ಬಳ್ಪ: ಆದರ್ಶ ಗ್ರಾಮವಾಗಿ ರಾಜ್ಯದಲ್ಲೇ ಗುರುತಿಸಿಕೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಳ್ಪ ಗ್ರಾಮ ಪಂಚಾಯತ್ ಗೆ ಖಾಯಂ ಪಿಡಿಒ ಇಲ್ಲ …!. ಕಳೆದ ಎರಡು ದಿನಗಳಿಂದ ಬಳ್ಪ ಗ್ರಾಮದಲ್ಲಿ ರೋಗಿಯೊಬ್ಬರನ್ನು ಚಯರ್ ನಲ್ಲಿ ಕೊಂಡೊಯ್ದ ಸಂಗತಿ ರಾಜ್ಯಮಟ್ಟದಲ್ಲಿ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಪಿಡಿಒ ಅವರು ಸಿಬಂದಿಗಳನ್ನು ಕಳುಹಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಜಿಲ್ಲೆಯ ಅಧಿಕಾರಿಗಳು ವರದಿ ಪಡೆದಿದ್ದಾರೆ. ಆದರ್ಶ ಗ್ರಾಮಕ್ಕೆ ಖಾಯಂ ಆಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇಲ್ಲದೇ ಇರುವುದು ಇನ್ನೊಂದು ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎನ್ನುತ್ತಾರೆ ಜನತೆ.
ಆದರ್ಶ ಗ್ರಾಮ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಬಳ್ಪ ಘೋಷಣೆಯಾದ ಸಂದರ್ಭ ಇದ್ದ ಪಿಡಿಒ ಅವರು ಅಭಿವೃದ್ಧಿ ಕಾರ್ಯದ ರೂಪುರೇಷೆಯ ಬಳಿಕ ವರ್ಗಾವಣೆಯಾಗಿದ್ದರು. ಅದಾದ ನಂತರ ಮತ್ತೊಬ್ಬರು ಪಿಡಿಒ ಬಂದರೆ ಈಗ ಕಳೆದ ಒಂದು ವರ್ಷದಿಂದ ಗುತ್ತಿಗಾರು ಗ್ರಾಮ ಪಂಚಾಯತ್ ಪಿಡಿಒ ಅವರು ಹೆಚ್ಚುವರಿ ಹುದ್ದೆಯಲ್ಲಿ ಎರಡೂ ಕಡೆಯಲ್ಲೂ ಕೆಲಸ ನಿರ್ವಹಿಸುತ್ತಿದ್ದಾರೆ. ಯಾವುದೇ ಗ್ರಾಮದ ಸಮಗ್ರ ಅಭಿವೃದ್ಧಿಗೆ ಗ್ರಾಮ ಮಟ್ಟದಲ್ಲಿ ಅಧಿಕಾರಿಗಳು ಸಕ್ರಿಯವಾಗಿರಬೇಕಾಗಿದೆ. ಆದರೆ ಆದರ್ಶ ಗ್ರಾಮವಾಗಿದ್ದ ಬಳ್ಪದಲ್ಲಿ ಕಳೆದ ಒಂದು ವರ್ಷದಿಂದ ಖಾಯಂ ಪಿಡಿಒ ಇಲ್ಲ …!!
ಒಂದು ಗ್ರಾಮದ ಅಭಿವೃದ್ಧಿಗೆ ಅಧಿಕಾರಿಗಳು , ಜನಪ್ರತಿನಿಧಿಗಳು ಸಕ್ರಿಯವಾಗಿರಬೇಕು. ಆದರೆ ಬಳ್ಪದಲ್ಲಿ ಜನಪ್ರತಿನಿಧಿಗಳು ಸಕ್ರಿಯವಾಗಿದ್ದರೆ ಅಧಿಕಾರಿಗಳು ಸ್ವತ: ವೀಕ್ಷಣೆ ಮಾಡಿ ಅಭಿವೃದ್ಧಿ ಕೆಲಸಕ್ಕೆ ವೇಗ ನೀಡುವ ಕೆಲಸ ಸಾಧ್ಯವೇ ಎಂಬುದು ಪ್ರಶ್ನೆ. ಕಳೆದ ಎರಡು ದಿನಗಳಿಂದ ರೋಗಿಯೊಬ್ಬರನ್ನು ಚಯರ್ ನಲ್ಲಿ ಹೊತ್ತೊಯ್ದ ಪ್ರಕರಣದಲ್ಲೂ ಅಧಿಕಾರಿಗಳು ವರದಿ ತರಿಸಿದ್ದಾರೆ. ಅದು ಬಿಟ್ಟರೆ ಯಾವುದೇ ಅಭಿವೃದ್ಧಿ ಕಷ್ಟ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ ಎಂದು ಸ್ಥಳೀಯರು ತಿಳಿಸುತ್ತಾರೆ.
ಇದರ ಜೊತೆಗೆ ಇಲ್ಲಿ 3 ಕಡೆಯಿಂದ ರಸ್ತೆ ಇದೆ, ಆದರೆ ವಾಸ್ತವ ಸ್ಥಿತಿ ಬೇರೆಯೇ ಇದೆ, ಮಾಧ್ಯಮಗಳ ಮೂಲಕ ತಪ್ಪು ಮಾಹಿತಿ ನೀಡಲಾಗಿದೆ. ಜೀಪು ಮೂಲಕ ಸಾಗಬಹುದು , ಕಾರು ಮಾತ್ರಾ ಓಡಾಡುವುದು ಕಷ್ಟ ಎಂದು ಅಧಿಕಾರಿಗಳು ಹೇಳುತ್ತಾರೆ. ಅದರ ಜೊತೆಗೆ ಆದರ್ಶ ಗ್ರಾಮವೆಂದರೆ ರಸ್ತೆಗಳ ಅಭಿವೃದ್ಧಿ ಮಾತ್ರವೇ ಅಲ್ಲ ಎಂದೂ ಹೇಳುತ್ತಾರೆ.
ಈಗ ಒಂದು ಕಡೆ ಜನತೆ ಇಲ್ಲಿ ರಸ್ತೆ ಸರಿ ಇಲ್ಲ ಎಂದರೆ, ರಾಜಕೀಯವಾಗಿ ಇನ್ನೊಂದು ವಾದ ಕೇಳಿಬರುತ್ತದೆ, ರಸ್ತೆ ಸರಿ ಇದೆ, ಕೆಲವೇ ಮೀಟರ್ ದೂರ ಮಾತ್ರವೇ ಸರಿ ಇಲ್ಲ ಎಂಬ ವಾದ ಇದೆ.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…