ಶಾಲಾ -ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಗಮನಿಸಲೇಬೇಕಾದ ಅಂಶ ಇದು. ಮೊಬೈಲ್, ಸೋಶಿಯಲ್ ಮೀಡಿಯಾ ಬಳಕೆ ಮಾಡುವ ಮಂದಿ ಎಚ್ಚರದಿಂದ ಬಳಕೆ ಮಾಡಿರಿ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಾಲೇಜೊಂದರ ವಿದ್ಯಾರ್ಥಿ ಗಳು ಸಾಮೂಹಿಕ ಅತ್ಯಾಚಾರ ದಲ್ಲಿ ತೊಡಗಿದ ವೀಡಿಯೊ ಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಘಟನೆಯ ಆಧಾರದ ಮೇಲೆ ಯಾವುದೇ ಅಶ್ಲೀಲ ವಾದಂತಹ ವೀಡಿಯೊಗಳು ,ಯಾವುದೇ ವ್ಯಕ್ತಿ ಯನ್ನ ತೇಜೊವದೆ ಮಾಡುವಂತಹ ವೀಡಿಯೋ ಗಳು ಧರ್ಮ ಹಾಗೂ ರಾಜಕೀಯ ಕ್ಕೆ ಸಂಬಂಧ ಪಟ್ಟಂತೆ ಮಾನಹಾನಿ ಕಾರಿ ಮಾಡುವಂತಹ ವೀಡಿಯೋ ,ಸಂದೇಶಗಳು ಹರಿದಾಡಿದರೆ “INFORMATION TECHNOLOGY ACT” ಪ್ರಕಾರ 3 ವರ್ಷ ಕ್ಕೂ ಮೇಲ್ಪಟ್ಟು ಜೈಲು ಹಾಗೂ 10 ಲಕ್ಷ ದಂಡವನ್ನ ವಿಧಿಸಬೇಕಾಗುತ್ತದೆ. ಅಲ್ಲದೆ ಅಶ್ಲೀಲ ವಾಗಿ ಬಂದಂತಹ ವೀಡಿಯೊ ಗಳು ಅಥವಾ ಮೆಸೇಜ್ ಗಳು ಆಗಿರಲಿ ಅದರ ಗುಣಮಟ್ಟ ನೋಡದೆ ,ಸತ್ಯಾಸತ್ಯತೆ ತಿಳಿಯದೆ ರವಾನೆ ಮಾಡುವುದರಿಂದ ಕೇಸಿಗೆ ಒಳಗಾಗುತ್ತೀರಿ.ಯಾರು ಸಂದೇಶ ರವಾನಿಸುತ್ತೀರೊ ಅವರ ಭವಿಷ್ಯ ದ ಮೇಲೂ ಪರಿಣಾಮ ಬೀರುತ್ತದೆ ಹಾಗೂ ನಿಮ್ಮ ಮನೆಯ ಘನತೆಗೂ ಕಪ್ಪು ಚುಕ್ಕೆಯಾಗಿದೆ ಇದಕ್ಕೆ ಕಾರಣವೇನೂ ಸಿಗಲ್ಲ. ಅಲ್ಲದೆ “IT ACT” ಪ್ರಕಾರ ನಿಮ್ಮ-ನಿಮ್ಮ ಮೊಬೈಲ್ ನಲ್ಲಿ ಇಂತಹ ಅಶ್ಲೀಲ ವಾದ ಸಂದೇಶ ಗಳು ವೀಡಿಯೋ ಗಳು ಬಂದು ನಿಮ್ಮ ಮೊಬೈಲ್ ನಲ್ಲಿ ಉಳಿಕೆಯಾಗಿದ್ದರೆ ಅದಕ್ಕೆ ನೀವು ಹೊಣೆಯಾಗುತ್ತೀರಿ.ತಕ್ಷಣ ಡಿಲೀಟ್ ಮಾಡುವಲ್ಲಿ ನೀವು ಪ್ರವೃತರಾಗಬೇಕು ಕಾಲೇಜೊಂದರ ವಿದ್ಯಾರ್ಥಿ ಗಳು ಸೇರಿ ಸಾಮೂಹಿಕ ಅತ್ಯಾಚಾರ ಮಾಡುವ ವೀಡಿಯೋಗಳು ,ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು,ಅದು ಕಾನೂನಿನ ಪ್ರಕಾರ ಘೋರ ಅಪರಾಧ ವಾಗಿರುತ್ತದೆ.ಈ ಪ್ರಕರಣ ಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ವೀಡಿಯೋ ಹರಿದಾಡಿದವರನ್ನು ಈಗಾಗಲೇ ಬಂಧಿಸಲಾಗುತ್ತಿದೆ.ಆದರೂ ನಿರಂತರವಾಗಿ ಈಗಲೂ ಹರಿದಾಡುತ್ತಿರುವ ವಿಷಯವು ಪೋಲಿಸ್ ಇಲಾಖೆಯ ಗಮನಕ್ಕೆ ಬಂದಿದ್ದು ಅಂತಹವರ ಮೇಲೆ ನಿಗಾ ಗಮನಹರಿಸುತ್ತಿದೆ.