ದುಬೈ: ಬಡಹೆಣ್ಣು ಮಕ್ಕಳ ವಿವಾಹಕ್ಕೆ ಸಹಕಾರ, ಸೂರಿಲ್ಲದ ನಿರ್ಗತಿಕ ಕುಟುಂಬ ಕ್ಕೆ ಆಶ್ರಯ ಕಲ್ಪಿಸುವ, ಶೈಕ್ಷಣಿಕ ಪ್ರೋತ್ಸಾಹ , ಹೀಗೆ ಹಲವಾರು ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಪೆರುವಾಯಿ ನಾಡಿನ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಲ್ಲಿ ನಿರಂತರ ಸೇವೆ ಗಯ್ಯುತ್ತಿರುವ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಿರುವ ಪೆರುವಾಯಿ ನಾಡಿನ ಅನಿವಾಸಿ ಭಾರತೀಯ ಸಹೃದಯಗಳು ಒಟ್ಟು ಸೇರಿಕೊಂಡು ರಚಿಸಿದ ಅಲ್ ಅಮೀನ್ ಪೆರುವಾಯಿ ಯುಎಇ ಸಮಿತಿಗೆ ಐದು ವರುಷ ತುಂಬಿದ ಸಂಭ್ರಮ ಹೊಸ್ತಿಲಲ್ಲಿದೆ .
ಸಮಿತಿಯ ವಾರ್ಷಿಕ ಮಹಾ ಸಂಭ್ರಮ ಹಾಗೂ ಈದ್ ಸಂಭ್ರಮ ಶಾರ್ಜಾ ಆಡಿಟೋರಿಯಂ ದುಬೈನಲ್ಲಿ ನಡೆಯಿತು . ಸಮಿತಿಯ ಹಮೀದ್ ಬದಿಯಡ್ಕ ಪೆರುವಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು . ಹಮೀದ್ ಕುಂಬ್ಳೆ ಪೆರುವಾಯಿ, ಅಝೀಜ್ ಮುಚ್ಚಿರಪದವು , ಶಾಫಿ ಮುಚ್ಚಿರಪದವು ,ಶಾಫಿ ಕಾನ ಹಾಗೂ ಮೂಸ ಸೇನೆರಪಾಲು ಮುಖ್ಯ ಅತಿಥಿಗಳಾಗಿದ್ದರು .
ಮಾನವೀಯ ಮೌಲ್ಯಗಲಿಗೆ ಪ್ರೋತ್ಸಾಹಿಸುತ್ತ, ಸಮಿತಿಯು ಮುಂದಿನ ಒಂದು ವರ್ಷ ದಲ್ಲಿ ಕೈಗೊಳ್ಳಬೇಕಾದ ಸಮುದಾಯ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳ ಕ್ರಿಯಾ ಯೋಜನೆಯನ್ನು ಈ ಸಂದರ್ಭದಲ್ಲಿ ತಯಾರಿಸಲಾಯಿತು.
ನೂತನ ಪದಾಧಿಕಾರಿಗಳ ಆಯ್ಕೆ :
2019-20 ನೇ ಸಾಲಿನ ನೂತನ ಅಧ್ಯಕ್ಷರಾಗಿ ರಶೀದ್ ಸೇನೆರಪಾಲು , ಗೌರವಾಧ್ಯಕ್ಷ ರಾಗಿ ಹಮೀದ್ ಬದಿಯಡ್ಕ, ಉಪಾಧ್ಯ ಕ್ಷ ರಾಗಿ ರಫೀಕ್ ಕದ್ರಡ್ಕ , ಪ್ರದಾನ ಕಾರ್ಯ ದರ್ಶಿಯಾಗಿ ಸಮೀರ್ ದರ್ಖಾಸ್ ಪೆರುವಾಯಿ, ಜೊತೆ ಕಾರ್ಯದರ್ಶಿ ಯಾಗಿ ರಿಯಾಜ್ ಮುಚ್ಚಿರಪದವು ಹಾಗೂ ಹನೀಫ್ ಕಡಂಬಿಲ ಹಾಗೂ ಕೋಶಾಧಿಕಾರಿ ಯಾಗಿ ಶರೀಫ್ ಮುಚ್ಚಿರಪದವು ಇವರುಗಳು ಆಯ್ಕೆ ಗೊಂಡು ,ಕಾರ್ಯಕಾರಿ ಸಮಿತಿಗಳನ್ನು ಒಳಗೊಂಡ ಕಮಿಟಿ ರಚನೆ ಗೊಂಡಿತು .
ರಶೀದ್ ಪೆರುವಾಯಿ ಸ್ವಾಗತಿಸಿ , ಸಿದ್ದೀಕ್ ಕಾನ ಧನ್ಯವಾದ ಗೈದರು . ಅಶ್ರಫ್ ಮುಚಿರಪದವು ಕಾರ್ಯಕ್ರಮ ನಿರೂಪಿಸಿದರು.
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel