ಮಡಿಕೇರಿ : ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಜರುಗುವ ಶ್ರೀ ಕಾವೇರಿ ತುಲಾ ಸಂಕ್ರಮಣದ ಕಾಲ ಅ.18 ರ ಶುಕ್ರವಾರ ಮುಂಜಾನೆ 12 ಗಂಟೆ 59 ನಿಮಿಷಕ್ಕೆ ಶ್ರೀ ಮೂಲ ಕಾವೇರಿ ತೀರ್ಥೋದ್ಭವವಾಗಲಿದೆ ಎಂದು ಶ್ರೀಭಗಂಡೇಶ್ವರ, ತಲಕಾವೇರಿ ದೇವಾಲಯದ ಪ್ರಕಟಣೆ ತಿಳಿಸಿದೆ.
ಅಂದು ಸಲ್ಲುವ ಕರ್ಕಾಟಕ ಲಗ್ನದಲ್ಲಿ ಪವಿತ್ರ ಕಾವೇರಿ ತಿರ್ಥೊದ್ಭವವಾಗಲಿದೆ. ಇದಕ್ಕೆ ಪೂರ್ವಭಾವಿಯಾಗಿ ಸೆ.27 ರಂದು ಬೆ.9.15 ಗಂಟೆಗೆ ಸಲ್ಲುವ ತುಲಾ ಲಗ್ನದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕುವುದು, ಅ.5 ರಂದು ಬೆ.8.45 ಗಂಟೆಗೆ ಸಲ್ಲುವ ತುಲಾ ಲಗ್ನದಲ್ಲಿ ಆಜ್ಞಾ ಮುಹೂರ್ತ, ಅ.15 ರಂದು 12.05 ಗಂಟೆಗೆ ಧನುರ್ ಲಗ್ನದಲ್ಲಿ ಅಕ್ಷಯಪಾತ್ರೆ ಹಾಗೂ ಸಂಜೆ 4.31 ಗಂಟೆಗೆ ಕುಂಭ ಲಗ್ನದಲ್ಲಿ ಕಾಣಿಕೆ ಡಬ್ಬಿಯನ್ನು ಇಡುವುದು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿದೆ ಎಂದು ದೇವಾಲಯದ ಪ್ರಕಟಣೆ ಮಾಹಿತಿ ನೀಡಿದೆ.
ವಿವಾಹದ ವಿಳಂಬ, ಸಂತಾನದ ಕೊರತೆ, ಮತ್ತು ಆರ್ಥಿಕ ಅಡೆತಡೆಗಳಿಗೆ ಕಾರಣವಾಗಬಹುದು. ಸರ್ಪಸಂಸ್ಕಾರವು ಈ…
ಆಗಸ್ಟ್ 2ನೇ ವಾರದಲ್ಲಿ ತಮಿಳುನಾಡು ಕರಾವಳಿಯ ಸಮೀಪ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗುವ…
ಅಮಾಯಕ ನಾಗರಿಕರನ್ನು ಬಲಿಗೆ ಹಾಕುವ ಕಾನೂನು ಡಿಜಿಟಲ್ ಸಿಗ್ನೇಜರಿದ್ದು ಮಾತ್ರವಲ್ಲ, ಇನ್ನು ಅನೇಕ…
ಯೂರಿಯಾ ಗೊಬ್ಬರ ಅಭಾವದ ನಡುವೆಯೇ ರಾಜ್ಯದಲ್ಲಿ ಕಳಪೆ ಗೊಬ್ಬರ ಹಾಗೂ ಕಳಪೆ ಬೀಜಗಳ…
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ಕಾಡಾನೆಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ…
ಕೊಡಗು ಜಿಲ್ಲೆಯಲ್ಲಿ ಕಳೆದ ಐದಾರು ದಿನಗಳಿಂದ ಸುರಿದ ಭಾರಿ ಗಾಳಿ ಮಳೆಯಿಂದಾಗಿ ಸುಮಾರು…