ಬಳ್ಪ: ಇತಿಹಾಸ ಪ್ರಸಿದ್ಧ ಬಳ್ಪ ಶ್ರೀ ತ್ರಿಶೂಲಿನೀ ದೇವಸ್ಥಾನ ಹಾಗೂ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಸಂದರ್ಭ ಅ.2 ರಂದು ಬುಧವಾರ ಬೆಳಗ್ಗೆ 9 ರಿಂದ ಸಾಮೂಹಿಕ ಚಂಡಿಕಾ ಹೋಮ ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಅ.8 ಮಂಗಳವಾರದವರೆಗೆ ಮಹಾನವರಾತ್ರಿ ಉತ್ಸವದ ಪ್ರಯುಕ್ತ ಪ್ರತೀದಿನ ಬಳ್ಪ ಶ್ರೀ ತ್ರಿಶೂಲಿನೀ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಲಿದೆ. ಅ.5 ರಂದು ಶಾರದಾ ಪೂಜೆ ಆರಂಭ, ಅ.7 ರಂದು ಮಹಾನವಮಿ ಹಾಗೂ ಅ.8 ರಂದು ವಿಜಯದಶಮಿಯಂದು ಬೆಳಗ್ಗೆ ಮಹಾಗಣಪತಿಗೆ ಅಪ್ಪದ ಪೂಜೆ, ದೈವಗಳಿಗೆ ತಂಬಿಲ ನಡೆಯಲಿದೆ.
ಅ.1 ರಂದು ಬೆಳಗ್ಗೆ ಕದಿರು ತುಂಬಿಸುವುದು ಹಾಗೂ ನವಾನ್ನ ಭೋಜನ ಕಾರ್ಯಕ್ರಮ ನಡೆಯಿತು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel