೀರಿಗೆ ಅಥವಾ  1 ಗ್ಲಾಸ್ ಹಾಲಿಗೆ ಒಂದು ಚಮಚ  ಅರಸಿನ ಪುಡಿಯನ್ನು ಹಾಕಿ ಸೇವಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಆದರೆ ಅದರ ಸೇವನೆ ನಿತ್ಯ ನಿರಂತರವಾಗಿರಲಿ. ದಿನನಿತ್ಯ ಅದರ ಸೇವನೆಗೆ ಒಂದು ಸಮಯವನ್ನು ನಿಗದಿಪಡಿಸಿಕೊಳ್ಳಿ. ಆಗ ಅಭ್ಯಾಸ ಕೈ ಬಿಟ್ಟುಹೋಗುವುದಿಲ್ಲ.  ಬಿಸಿ ಮಾಡಿದಾಗ ಅರಸಿನದ ಔಷಧೀಯ ಗುಣ ನಷ್ಟವಾಗುವುದಿಲ್ಲ.
ತಪ್ಪು ತಿಳುವಳಿಕೆ ಬಿಡಿ :
ಅರಸಿನವು  ಅರಸಿನ ಬಣ್ಣ  ಹೊಂದಿದೆ ಎಂಬ ಕಾರಣಕ್ಕೆ ಅದು  ಅರಸಿನ ಕಾಯಿಲೆ ಅಥವಾ ಜಾಂಡಿಸ್ ರೋಗವನ್ನು ತರಬಹುದೆಂಬ ಮೂಢನಂಬಿಕೆಯನ್ನು ನಿಮ್ಮ ಮನಸ್ಸಿನಿಂದ ಕಿತ್ತೊಗೆಯಿರಿ. ಅರಸಿನ ಬಣ್ಣದ ವಸ್ತುಗಳನ್ನು ತಿಂದ ಮಾತ್ರಕ್ಕೆ ಕಾಮಾಲೆ ರೋಗ ಬರುತ್ತದೆ ಎಂಬುದು ಸತ್ಯವಾಗಿದ್ದರೆ ಇಂದು ಜಗತ್ತಿನ ಬಹುತೇಕ ಜನ ಕಾಮಾಲೆರೋಗ ಪೀಡಿತರಾಗಿರುತ್ತಿದ್ದರು !
ಪ್ರಕೃತಿ ನಮಗೆ  ಅರಸಿನವೆಂಬ ದ್ರವ್ಯ ರೂಪದಲ್ಲಿ ಕೊಟ್ಟ ವರವನ್ನು ಬಳಸದೆ ಆತ್ಮವಂಚನೆ ಮಾಡಿಕೊಳ್ಳಬೇಡಿ., ದಯವಿಟ್ಟು. ಹಾಗೂ ನನ್ನ ಲೇಖನದಿಂದ ಸ್ಪೂರ್ತಿಗೊಂಡು  ಸೇವಿಸಲಾರಂಭಿಸಿ, ಕೇವಲ ನಾಲ್ಕು ದಿನ ಸೇವಿಸಿ ನಂತರ ನಿಲ್ಲಿಸಬೇಡಿ!
ಅಲ್ಲದೆ ,ಎಷ್ಟು ದಿನ ಸೇವಿಸಬೇಕು? ಅಂದರೆ ಯಾವಾಗ  ಸೇವನೆಯನ್ನು ನಿಲ್ಲಿಸಬೇಕು ಎಂದು ಕೇಳಬೇಡಿ!

ಬರಹ:
ಡಾ .ರಾಘವೇಂದ್ರ ಪ್ರಸಾದ್ ಬಂಗಾರಡ್ಕ
ಆಯುರ್ವೇದ ತಜ್ಞ ವೈದ್ಯರು,
ಪ್ರಸಾದ್ ಹೆಲ್ತ್ ಕೇರ್ ಸೆಂಟರ್ ,ಪುರುಷರಕಟ್ಟೆ ,ಪುತ್ತೂರು.
ಮೊಬೈಲ್.9740545979
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

Karnataka Weather | 17-05-2024 | ಹೆಚ್ಚಿನ ಕಡೆಗಳಲ್ಲಿ ಗುಡುಗು ಸಹಿತ ಮಳೆ | ಮೇ 22ರ ನಂತರ ವಾಯುಭಾರ ಕುಸಿತ ಸಾಧ್ಯತೆ |

ಮೇ 22ರ ನಂತರ ಪ್ರಭಲ ಮುಂಗಾರು ಮಾರುತಗಳು ಅಂಡಮಾನ್ ಕಡೆ ಚಲಿಸುವುದರಿಂದ ಬಂಗಾಳಕೊಲ್ಲಿಯಲ್ಲಿ…

51 mins ago

ಸಮಾಜಕ್ಕೆ ಸೇವೆ ಮಾಡುವುದು ಎಂದರೆ ಹಲವು ಆಯಾಮಗಳಿವೆ | ಹವಾಮಾನ ಹೇಳುವುದೂ ಒಂದು ಸೇವೆ |

ಸಮಾಜಕ್ಕೆ ಸೇವೆ ಮಾಡೋದು ಅಂದರೆ ಅದಕ್ಕೆ ಹಲವು ಆಯಾಮಗಳಿವೆ. ನಿಮ್ಮಲ್ಲಿರುವ ಜ್ನಾನವನ್ನು ಜನರಿಗೆ…

3 hours ago

ಮುಳಿಯ ಚಿನ್ನೋತ್ಸವ | ಸ್ಪೆಷಲ್ ರುದ್ರಾಕ್ಷಿ ಕಲೆಕ್ಷನ್ ಅನಾವರಣ

ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಸಣ್ಣ ಸಣ್ಣ ರುದ್ರಾಕ್ಷಿಯಿಂದ ಕೈ ಬಳೆ, ಉಂಗುರ, ಮಾಲೆಯಾಗಿ ಸಿದ್ದಗೊಂಡ…

3 hours ago

ಸುಸ್ಥಿರ ಕೃಷಿ ತರಬೇತಿ ಕಾರ್ಯಗಾರ | ಯುವ ಕೃಷಿಕರಿಗೆ ಕೃಷಿ ಬಗ್ಗೆ ಮಾಹಿತಿ

ಮೂರು ದಿನಗಳ 'ಸುಸ್ಥಿರ ಕೃಷಿ ತರಬೇತಿ'(Sustainable Agriculture Training) ಕಾರ್ಯಾಗಾರ ಮೇ.28 ರಿಂದ…

20 hours ago

ಕೆರೆಯಲ್ಲಿ ಸಾಕಿದ್ದ ಮೀನುಗಳ ಮಾರಣಹೋಮ | ಬೃಹತ್‌ ಗಾತ್ರ ಮೀನು ಸಾವು | ಅಪಾರ ನಷ್ಟ |

ದಾವಣಗೆರೆ(Davanagere) ತಾಲೂಕಿನ ಬೇತೂರು ಗ್ರಾಮದಲ್ಲಿರುವ  ಕೆರೆಯಲ್ಲಿ(Lake) ಮೀನುಗಳ(Fish) ಮಾರಣಹೋಮವಾಗಿದೆ(Dead). ಈ ಕೆರೆಯಲ್ಲಿ 3…

20 hours ago