ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಗ್ರಾಮದ ವಾಲಗದ ಕೇರಿ ನಿವಾಸಿ ಕೊರೋಡಿ ಎಂಬ ವೃದ್ದರೋವ೯ರು ಪಕ್ಷಪಾತ ರೋಗದಿಂದ ಸಂಪೂರ್ಣ ದೇಹದ ಒಂದು ಭಾಗದ ಶಕ್ತಿಯನ್ನು ಕಳೆದುಕೊಂಡು ಅಸಹಾಯಕರಾಗಿ ತನ್ನ ಗುಡಿಸಲಿನಲ್ಲಿ ಮಲಗಿದ್ದರು.
ಇದನ್ನರಿತ ಸ್ಥಳೀಯ ಸಮಾಜಸೇವಕ ರವಿಕ್ಕೆಪದವು ತನ್ನ ಮಿತ್ರರಾದ ಗೋಪಾಲ್ ಎಣ್ಣೆಮಜಲು, ಹರೀಶ್ ಇಂಜಾಡಿ, ಪ್ರಶಾಂತ್ ಭಟ್ ಮಾಣಿಲ, ಮೆಸ್ಕಾಂ ಇಲಾಖಾ ನೌಕರ ದೇವಪ್ಪ, ಅಚ್ಯುತ ಗೌಡ, ಜಯರಾಮ.ಎಚ್ ಎಲ್, ಮಹೇಶ್ ಕೂಗ೯ ಮುಂತಾದ ಗೆಳೆಯರನ್ನು ಸೇರಿಸಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಂಬುಲೆನ್ಸ್ ಮೂಲಕ ಪುತ್ತೂರಿನ ಸುಶ್ರುತ ಆಸ್ಪತ್ರೆಗೆ ಕಳುಹಿಸಿಲಾಯಿತು. ಈ ಬಗ್ಗೆ ಸುಶ್ರುತ ಆಸ್ಪತ್ರೆಯ ವೈದ್ಯರಿಗೆ ದೂರವಾಣಿ ಮೂಲಕ ಗ್ರಾಮದ ಅಸಹಾಯಕ ಬಡ ರೋಗಿ ಕೋರೋಡಿಯವರನ್ನೂ ಒಳರೋಗಿಯಾಗಿ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡುವಂತೆ ರವಿ ಕಕ್ಕೆಪದವು ಅವರು ತಿಳಿಸಿ ತನ್ನ ಮಾನವೀಯತೆ ಮೆರೆದಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel