Advertisement
ಸುದ್ದಿಗಳು

ಅಸಹಾಯಕ ಸ್ಥಿತಿಯಲ್ಲಿ ಪುನೀತ್ ಕೆದ್ಕಾರು , ದಾನಿಗಳಿಂದ ನೆರವಿಗೆ ಮೊರೆ

Share

ನರಿಮೊಗರು: ಈ ಯುವಕ ನೋಡಲು ಎಲ್ಲರಂತೆಯೇ ಸಾಮಾನ್ಯರಂತೆಯೇ ಕಾಣುತ್ತಾರೆ.ಆದರೆ ಇವರ ಸಮಸ್ಯೆ ಮಾತ್ರ ವಿಶೇಷವಾದದು.ಸುಮಾರು 27 ವರ್ಷ ಪ್ರಾಯದ ಈ ಯುವಕನ ಹೆಸರು ಪುನೀತ್,ನರಿಮೊಗರು ಗ್ರಾಮದ ಕೆದ್ಕಾರು ನಿವಾಸಿ ಮೋನಪ್ಪ ಗೌಡರ ಪುತ್ರ.

ಈ ಯುವಕನಿಗೆ ಹುಟ್ಟುವಾಗಲೇ ಮೂತ್ರಕೋಶ ಹಾಗೆ ಜನನಾಂಗವಿಲ್ಲದೆ ಇದ್ದವರು.ಹೊಕ್ಕಳು ಮೂಲಕ ಮೂತ್ರ ಹೋಗುತ್ತಿದ್ದು,ಶಸ್ತ್ರ ಚಿಕಿತ್ಸೆ ಬಳಿಕ ಹೊರಗಡೆ ಚೀಲ ಜೋಡಿಸಿ ಮೂತ್ರ ಹೋಗುವಂತೆ ಪುನೀತ್ ಆವರು 5 ವರ್ಷದ ಬಾಲಕನಾಗಿದ್ದಾಗ ಮಾಡಲಾಗಿತ್ತು.ಇದು ವೈದ್ಯಕೀಯ ಲೋಕದಲ್ಲೇ ವಿಶೇಷ ಪ್ರಕರಣವೆಂದು ಮಾಧ್ಯಮಗಳಲ್ಲಿ 22 ವರ್ಷಗಳ ಹಿಂದೆ ಭಾರಿ ಸುದ್ದಿಯಾಗಿತ್ತು.ಹೀಗೆ ಬಾಲ್ಯದಿಂದ ಈಗಿನವರೆಗೂ ಈತನ ಚಿಕಿತ್ಸೆಗಾಗಿ ಮನೆಯವರು ಲಕ್ಷಾಂತರ ವ್ಯಯ ಮಾಡಿದ್ದಾರೆ.

ಹಲವು ಬಾರಿ ಕಿಡ್ನಿ ಸಮಸ್ಯೆ ಕಂಡು ಬಂದು ಚಿಕಿತ್ಸೆ ಪಡೆದುಕೊಂಡಿದ್ದಾರೆ.ಆದರೆ ಕೆಲ ಸಮಯದಿಂದ ತೀರಾ ಅನಾರೋಗ್ಯ ಎದುರಿಸುತ್ತಿರುವ ಈ ಯುವಕನ ಮನೆಯವರಿಗೆ ಈಗ ಮಗನ ಚಿಕಿತ್ಸೆಗೆ ಹಣ ಹೊಂದಿಸುವುದು ಸವಾಲಿನ ಕೆಲಸವಾಗಿದೆ.ಈಗ ಅನಾರೋಗ್ಯದಿಂದಾಗಿ ಚಿಕಿತ್ಸೆಗಾಗಿ ಮಂಗಳೂರಿನ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈಗಾಗಲೇ ಚಿಕಿತ್ಸೆಗಾಗಿ ಲಕ್ಷಾಂತರ ವ್ಯಯಿಸಲಾಗಿದ್ದು,ಮುಂದಿನ ಚಿಕಿತ್ಸೆಗೆ ಆರ್ಥಿಕ ಅಡಚಣೆಯಲ್ಲಿದ್ದಾರೆ.  ಇವರು ದಾನಿಗಳು ಆರ್ಥಿಕ ಸಹಕಾರ ನೀಡುವಂತೆ ವಿನಂತಿಸಿಕೊಂಡಿದ್ದಾರೆ.
ಸಹಾಯ ಮಾಡುವ ದಾನಿಗಳು ಈ ಖಾತೆಗೆ ಜಮೆ ಮಾಡುವಂತೆ ಕೋರಿದ್ದಾರೆ. ಸಂಪರ್ಕ ಮೋನಪ್ಪ ಗೌಡ 8496827014, 9980575433

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಫ್ಲೈಓವರ್ ಬಳಿಕ ಕಲ್ಲಡ್ಕದಲ್ಲಿ ಏನು ಬದಲಾವಣೆಯಾಗಿದೆ..?

ಕಲ್ಲಡ್ಕದ 2.1 ಕಿ.ಮೀ. ಉದ್ದದ ಫ್ಲೈಓವರ್ ಸಂಚಾರಕ್ಕೆ ಮುಕ್ತವಾದ ಬಳಿಕ ಪೇಟೆಯೊಳಗಿನ ವಾಹನ…

2 hours ago

ಹಲಸಿನಂತೆಯೇ ಕಾಣುವ ಈ ಹಣ್ಣು ನಿಮಗೆ ಗೊತ್ತೇ?

ಹಲಸಿನ ಹಣ್ಣಿನಂತೆ ಕಾಣುವ ಚೆಂಪೆಡಕ್ ಹಣ್ಣು ರುಚಿ ಮತ್ತು ಸುವಾಸನೆಯ ಜತೆಗೆ ವಿಟಮಿನ್‌…

3 hours ago

ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮಹಿಳೆಯರ ಓಟಕ್ಕೆ ಚಿನ್ನದ ಹೊಳಪು – 4×400 ಮೀ. ರಿಲೇಯಲ್ಲಿ ಭರ್ಜರಿ ಗೆಲುವು

ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಭಾರತ 3:29.69 ಸಮಯದೊಂದಿಗೆ ಚಿನ್ನ…

4 hours ago

ಕಾಳುಮೆಣಸು ಮಾರುಕಟ್ಟೆಯಲ್ಲಿ ಏನಾಗುತ್ತಿದೆ?

ಆಗಮನ ಕಡಿಮೆಯಾಗಿದ್ದರೂ ದೇಶದ ಕಾಳುಮೆಣಸು ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ದಾಸ್ತಾನು ಮತ್ತು ಬೇಡಿಕೆ…

13 hours ago

ಹವಾಮಾನ ವರದಿ | 29-09-2026 | ಅ.6 ರವರೆಗೆ ಹಲವು ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ

ಅರಬ್ಬಿ ಸಮುದ್ರದ ಗಾಳಿಯು ಶ್ರೀಲಂಕಾ ಹಾಗೂ ತಮಿಳುನಾಡು ಕರಾವಳಿ ಮೂಲಕ ರಾಜ್ಯಕ್ಕೆ ಪ್ರವೇಶಿಸುತ್ತಿರುವ…

14 hours ago

ಕೃಷಿ ವೆಚ್ಚ ಕಡಿಮೆ ಮಾಡಲು ಇಲ್ಲಿ ರೈತರ ಹೊಸ ಹೆಜ್ಜೆ…

ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಚಿತ್ರಕೂಟದ…

18 hours ago