ಸುಳ್ಯ ತಾಲೂಕಿನಲ್ಲಿ ತರಕಾರಿ ಬೀಜಗಳ ವಿತರಣೆ ವಿವಿಧ ಸಹಕಾರಿ ಸಂಘಗಳ ಸಹಕಾರದೊಂದಿಗೆ ಗ್ರಾಮ ವಿಕಾಸ ಸಮಿತಿ ಆಶ್ರಯದಲ್ಲಿ ನಡೆಯುತ್ತಿದೆ. ವಿವಿಧ ಬಗೆಯ ತರಕಾರಿ ಬೀಜಗಳ ವಿತರಣೆ ಮಾಡಲಾಗುತ್ತಿದ್ದು ಆತ್ಮನಿರ್ಭರ ಭಾರತ ಹಾಗೂ ಸ್ವಾವಲಂಬಿ ಗ್ರಾಮದ ಕನಸಿನ ಬೀಜ ಬಿತ್ತಲಾಗುತ್ತಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕ, ಜಾಲ್ಸೂರು, ಕನಕಮಜಲು, ಮಂಡೆಕೋಲು, ಗುತ್ತಿಗಾರು, ಪಂಜ , ಏನೆಕಲ್ಲು, ಕಳಂಜ-ಬಾಳಿಲ, ಮೊದಲಾದ ಕಡೆಗಳಲ್ಲಿ ತರಕಾರಿ ಬೀಜ ವಿತರಣೆ ನಡೆಯುತ್ತಿದೆ.
Advertisement Advertisement
ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ , ಕುಕ್ಕುಜಡ್ಕಮತ್ತು ಗ್ರಾಮ ವಿಕಾಸ ಸಮಿತಿ ಅಮರಮುಡ್ನೂರು-ಪಡ್ನೂರು ಇದರ ಜಂಟಿ ಆಶ್ರಯದಲ್ಲಿ ಗ್ರಾಮದ ರೈತರಿಗೆ ತರಕಾರಿ ಬೀಜಗಳ ವಿತರಣಾ ಕಾರ್ಯಕ್ರಮವು ಅಮರ ಸಹಕಾರ ಸಭಾಭವನದಲ್ಲಿ ಜರುಗಿತು.
ಹರಿಶ್ಚಂದ್ರ ಗೌಡ ಮೊಂಟಡ್ಕ ಗ್ರಾಮ ವಿಕಾಸ ಸಮಿತಿ ಅಮರಮುಡ್ನೂರು ಇವರು ಅಧ್ಯಕ್ಷತೆ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರು ವಿಭಾಗ ಗ್ರಾಮ ವಿಕಾಸ ಸಂಯೋಜಕ ಪ್ರವೀಣ್ ಸರಳಾಯ,ತರಕಾರಿ ಬೀಜ ವಿತರಣೆಯ ಕುರಿತು ರೈತರಿಗೆ ಮಾಹಿತಿ ನೀಡಿದರು. ಸಾವಯವ ಬದುಕಿನ ಜೊತೆ ವಿಷಮುಕ್ತ ಬದುಕು ನಮ್ಮದಾಗಬೇಕು, ಅಲ್ಲದೆ ತರಕಾರಿ ಬೆಳೆಯ ಮೂಲಕ ಸ್ವಾವಲಂಬನೆಯ ಕಡೆಗೆ ಹೆಜ್ಜೆ ಹಾಕಬೇಕಾಗಿದೆ ಎಂದರು.
ಅಮರಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸೀತಾ ಹೆಚ್ ,ಚೊಕ್ಕಾಡಿ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ರಾಘವೇಂದ್ರ ಪಿ. ಕೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹನ್ ಕುಮಾರ್ ಪೊಯ್ಯೆಮಜಲು, ಸ್ವಾಗತಿಸಿ, ಪ್ರದೀಪ್ ಬೊಳ್ಳೂರು ವಂದಿಸಿದರು. ಗಣೇಶ್ ಪಿಲಿಕಜೆ ಕಾರ್ಯಕ್ರಮ ನಿರೂಪಿಸಿದರು.
ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಗ್ರಾಮದ ರೈತರು ತರಕಾರಿ ಬಿತ್ತನೆ ಬೀಜಗಳನ್ನು ಪಡೆದುಕೊಂಡರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…