ಮಂಗಳೂರು : ಅಸಂಘಟಿತ ವಲಯದ ಕಾರ್ಮಿಕರಾದ ಖಾಸಗಿ ವಾಣಿಜ್ಯ ವಾಹನ ಚಾಲಕರು, ಹಮಾಲರು, ಟೈಲರುಗಳು, ಚಿಂದಿ ಆಯುವವರು, ಗೃಹಕಾರ್ಮಿಕರು, ಮೆಕಾನಿಕ್‍ಗಳು, ಅಗಸರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು, ಹಾಗೂ ಮಂಡಕ್ಕಿ ಭಟ್ಟಿ ಕಾರ್ಮಿಕರುಗಳಿಗೆ ಮಾರ್ಚ್ 1 ರಂದು ಶ್ರಮ ಸಮ್ಮಾನ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
Advertisement
ಅರ್ಹ ಕಾರ್ಮಿಕರು ದಾಖಲೆಯೊಂದಿಗೆ ಅರ್ಜಿ ನಮೂನೆ 5ನ್ನು ಕಾರ್ಮಿಕ ಅಧಿಕಾರಿ ಕಚೇರಿಯಿಂದ ಪಡೆದುಕೊಂಡು ಕಾರ್ಮಿಕರ ಬಳಿ ಇರುವ ಸ್ಮಾರ್ಟ್ ಕಾರ್ಡ್, ವಿದ್ಯಾರ್ಹತೆಯ ಪ್ರಮಾಣ ಪತ್ರ, ಸರ್ವಿಸ್ ಸರ್ಟಿಫಿಕೇಟ್, ಪೋಲಿಸ್ ಇಲಾಖೆಯಿಂದ ಯಾವುದೇ ಪ್ರಕರಣ ಇರುವುದಿಲ್ಲವೆಂದು ಮೂಲ ಪ್ರಮಾಣ ಪತ್ರವನ್ನು, ವೃತ್ತಿಯ ಬಗ್ಗೆ ತರಬೇತಿ ಪಡೆದ ಪ್ರಮಾಣ ಪತ್ರಗಳಿದ್ದಲ್ಲಿ ಲಗತ್ತಿಸಿ ಫೆಬ್ರವರಿ 18 ರೊಳಗೆ ಕಾರ್ಮಿಕ ಅಧಿಕಾರಿ, ದ.ಕ ಉಪವಿಭಾಗ-1, ಮಂಗಳೂರು, ಭಾರತ್‍ಬೀಡಿ ಎದುರು, ಬಂಟ್ಸ್ ಹಾಸ್ಟೇಲ್, ಮಂಗಳೂರು-575003 ಕಚೇರಿಗೆ ಸಲ್ಲಿಸಬೇಕೆಂದು ಮಂಗಳೂರು, ದ.ಕ ಜಿಲ್ಲೆ, ಕಾರ್ಮಿಕ ಅಧಿಕಾರಿ ಪ್ರಕಟಣೆ ತಿಳಿಸಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement