Advertisement
ಸುದ್ದಿಗಳು

ಅಸಹಕಾರ ಚಳವಳಿಯ ಇಫೆಕ್ಟ್ :ಶಿಕ್ಷಕರ ದಿನಾಚರಣೆಗೆ ಜನಪ್ರತಿನಿಧಿಗಳ ಗೈರು..!

Share

ಸುಳ್ಯ: ಶಾಸಕ ಎಸ್‌. ಅಂಗಾರ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಸುಳ್ಯ ಬಿಜೆಪಿ ಘೋಷಿಸಿರುವ ಅಸಹಕಾರ ಚಳವಳಿಯ ಕಾರಣದಿಂದ  ಸುಳ್ಯ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯ ವೇದಿಕೆ ಮಾತ್ರ ಖಾಲಿ ಖಾಲಿಯಾಗಿತ್ತು. ಅಸಹಕಾರ ಚಳವಳಿ ಘೋಷಿಸಿದ ಬಳಿಕ ಬಿಜೆಪಿ ನಾಯಕರು, ಕೆಲವು ಜನಪ್ರತಿನಿಧಿಗಳು ಬೆಂಗಳೂರಿನಲ್ಲಿ ನಡೆದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿದ್ದರು. ಆದರೆ ತಾಲೂಕಿನಲ್ಲಿ ಜನಪ್ರತಿನಿಧಿಗಳ ಅಸಹಾಕಾರ ಮುಂದುವರಿದಿದೆ.

ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಬೇಕಿದ್ದ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸನ್ಮಾನ ನೆರವೇರಿಸಬೇಕಿದ್ದ ಜಿಲ್ಲಾ ಪಂಚಾಯತ್ ಸದಸ್ಯರಾದ ಎಸ್.ಎನ್.ಮನ್ಮಥ, ಹರೀಶ್ ಕಂಜಿಪಿಲಿ, ಆಶಾ ತಿಮ್ಮಪ್ಪ, ಪುಷ್ಪಾವತಿ ಬಾಳಿಲ ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ. ಸಮಾರಂಭಕ್ಕೆ ಪ್ರತಿ ಬಾರಿ ಆಗಮಿಸುತ್ತಿದ್ದ ಇತರ ಬಿಜೆಪಿ ಜನಪ್ರತಿನಿಧಿಗಳು ಕೂಡ ಭಾಗವಹಿಸಲಿಲ್ಲ. ಆದರೆ ಇದ್ಯಾವುದನ್ನೂ ಲೆಕ್ಕಿಸದೆ ಶಾಸಕ ಎಸ್.ಅಂಗಾರ ಮಾತ್ರ ಕಾರ್ಯಕ್ರ‌ಮಕ್ಕೆ ಆಗಮಿಸಿ ಉದ್ಘಾಟನೆ ನೆರವೇರಿಸಿ ಅಧ್ಯಕ್ಷತೆ ವಹಿಸಿ ಅಧ್ಯಕ್ಷೀಯ ಭಾಷಣ ಮಾಡಿ ತೆರಳಿದರು.

ಕಾರಣಗಳು ಯಾವುದೇ ಇರಬಹುದು, ಕಾರಣಗಳು ನೂರು ಇರಬಹುದು ಆದರೆ ಶಿಕ್ಷಕರ ಕಾರ್ಯಕ್ರಮಕ್ಕೆ ಜನಪ್ರತಿನಿಧಿಗಳು ಈ ರೀತಿ ಸಾಮೂಹಿಕವಾಗಿ ಗೈರು ಹಾಜರಾಗಿರುವುದು ಮಾತ್ರ ಒಪ್ಪುವಂತದಲ್ಲ ಎಂಬ ಅಭಿಪ್ರಾಯ ವೇದಿಕೆಯಿಂದ ಮತ್ತು ಸಭಾಂಗಣದಿಂದ ಕೇಳಿ ಬಂತು.

“ಕಾರಣ ಏನೇ ಇದ್ದರೂ, ಶಿಕ್ಷಕರನ್ನು ಗೌರವಿಸುವ ರೀತಿ ಇದಲ್ಲ” ಎಂಬ ಅಭಿಪ್ರಾಯವನ್ನು ಸಮಾರಂಭದಲ್ಲಿ ಪ್ರಧಾನ ಉಪನ್ಯಾಸ ಮಾಡಿದ ಪತ್ರಕರ್ತ ದುರ್ಗಾಕುಮಾರ್ ನಾಯರ್ ಕೆರೆ ವ್ಯಕ್ತಪಡಿಸಿದರು.

ಸತ್ಯಕ್ಕೆ, ಪ್ರಮಾಣಿಕತೆಗೆ ಬೆಲೆ ಇದೆ ಎಂದು ನಂಬಿದ್ದೇನೆ – ಅಂಗಾರ

ಸಚಿವ ಸ್ಥಾನ ತಪ್ಪಿದ ಮತ್ತು ಬಳಿಕದ ರಾಜಕೀಯ ಬೆಳವಣಿಗೆಯ ನಂತರ ಸುಳ್ಯದಲ್ಲಿ ನಡೆದ ಪ್ರಮುಖ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಿದ ಶಾಸಕ ಅಂಗಾರರು ಸಚಿವ ಸ್ಥಾನ ತಪ್ಪಿ ಹೋಗಿರುವ ಬಗ್ಗೆ ನೇರವಾಗಿ ಯಾವುದೇ ಪ್ರಸ್ತಾಪ ಮಾಡಲಿಲ್ಲ. ಸತ್ಯಕ್ಕೆ, ಪ್ರಾಮಾಣಿಕತೆಗೆ ಒಂದಲ್ಲಾ ಒಂದು ದಿನ ಬೆಲೆ ಸಿಕ್ಕಿಯೇ ಸಿಗುತ್ತದೆ ಎಂಬ ನಂಬಿಕೆವಿದೆ. ಆ ನಂಬಿಕೆಯ ಆಧಾರದಲ್ಲಿಯೇ ಕೆಲಸ ಮಾಡಿದ್ದೇನೆ. ಮುಂದೆಯೂ ಆ ನಂಬಿಕೆಯ ಆಧಾರದಲ್ಲಿಯೇ ಕೆಲಸವನ್ನು ಮುಂದುವರಿಸುತ್ತೇನೆ ಎಂದಷ್ಟೇ ತಮ್ಮ ಭಾಷಣದಲ್ಲಿ ಹೇಳಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮ್ಯಾನ್ಮಾರ್ ಅಡಿಕೆ ಕಳ್ಳಸಾಗಣೆ ವಿರುದ್ಧ ಮಿಜೋರಾಂ ಸರ್ಕಾರದ ಕಠಿಣ ಕ್ರಮ : 468 ಪ್ರಕರಣ ದಾಖಲು

ಮ್ಯಾನ್ಮಾರ್‌ನಿಂದ ಅಕ್ರಮ ಅಡಿಕೆ ಕಳ್ಳಸಾಗಣೆ ವಿರುದ್ಧ ಮಿಜೋರಾಂ ಸರ್ಕಾರ ಜಾರಿ ಕ್ರಮವನ್ನು ಬಿಗುಗೊಳಿಸಿದೆ.…

1 hour ago

ಸುಸ್ಥಿರ ಕೃಷಿ ಮತ್ತು ‘ತ್ಯಾಜ್ಯದಿಂದ ಸಂಪತ್ತು’ ಮಾದರಿಗೆ ಐಸಿಎಆರ್ ಸಭೆಯಲ್ಲಿ ಒತ್ತು

ಕೊಲ್ಕತ್ತಾದಲ್ಲಿ ನಡೆದ ಸಭೆಯಲ್ಲಿ ಸೆಣಬು ವಲಯ ಸುಧಾರಣೆ, ಸುಸ್ಥಿರ ಕೃಷಿ ಹಾಗೂ ಮೀನುಗಾರಿಕೆ…

2 hours ago

ಹೋಳಿ ಹಬ್ಬ: ಪ್ರಾಣಿ-ಪಕ್ಷಿಗಳಿಗೆ ಹಾನಿಯಾಗದಂತೆ ಆಚರಿಸಿ – ಮಂಡಳಿ ಮನವಿ

ಹೋಳಿ ಹಬ್ಬದ ಸಂದರ್ಭದಲ್ಲಿ ಪ್ರಾಣಿ ಮತ್ತು ಪಕ್ಷಿಗಳಿಗೆ ಹಾನಿಯಾಗದಂತೆ ಆಚರಿಸಲು ಭಾರತೀಯ ಪ್ರಾಣಿ…

3 hours ago

ಅಡಿಕೆ ಮಾರುಕಟ್ಟೆ ಸುದ್ದಿ | ಅಡಿಕೆ ಧಾರಣೆ ಇಳಿಕೆಯಿಂದ ಸ್ಥಿರತೆಯತ್ತ ಮುಂದುವರಿಕೆ

ದಕ್ಷಿಣ ಕನ್ನಡ ಮತ್ತು ಮಲೆನಾಡು ಭಾಗದ ಕೃಷಿ ಮಾರುಕಟ್ಟೆಯಲ್ಲಿ ಸಹಜ ಸ್ಥಿತಿಯಲ್ಲಿ ಕಂಡುಬಂದಿದೆ.…

10 hours ago

2030ರೊಳಗೆ 5 ಟ್ರಿಲಿಯನ್ ಆರ್ಥಿಕತೆ ಮೀರಿದ ರಾಷ್ಟ್ರವಾಗಲಿದೆ ಭಾರತ

2030ರೊಳಗೆ ಭಾರತ 5 ಟ್ರಿಲಿಯನ್ ಆರ್ಥಿಕತೆಯನ್ನು ಮೀರುತ್ತದೆ ಎಂದು ಪ್ರಲ್ಹಾದ ಜೋಶಿ ವಿಶ್ವಾಸ…

14 hours ago

ರೈತರ ಹಿತಕ್ಕಾಗಿ ಎರಡು ಮಹತ್ವದ ಸುಧಾರಣೆಗಳು | ಹೊಸ ಬೀಜ ಕಾಯ್ದೆ, ಪರಿಷ್ಕೃತ ಕೀಟನಾಶಕ ಕಾಯ್ದೆ ಜಾರಿಗೆ ಕೇಂದ್ರ ಸಿದ್ಧತೆ

ರೈತರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಹೊಸ ಬೀಜ ಕಾಯ್ದೆ ಮತ್ತು ಪರಿಷ್ಕೃತ ಕೀಟನಾಶಕ…

14 hours ago