ಸುಳ್ಯ: ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಆಶ್ರಯದಲ್ಲಿ ಒಂದು ತಿಂಗಳ ರಾಜ್ಯಮಟ್ಟದ ಅರೆಭಾಷೆ ರಂಗ ತರಬೇತಿ ಶಿಬಿರ ಹಳೆಗೇಟು ರಂಗಮನೆ ಸಾಂಸ್ಕೃತಿಕ ಕಲಾಕೇಂದ್ರದಲ್ಲಿ ಫೆ.3 ರಂದು ಆರಂಭಗೊಂಡಿತ್ತು.
ಹಿರಿಯ ರಂಗಕರ್ಮಿ ತುಕಾರಾಂ ಏನೆಕಲ್ಲು ಉದ್ಘಾಟಿಸಿದರು. ರಂಗಭೂಮಿ ಒಂದು ಪ್ರಬಲ ಮಾಧ್ಯಮ, ಇದು ಬದುಕು ಕಟ್ಟುವುದನ್ನು ಕಲಿಸಿಕೊಡುತ್ತದೆ. ರಂಗ ತರಬೇತಿಯು ಭಾಷಾ ವಿಸ್ತಾರದ ಕೆಲಸ ಎಂದು ಅವರು ಹೇಳಿದರು.
ಮುಖ್ಯ ಅತಿಥಿ ವಿಶ್ರಾಂತ ಪ್ರಾಂಶುಪಾಲ ಡಾ.ಪ್ರಭಾಕರ ಶಿಶಿಲ ಮಾತನಾಡಿ, ನಾಟಕ ಕ್ಷೇತ್ರ ಮುಖವಾಡಗಳನ್ನು ಕಳಚಿ ನಮ್ಮನ್ನು ಶುದ್ಧ ಮನುಷ್ಯರನ್ನಾಗಿಸುತ್ತದೆ. ಅರೆಭಾಷೆ ಎಲ್ಲರ ಭಾಷೆಯಾಗಿ ಬೆಳೆಯುವಲ್ಲಿ ರಂಗ ತರಬೇತಿ ಒಂದು ಮಹತ್ವದ ವೇದಿಕೆ ಆಗಲಿ ಎಂದರು.
ಅರೆಭಾಷೆ ಸಾಂಸ್ಕೃತಿಕ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಅಧ್ಯಕ್ಷತೆ ವಹಿಸಿದ್ದರು. ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಮೋಹನ್‍ರಾಂ ಸುಳ್ಳಿ, ರಂಗಕರ್ಮಿ ಎಂ.ಎಸ್. ಜಯಪ್ರಕಾಶ್, ಜೀವನ್‍ರಾಂ ಸುಳ್ಯ ಮಾತನಾಡಿದರು.
ಅರೆಭಾಷೆ ಅಕಾಡೆಮಿ ಸದಸ್ಯ ಧನಂಜಯ ಅಗೊಳಿಕಜೆ ಸ್ವಾಗತಿಸಿದರು. ವಿನೋದ್ ಮೂಡಗದ್ದೆ ವಂದಿಸಿದರು. ಎ.ಟಿ.ಕುಸುಮಾಧರ ಕಾರ್ಯಕ್ರಮ ನಿರೂಪಿಸಿದರು.
ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ಮೂರು ದಿನಗಳ…
ಈಗಿನಂತೆ ಎಪ್ರಿಲ್ 29 ಹಾಗೂ 30 ರಂದು ಮಳೆ ಸ್ವಲ್ಪ ಕಡಿಮೆ ಇರುವ…
ಬೆಟ್ಟಗುಡ್ಡಗಳಲ್ಲಿ ಬೆಳೆಯಲಾಗುವ ಸೇಬನ್ನು ಕರ್ನಾಟಕದಲ್ಲಿಯೂ ಬೆಳೆಯಲಾಗುತ್ತಿದೆ ಎಂದು ಮನ್ ಕಿ ಬಾತ್ನಲ್ಲಿ ಪ್ರಧಾನಿ…
ಅಹಿಂಸೆಯೇ ಭಾರತದ ನೈಜ ಧರ್ಮವಾಗಿದೆ. ಆದರೆ, ಹಿಂಸಾಮಾರ್ಗದಲ್ಲಿ ಸಾಗುವವರ ದಮನ ಮಾಡುವುದೂ ಸಹ…
ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಪಾಕ್ ಪ್ರೇರಿತ ಭಯೋತ್ಪಾದಕರು ದಾಳಿ ನಡೆಸಿರುವ…
ರಾಜ್ಯದ ವಿವಿಧೆಡೆ ಮುಂದಿನ ಒಂದು ವಾರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು…