ಬರಹ : ಡಾ.ಚಂದ್ರಶೇಖರ ದಾಮ್ಲೆ , ಸುಳ್ಯ
ತುಳುನಾಡಿನ ಜಾನಪದ ಬದುಕಿನಲ್ಲಿ ಆಟಿ ತಿಂಗಳೆಂದರೆ ಅತಿ ಮಳೆಯಿಂದಾಗಿ ಬಡತನದ ತಿಂಗಳು. ಕೃಷಿಕರ ಪಾಲಿಗೆ ಮತ್ತು ಕೃಷಿ ಕೂಲಿ ಕಾರ್ಮಿಕರಿಗೆ ಕಷ್ಟದ ದಿನಗಳ ಕಾಲ. ತುಳು ಸಂಪ್ರದಾಯದಲ್ಲಿ ಮದುವೆಯಾದ ವರ್ಷ ಮಗಳು ತವರಿಗೆ ಬಂದು ಒಂದು ತಿಂಗಳು ಸುಖವಾಗಿ ಕಳೆಯುವ ಸಂಪ್ರದಾಯ ಇದ್ದ ತಿಂಗಳು. ಅನೇಕ ರೋಗಗಳು ಹರಡುವ ಭಯ ಹುಟ್ಟಿಸುತ್ತಿದ್ದ ಆಟಿ ತಿಂಗಳು ದುಸ್ವಪ್ನದಂತೆ ಕಳೆದು ಹೋಗಬೇಕಾಗಿತ್ತು.
ಈ ಆಟಿ ತಿಂಗಳಲ್ಲಿ ಅಮಾವಾಸ್ಯೆಯ ದಿನ ಬಹಳ ಮುಖ್ಯವಾದದ್ದು. ಏಕೆಂದರೆ ಆ ದಿನ ಹಾಲೆ ಮರದಲ್ಲಿ ಪ್ರಕೃತಿಯ ಎಲ್ಲ ಔಷಧಗಳು ಬಂದು ಸೇರುತ್ತವೆ ಎಂಬ ನಂಬಿಕೆ ಇದೆ. ಅದರ ಪ್ರಕಾರ ಆ ದಿನ ಬೆಳಗ್ಗೆ ಸೂರ್ಯೋದಯಕ್ಕೆ ಮೊದಲು ಹಾಲೆ ಮರದ ಬಳಿಗೆ ಹೋಗಿ ಕಲ್ಲಿನಲ್ಲಿ ಜಜ್ಜಿ ಅದರ ಕೆತ್ತೆಯನ್ನು ತಂದು ಗುದ್ದಿ ರಸತೆಗೆದು ಬರೆ ಹೊಟ್ಟೆಗೆ ಕುಡಿದರೆ ಅದು ಸರ್ವರೋಗ ನಿರೋಧಕ ಎಂಬ ನಂಬಿಕೆ ಇದೆ. ಈ ರೀತಿ ತಮ್ಮ ಆರೋಗ್ಯದ ಬಗ್ಗೆ ರೋಗನಿರೋಧಕ ಪ್ರಯೋಗ ನಡೆಯುತ್ತಿತ್ತು. ಈಗ ಇದು ಮರೆತು ಹೋಗಿರುವ ಸಂಗತಿಯಾಗಿದೆ. ಆಧುನಿಕ ಮಾತ್ರೆ ಸೀರಪ್ ಇಂಜೆಕ್ಷನ್ ಗಳ ಎದುರು ಮೂಢನಂಬಿಕೆ ಎನಿಸಿದೆ. ಆದರೆ ನನಗಿನ್ನೂ ವಿಶ್ವಾಸವಿದೆ. ನಾನು ಪ್ರತಿ ವರ್ಷ ಆಟಿ ಅಮಾವಾಸ್ಯೆಯಂದು ಬೆಳಗ್ಗೆ ಖಾಲಿ ಹೊಟ್ಟೆಗೆ ಹಾಲೆ ಮರದ ರಸ ಕುಡಿಯುವ ವಾಡಿಕೆ ಇಟ್ಟುಕೊಂಡಿದ್ದೇನೆ.
ಪಂಚಾಂಗ ಪ್ರಕಾರ ಇಂದು (1-8-2019) ಆಟಿ ಅಮಾವಾಸ್ಯೆ. ಭಾರೀ ಮಳೆ ಇರಬೇಕಿತ್ತು. ಆದರೆ ಎರಡು ದಿನಗಳಿಂದ ಮಳೆ ಇಲ್ಲ. ಸೂರ್ಯೋದಯಕ್ಕೆ ಮೊದಲೇ ಹಾಲೆ ಮರದ ಕೆತ್ತೆ ತರಲು ಹೋದರೆ ಮರದ ತೊಗಟೆ ಮಳೆ ಇದ್ದರೆ ಇರುವಂತೆ ಮೃದುವಾಗಿಲ್ಲ. ಗಟ್ಟಿಯಾಗಿತ್ತು. ಮರದ ಮೈ ಇಡೀ ಇರುವೆಗಳ ಓಡಾಟ. ಅತಿಯಾಗಿ ಸೊಳ್ಳೆಗಳ ಕಾಟ. ಪ್ರಕೃತಿ ನಿಯಮದಂತೆ ಬರಬೇಕಿದ್ದ ಮಳೆ ಬಾರದೆ ವಾತಾವರಣ ಕಲುಷಿತಗೊಂಡಿದೆ. ಹೀಗೇ ಆದರೆ ಡಿಸೆಂಬರ್ ನಿಂದಲೇ ಬರಗಾಲ ಬಾಧಿಸೀತು. ಹಾಗಾಗಿ ಇನ್ನೀಗ ಬಂದಷ್ಟು ಮಳೆ ನೀರನ್ನು ಇಂಗು ಗುಂಡಿಗಳನ್ನು ಮಾಡಿ ಇಂಗಿಸಿಕೊಳ್ಳುವುದು ಒಳ್ಳೆಯದು.
Advertisement
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.