ಸುಬ್ರಹ್ಮಣ್ಯ: ರಾಜ್ಯದ ಮಾತ್ರವಲ್ಲ ದೇಶದ ಪ್ರಮುಖ ಆರಾಧನಾ ಕೇಂದ್ರ ಕುಕ್ಕೆ ಸುಬ್ರಹ್ಮಣ್ಯ. ಜನರ ಧಾರ್ಮಿಕ ಶ್ರದ್ದಾಕೇಂದ್ರ. ಇಲ್ಲಿ ನಡೆಯುವ ಪ್ರತೀ ಘಟನೆಗಳೂ ಆಸ್ತಿಕರ ಮೇಲೆ ಪರಿಣಾಮ ಬೀರುತ್ತದೆ. ಅಂತಹದ್ದರಲ್ಲಿ ದೇವಸ್ಥಾನದ ಅರ್ಚಕರೊಬ್ಬರು ಲಾಕ್ಡೌನ್ ಸಂದರ್ಭ ಏಕಾಂಗಿಯಾಗಿ ಸಾಗುತ್ತಿದ್ದಾಗ ಪೊಲೀಸ್ ಸಿಬಂದಿ ಶಂಕರ್ ಸಂಸಿ ಎಂಬವರು ದಾರಿಯಲ್ಲಿ ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ ಎನ್ನುವುದು ರಾಜ್ಯಾದ್ಯಂತ ಸಂಚಲನ ಉಂಟುಮಾಡಿತ್ತು. ಆದರೆ ಈ ಘಟನೆ ನಡೆದ 24 ಗಂಟೆಯಲ್ಲಿ ಹಲ್ಲೆ ನಡೆಸಿದ ಪೊಲೀಸ್ ಸಿಬಂದಿ ಅಮಾನತು ಮಾಡಲಾಗಿದೆ. ಅದರ ಜೊತೆಗೆ ಇದಕ್ಕೆ ಕುಮ್ಮಕ್ಕು ನೀಡಿದ ಆರೋಪದ ಮೇರೆಗೆ ಗೃಹರಕ್ಷಕ ವೀಕೇಶ್‌ನನ್ನು ಅಮಾನತುಗೊಳಿಸಿ ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಮುರಳಿ ಮೋಹನ್ ಚೂಂತಾರು ಆದೇಶಿಸಿದ್ದಾರೆ.
ಲಾಕ್ಡೌನ್ ಆದೇಶ ಮಾಡಿರುವ ಪ್ರಮುಖ ಉದ್ದೇಶ ಜನರು ಗುಂಪು ಸೇರಬಾರದು ಹಾಗೂ ಸ್ಪರ್ಶವಾಗಬಾರದು, ವೈರಸ್ ಹರಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿ 3 ಬಾರಿ ಭಾಷಣದಲ್ಲೂ ಸೂಚನೆ ನೀಡಿದ್ದಾರೆ. ಆದರೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಏಕಾಂಗಿಯಾಗಿ ತೆರಳುತ್ತಿದ್ದ ಸಜ್ಜನ ಅರ್ಚಕರ ಮೇಲೆ ಪೊಲೀಸ್ ಸಿಬಂದಿ ಹಲ್ಲೆ ನಡೆಸಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ತಕ್ಷಣವೇ ಘಟನೆಯನ್ನು ವಿಪ್ರ ಸಂಘಟನೆ ಖಂಡಿಸಿತು. ಇದರ ಜೊತೆಗೆ ದೇವಸ್ಥಾನದ ಅಧಿಕಾರಿಗಳು, ಸಿಬಂದಿಗಳು ಸ್ಪಂದನೆ ನೀಡಿ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಜೊತೆಗೆ ಆಸ್ಥಿಕ ಬಂಧುಗಳು, ವಿವಿಧ ಸಂಘಟನೆಯ ಪ್ರಮುಖರು, ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀಗಳು , ಜನಪ್ರತಿನಿಧಿಗಳ ಸಹಿತ ಎಲ್ಲರೂ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿ ತಕ್ಷಣವೇ ಕ್ರಮಕ್ಕೆ ಒತ್ತಾಯಿಸಿದ್ದರು.
ಇದೆಲ್ಲಾ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯದ ಪೂಜೆಗೆ ತೆರಳುತ್ತಿದ್ದ ಅರ್ಚಕರಿಗೆ ಹಲ್ಲೆ ಮಾಡಿದ ಪೊಲೀಸ್ ಸಿಬಂದಿ ಹಾಗೂ ಕುಮ್ಮಕ್ಕು ನೀಡಿದ ಗೃಹರಕ್ಷಕ ದಳದ ಸಿಬಂದಿಯನ್ನು 24 ಗಂಟೆಯೊಳಗೆ ಅಮಾನತು ಮಾಡಲಾಗಿದೆ. ಲಾಕ್ಡೌನ್ ಪರಿಸ್ಥಿತಿಯಲ್ಲೂ , ವಿವಿಧ ಒತ್ತಡದ ನಡುವೆಯೂ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡಿದ್ದಾರೆ. ಇದು ಕುಕ್ಕೆ ಸುಬ್ರಹ್ಮಣ್ಯನ ಮಹಿಮೆಯೇ ಎಂದು ಭಕ್ತರು ಮಾತನಾಡುತ್ತಾರೆ.
ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಗಳಲ್ಲಿ…
ಕೃಷಿಕರಿಗೆ ಹವಾಮಾನದ ಬದಲಾವಣೆಯ ಮಾಹಿತಿ ಇರುವುದಿಲ್ಲ. ಇದಕ್ಕಾಗಿ ಡಿಸೀಸ್ ಫಾರ್ಕಾಸ್ಟ್ ಅಂದರೆ ಯಾವ…
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯ ಅನ್ವಯ, ಉತ್ತರ ಕನ್ನಡ…
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೋಡ ಮಿಶ್ರಿತ ಬಿಸಿಲಿನ ವಾತಾವರಣದ ಮುನ್ಸೂಚನೆ…
ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…
ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…