ಸುಳ್ಯ: ಕೇಂದ್ರ ಸರಕಾರವು ತನ್ನ ಅವೈಜ್ಞಾನಿಕ ತೆರಿಗೆ ವಸೂಲಾತಿಯ ನೀತಿಯಿಂದ ಈ ತನಕ ನಮ್ಮನ್ನು ಆಳಿದ ಯಾವ ಸರಕಾರವು ವಿಧಿಸದ ತೆರಿಗೆಯನ್ನು ಸಹಕಾರಿ ಸಂಘಗಳ ವಹಿವಾಟಿನ ಮೇಲೆ ಹೇರಿದರ ಪರಿಣಾಮ ಇನ್ನು ಮುಂದೆ ಎಲ್ಲಾ ಸಹಕಾರಿ ಸಂಘಗಳು ತಮ್ಮ ವಹಿವಾಟಿನ ಲಾಭದ ಮೇಲೆ ಶೇಕಡಾ 33% ತೆರಿಗೆಯನ್ನು ಹೇರಿರುವುದು ಅತ್ಯಂತ ಶೋಚನೀಯ ಮತ್ತು ಖಂಡನೀಯ ಕ್ರಮವಾಗಿರುತ್ತದೆ. ಇದರಿಂದ ಸಹಕಾರಿ ಸಂಘಗಳು ಅತಂತ್ರವಾಗುವ ಭೀತಿ ಇದೆ ಎಂದು ಕೆ.ಪಿ.ಸಿ.ಸಿ.ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ಹೇಳಿದ್ದಾರೆ.
ಈಗಾಗಲೇ ವರ್ಷವೊಂದಕ್ಕೆ ಲಕ್ಷ ಗಟ್ಟಲೆ ಆದಾಯ ತೆರಿಗೆ ಪಾವತಿಸುವಂತೆ ಎಲ್ಲಾ ಸಹಕಾರಿ ಸಂಘಗಳಿಗೂ ನೋಟಿಸು ಜಾರಿಯಾಗಿರುತ್ತದೆ. ಇದಕ್ಕೆ ಉದಾಹರಣೆ ಎಂಬಂತೆ ಸುಳ್ಯ ತಾಲೂಕಿನ ಒಂದು ಸಹಕಾರಿ ಬ್ಯಾಂಕ್‌ಗೆ 2017-18ರ ಸಾಲಿನ ವ್ಯವಹಾರದ ಮೇಲೆ ಸುಮಾರು 80ಲಕ್ಷದಷ್ಟು ವರ್ಷವೊಂದಕ್ಕೆ ಆದಾಯ ತೆರಿಗೆ ಕಟ್ಟಲು ನೋಟಿಸು ನೀಡಿರುವುದು ಬಹಳ ಆತಂಕವನ್ನು ಸೃಷ್ಠಿಸಿದೆ. ವಾಸ್ತವವಾಗಿ ದುಡಿದ ಸಂಘದ ಸದಸ್ಯರಿಗೆ ಲಾಭಾಂಶದಲ್ಲಿ ಕೇವಲ 25% ಮಾತ್ರ ಡಿವಿಡೆಂಟ್ ನೀಡಲು ಅವಕಾಶವಿದ್ದರೆ ದುಡಿಯದ ಸರಕಾರಕ್ಕೆ 33% ಆದಾಯ ತೆರಿಗೆ ಕಟ್ಟಬೇಕಾಗಿರುವುದು ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದರು.
ದ.ಕ. ಜಿಲ್ಲೆಯಲ್ಲಿ ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕ್‌ಗಳನ್ನು ಮೀರಿಸುವ ರೀತಿಯಲ್ಲಿ ಪ್ರತೀ ಗ್ರಾಮ ಅಥವಾ ಎರಡು, ಮೂರು ಗ್ರಾಮಗಳಿಗೆ ಒಂದರಂತೆ ಸಹಕಾರ ಸಂಘಗಳನ್ನು ಆಯಾ ಊರಿನ ಹಿರಿಯರ ನೇತೃತ್ವದಲ್ಲಿ ಕಟ್ಟಲಾಗಿದೆ. ನಮ್ಮ ಜಿಲ್ಲೆಯಲ್ಲೇ ಹುಟ್ಟಿದ್ದ ವಿಜಯಾ ಬ್ಯಾಂಕ್, ಕೆನರಾ ಬ್ಯಾಂಕ್, ಕಾರ್ಪೋರೇಶನ್ ಬ್ಯಾಂಕ್ ನಷ್ಟದಲ್ಲಿರುವ ಬ್ಯಾಂಕ್‌ಗಳೊಂದಿಗೆ ವಿಲೀನಗೊಂಡಿರುತ್ತವೆ. ಎಸ್.ಬಿ.ಐ ಬ್ಯಾಂಕ್‌ನೊಂದಿಗೆ ಎಸ್.ಬಿ.ಯಂ ವಿಲೀನಗೊಂಡಿರುವುದನ್ನು ಕಂಡಿದ್ದೇವೆ. ಈ ದೇಶದಲ್ಲಿ ಆರ್ಥಿಕ ಹಿಂಜರಿತದಿಂದ ಮುಂದೇನಾಗಬಹುದು ಎಂಬ ಆತಂಕ ಎಲ್ಲಾ ನಾಗರಿಕರಲ್ಲಿ ಮನೆ ಮಾಡಿದೆ. ದೇಶದಲ್ಲಿ ಇಂತಹ ಹದಗೆಟ್ಟ ವಾತಾವರಣ ಇದ್ದರೂ ಈವರೆಗೆ ನಮ್ಮ ಸರಕಾರಿ ಸಂಘಗಳು ಯಾವುದೇ ಅಡೆತಡೆ ಇಲ್ಲದೆ ತಮ್ಮ ವ್ಯವಹಾರವನ್ನು ಮಾಡಿಕೊಂಡು ಬಂದಿದ್ದು, ರೈತಾಪಿ ವರ್ಗದವರ ಆಶಾಕಿರಣದಂತಿದೆ. ಆದರೆ ಇದೀಗ ಕೇಂದ್ರ ಸರಕಾರವು ತನ್ನ ಅವೈಜ್ಞಾನಿಕ ತೆರಿಗೆ ವಸೂಲಾತಿಯ ನೀತಿಯಿಂದ ಈ ತನಕ ನಮ್ಮನ್ನು ಆಳಿದ ಯಾವ ಸರಕಾರವು ವಿಧಿಸದ ತೆರಿಗೆಯನ್ನು ಸಹಕಾರಿ ಸಂಘಗಳ ವಹಿವಾಟಿನ ಮೇಲೆ ಹೇರಿದರ ಪರಿಣಾಮ ಇನ್ನು ಮುಂದೆ ಎಲ್ಲಾ ಸಹಕಾರಿ ಸಂಘಗಳು ತಮ್ಮ ವಹಿವಾಟಿನ ಲಾಭದ ಮೇಲೆ ಶೇಕಡಾ 33% ತೆರಿಗೆಯನ್ನು ಹೇರಿರುವುದು ಅತ್ಯಂತ ಶೋಚನೀಯ ಮತ್ತು ಖಂಡನೀಯ ಕ್ರಮವಾಗಿರುತ್ತದೆ. ಈಗಾಗಲೇ ವರ್ಷವೊಂದಕ್ಕೆ ಲಕ್ಷ ಗಟ್ಟಲೆ ಆದಾಯ ತೆರಿಗೆ ಪಾವತಿಸುವಂತೆ ಎಲ್ಲಾ ಸಹಕಾರಿ ಸಂಘಗಳಿಗೂ ನೋಟಿಸು ಜಾರಿಯಾಗಿರುತ್ತದೆ.
ಹಾಗಾಗಿ ಬಿ.ಜೆ.ಪಿ ಸರಕಾರಗಳು ಈ ದೇಶ ಹಾಗೂ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರುವ ಮೊದಲು ಜನ ಸಾಮಾನ್ಯರಿಗೆ ಅಚ್ಚೇ ದಿನ ಬರುತ್ತದೆ ಅಂತ ಹೇಳಿದ್ದರು. ಈಗ ಜನಸಾಮಾನ್ಯ ಉಪಯೋಗಿಸುತ್ತಿರುವ ಆಹಾರ ಸಾಮಾಗ್ರಿ, ದಿನಬಳಕೆ ವಸ್ತು, ಔಷಧಿ, ಪೆಟ್ರೋಲ್, ಸಾರಿಗೆ, ತರಕಾರಿ, ಹಾಲು, ಹೀಗೆ ಪ್ರತಿಯೊಂದು ವಸ್ತುಗಳು ದುಬಾರಿ ಆಗಿ ಆರ್ಥಿಕ ಸಂಕಷ್ಟದಿಂದ ಜನ ಸಾಮಾನ್ಯ ಬದುಕು ಸುಮಾರು 10-15ವರ್ಷಗಳಷ್ಟು ಹಿಂದಕ್ಕೆ ಹೋಗಿರುವುದು ಎಲ್ಲರಿಗೂ ಅರಿವಾಗಿದೆ. ಈಗ ಇದರ ಜೊತೆ ಜೊತೆಗೆ ಆರ್ಥಿಕವಾಗಿ ಸದೃಢವಾಗಿದ್ದ ಹಣಕಾಸು ಸಂಸ್ಥೆಗಳು ಕೂಡಾ ಒಂದೊಂದಾಗಿ ಅಧಿಪತನದಂಚಿಗೆ ಸಾಗುತ್ತಿರುವುದು ಅತ್ಯಂತ ಕಳವಳಕಾರಿಯಾದ ಸಂಗತಿಯಾಗಿದೆ.
ಹಾಗಾಗಿ ತಕ್ಷಣ ನಮ್ಮ ಸಹಕಾರಿ ಸಂಘಗಳ ಮುಖ್ಯಸ್ಥರು ಎಚ್ಚೆತ್ತುಕೊಂಡು ಕೇಂದ್ರ ಸರಕಾರ ಸಹಕಾರಿ ಸಂಘಗಳ ಮೇಲೆ ಹೇರಲಾದ ಆದಾಯ ತೆರಿಗೆ ಕ್ರಮವನ್ನು ಹಿಂತೆಗೆದುಕೊಳ್ಳುವರೇ ಒತ್ತಾಯಿಸುವುದು ಅನಿವಾರ್ಯವಾಗಿದೆ. ಇಲ್ಲದಿದ್ದಲ್ಲಿ ನಮ್ಮೆಲ್ಲಾ ಸಹಕಾರ ಸಂಘಗಳು ಕೂಡಾ ಆರ್ಥಿಕ ಅಧಪತನದತ್ತ ಸಾಗುವುದರಲ್ಲಿ ಯಾವುದೇ ಸಂಶಯ ಬೇಡ ಎಂಬುದಾಗಿ ಎಂದು ಅವರು ಹೇಳಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆ.1 ರಂದು ಕೇಂದ್ರ ಬಜೆಟ್ ಮಂಡಿಸಲಿದ್ದು,…
ಮಾನಸಿಕ ವಿಕಲಚೇತನರಾಗಿ ಉಡುಪಿಯಲ್ಲಿ ರಸ್ತೆ ಬದಿ ತಿರುಗಾಡುತ್ತಿದ್ದ ಬಿಹಾರದ ರಮಾದೇವಿ ಅವರು ವರ್ಷದ…
ಮಣ್ಣಿನಲ್ಲಿ ಬಿದ್ದ ಬೀಜವು ಜೀವಂತಿಕೆಯಿಂದ ತನ್ನ ಬೇರುಗಳನ್ನು ಸಿಕ್ಕಿದ ಬಿರುಕುಗಳಲ್ಲಿ ಹಬ್ಬಿಸುತ್ತ ತೆವಳುತ್ತ…
ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ…
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…