ಅರೆಭಾಷೆ ಸಿರಿ ಸಂಸ್ಕೃತಿ ಮತ್ತು ಕೆಡ್ಡಸ ಗೌಜಿ ಸಾಂಸ್ಕೃತಿಕ ಜಂಬರ ಕಾರ್ಯಕ್ರಮ

February 20, 2020
12:21 PM

ಸುಳ್ಯ: ಅರೆಭಾಷೆಯ ಸಾಂಸ್ಕೃತಿಕ ಪರಂಪರೆಯನ್ನು ಹೊರತರಲು ಕೆಡ್ಡಸ ಆಚರಣೆ ಅತೀ ಮುಖ್ಯವಾಗಿದೆ ಎಂದು ಕೊಡಗು ಜಿ.ಪಂ. ಅಧ್ಯಕ್ಷ ಬಿ.ಎ ಹರೀಶ್ ಹೇಳಿದರು.

Advertisement

ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ವತಿಯಿಂದ ಶ್ರೀ ಭಗವಾನ್ ಸಂಘ ಊರುಬೈಲು, ಸ್ವಾಮಿ ವಿವೇಕಾನಂದ ಯುವಕ ಮಂಡಲ ಇವರ ಸಹಯೋಗದಲ್ಲಿ ಚೆಂಬು ಗ್ರಾಮದ ಕೂಡಡ್ಕ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಅರೆಭಾಷೆ ಸಿರಿ ಸಂಸ್ಕೃತಿ ಮತ್ತು ಕೆಡ್ಡಾಸ ಗೌಜಿ ಸಾಂಸ್ಕೃತಿಕ ಜಂಬರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭೂಮಿಗೆ ತೆಂಗಿನ ಎಣ್ಣೆಯನ್ನು ಅರ್ಪಿಸುವ ಮೂಲಕ ಈ ಹಬ್ಬವನ್ನು ಆಚರಿಸಲಾಗುತ್ತದೆ. ಅರೆಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯಕ್ರಮವಾಗಬೇಕು. ಅರೆಭಾಷೆ ಮಾತನಾಡುವ ಜನಾಂಗದ ಪ್ರತಿಭೆಯನ್ನು ಹೊರತರಲು ಈ ಇಂತಹ ಕಾರ್ಯಕ್ರಮ ಅವಶ್ಯಕ ಎಂದು ಅವರು ಹೇಳಿದರು. ಮಡಿಕೇರಿ ತಾ.ಪಂ.ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಮಾತನಾಡಿ, ಅರೆಭಾಷೆ ಸಂಸ್ಕೃತಿ ಪರಂಪರೆಯನ್ನು ಪರಿಚಯಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿದೆ ಎಂದರು. ಅರೆಭಾಷೆ ಜನಾಂಗವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವಾಗಬೇಕು. ನಮ್ಮ ಮಕ್ಕಳಿಗೆ ಶಿಕ್ಷಣದ ಜತೆಗೆ ಸಾಂಸ್ಕೃತಿಕ ಪರಂಪರೆಯ ಬಗ್ಗೆಯೂ ತಿಳಿಸಬೇಕು ಎಂದರು.

ಮಡಿಕೇರಿ ತಾಲೂಕು ಪಂಚಾಯಿತಿ ಸದಸ್ಯ ನಾಗೇಶ್ ಕುಂದಲ್ಪಾಡಿ, ಚೆಂಬು ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಊರುಬೈಲು, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ಅಧ್ಯಕ್ಷ ಲಕ್ಷ್ಮಿ ನಾರಾಯಣ ಕಜೆಗದ್ದೆ, ಗೌಡರ ಯುವ ಸೇವಾ ಸಂಘದ ಉಪಾಧ್ಯಕ್ಷ ಡಾ. ಎನ್.ಎ ಜ್ಞಾನೇಶ್ ಮಾತನಾಡಿದರು. ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎನ್.ಸಿ ಅನಂತ, ಲೇಖಕ ಕುಯಿಂತೋಡು ದಾಮೋದರ, ಚೆಂಬು ಸ್ವಾಮಿ ವಿವೇಕಾನಂದ ಯುವಕ ಮಂಡಲದ ಅಧ್ಯಕ್ಷ ದಿನೇಶ್ ಪೂಜಾರಿಗದ್ದೆ, ಕೂಡಡ್ಕ ಸ.ಹಿ.ಪ್ರಾ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜೀವನ್ ಪೆರಿಗೇರಿ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ಸದಸ್ಯರಾದ ಬೈತಡ್ಕ ಜಾನಕಿ ಬೆಳ್ಯಪ್ಪ, ಚೊಕ್ಕಾಡಿ ಪ್ರೇಮ ರಾಘವಯ್ಯ, ಧನಂಜಯ ಅಗೋಳಿಕಜೆ ಮೊದಲಾದವರು ಉಪಸ್ಥಿತರಿದ್ದರು. ಚೆಂಬು ಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಸಂಯೋಜಕ ಲೋಕೇಶ್ ಊರುಬೈಲು ಪ್ರಸ್ತಾವನೆಗೈದರು. ಅಕಾಡಮಿ ಸದಸ್ಯೆ ಸ್ಮಿತಾ ಅಮೃತರಾಜ್ ಸ್ವಾಗತಿಸಿದರು. ಎಂ.ಬಿ ರವಿಕುಮಾರ್ ವಂದಿಸಿದರು. ರಮೇಶ ನಂಬಿಯಾರ್ ಕಾರ್ಯಕ್ರಮ ನಿರೂಪಿಸಿದರು.

ವಿವಿಧ ಗೋಷ್ಟಿ: ಜನಪದರ ಬೊದ್ಕುಲಿ ಕೆಡ್ಡಸ ಹಬ್ಬ ಬಗ್ಗೆ ವಿಷಯ ಮಂಡಿಸಿದ ಜಾನಪದ ವಿದ್ವಾಂಸ ಸುಂದರ್ ಕೇನಾಜೆ, ಕೆಡ್ಡಸ ಹಬ್ಬಕ್ಕೆ ತನ್ನದೇ ಆದ ಸಾಂಸ್ಕೃತಿಕ ಪರಂಪರೆ ಇದೆ. ವರ್ಷವಿಡಿ ಫಲ ಕೊಡುವ ಭೂಮಿಗೆ ಪೂಜೆ ಸಲ್ಲಿಸುವುದೇ ಈ ಹಬ್ಬದ ಮುಖ್ಯ ಉದ್ದೇಶ. ಮನೆಯ ಹಿರಿಯ ಹೆಣ್ಣುಮಗಳು ಭೂಮಿಗೆ ತೆಂಗಿನ ಎಣ್ಣೆಯನ್ನು ಅರ್ಪಿಸಿ ಪೂಜೆ ಸಲ್ಲಿಸುತ್ತಾರೆ. ಕೊಡಗು ಮಾತ್ರವಲ್ಲದೆ ಕರಾವಳಿ ಭಾಗದಲ್ಲೂ ಈ ರೀತಿಯ ಆಚರಣೆಗಳಿವೆ. 3 ದಿನಗಳು ನಡೆಯುವ ಈ ಹಬ್ಬ ವೈಶಿಷ್ಟ್ಯತೆಗಳಿಂದ ಕೂಡಿರುತ್ತದೆ ಎಂದರು.

ಅರೆಭಾಷಾ ಚಿಂತಕ ಮತ್ತು ಕೃಷಿಕ ಹೊಸೂರು ಚಂದ್ರಶೇಖರ್ `ಅರೆಭಾಷೆ ಸಂಸ್ಕೃತಿಲಿ ಮನೆ ಒಕ್ಕಲು ಜಂಬರ ಕುರಿತಾಗಿ ಉಪನ್ಯಾಸ ನೀಡಿದರು. ಲೀಲಾವತಿ ಕಲಾಯಿ ಮತ್ತು ಬಳಗದವರ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು. ಅರಂತೋಡು ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಶೀಲಾವತಿ ಕೃಷ್ಣಪ್ಪ ಬಿಳಿಯಾರ್ ಅವರು, ಅರೆಭಾಷೆ ಸಂಸ್ಕೃತಿಲಿ ಕೂಸ್‍ನ ತೊಟ್ಟಿಲಿಗೆ ಹಾಕುವ ಕ್ರಮದ ಬಗ್ಗೆ ಉಪನ್ಯಾಸ ನೀಡಿದರು. ರಮಾನಂದ ಬಾಳೆಕಜೆ ಮತ್ತು ಬಳಗದ ನೇತೃತ್ವದಲ್ಲಿ ತೊಡಿಕಾನ ಗೌಡ ಯುವ ಸೇವಾ ಸಂಘದವರು ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು.
ಅರೆಭಾಷೆ ಸಂಸ್ಕೃತಿಲಿ ಮದುವೆ ಜಂಬರ ವಿಚಾರದ ಕುರಿತು ಸಂಸ್ಕೃತಿ ಮತ್ತು ಭಾಷಾ ಚಿಂತಕ ದೊಡ್ಡಣ್ಣ ಬರೆಮೇಲು ಉಪನ್ಯಾಸ ನೀಡಿದರು. ಗಣಪಯ್ಯ ಗುಂಡಿಮಜಲು ಮತ್ತು ತಂಡದವರ ನೇತೃತ್ವದಲ್ಲಿ ಚೆಂಬು ಗೌಡ ಯುವ ಸೇವಾ ಸಂಘದವರು ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಜ.26 | ಸಾರಡ್ಕದಲ್ಲಿ ಕೃಷಿ ಹಬ್ಬ | ವಿವಿಧ ಗೋಷ್ಠಿಗಳು |
January 25, 2025
5:01 PM
by: ದ ರೂರಲ್ ಮಿರರ್.ಕಾಂ
ಮಂಗಳೂರು | ಕದ್ರಿ ಉದ್ಯಾನದಲ್ಲಿ ಜ.23 ರಿಂದ  ಫಲಪುಷ್ಪ ಪ್ರದರ್ಶನ | 20 ಸಾವಿರಕ್ಕೂ ಅಧಿಕ ಹೂವಿನ ಗಿಡಗಳ ಪ್ರದರ್ಶನ |
January 11, 2025
7:18 AM
by: The Rural Mirror ಸುದ್ದಿಜಾಲ
ಡಿ. 29 | ಕುಂಬಳೆಯಲ್ಲಿ ಕಲಾವಿದ ಕುಂಬಳೆ ಶ್ರೀಧರ ರಾವ್ ಸ್ಮೃತಿ | ‘ಕಲಾ ಶ್ರೀಧರ’ ಕೃತಿ ಅನಾವರಣ |
December 26, 2024
11:28 AM
by: ದ ರೂರಲ್ ಮಿರರ್.ಕಾಂ
ನ.2 ರಿಂದ ಕಲರವ | ಹಕ್ಕಿ-ವನ್ಯ ಜೀವಿ – ಪಕೃತಿ ಛಾಯಾಚಿತ್ರ ಪ್ರದರ್ಶನ |
October 23, 2024
8:32 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group