ಆರೋಗ್ಯವಂತ ಬದುಕಿಗೆ ವಿಷಮುಕ್ತ ಆಹಾರ ಅಗತ್ಯ- ಶಕುಂತಳಾ ಟಿ ಶೆಟ್ಟಿ

January 6, 2020
2:43 PM

ಪುತ್ತೂರು:  ಹಿರಿಯರ ಆರೋಗ್ಯ ಉತ್ತಮವಾಗಿತ್ತು. ‌ಇದಕ್ಕೆ ಪ್ರಮುಖ ಕಾರಣ ಆಹಾರ ವ್ಯವಸ್ಥೆ. ಇಂದು ಬದಲಾದ ವ್ಯವಸ್ಥೆಯಲ್ಲಿ ಆಹಾರ ಪದ್ಧತಿ ಬದಲಾಗಿದೆ, ಹೀಗಾಗಿ ಆರೋಗ್ಯ ವ್ಯವಸ್ಥೆ ಹದಗೆಡುತ್ತಿದೆ. ಹೀಗಾಗಿ ಇಂದು‌ ವಿಷ ಮುಕ್ತ ಆಹಾರ ಅಗತ್ಯವಾಗಿದೆ ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.

Advertisement
Advertisement

ಅವರು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ನಟರಾಜ ವೇದಿಕೆಯಲ್ಲಿ ಎರಡು ದಿನಗಳ ಕಾಲ ನವಚೇತನ ಸ್ನೇಹ ಸಂಗಮ ಹಾಗೂ ಜೇಸಿಐ ಪುತ್ತೂರು ವತಿಯಿಂದ ನಡೆದ ಸಾವಯವ ಹಬ್ಬದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಎಲ್ಲರ ಬದುಕು ವಿಷ ಮುಕ್ತವಾಬೇಕು. ವಿಷ ರಹಿತವಾಗಬೇಕು. ಆದಾಯ ಹೆಚ್ಚಾಗಬೇಕು ಎಂಬ ಕಾರಣದಿಂದ ಮಣ್ಣು ವಿಷವಾಯ್ತು. ಈಗ ಮತ್ತೆ ಬದಲಾಗಬೇಕಿದೆ. ವಿಷ ರಹಿತ ಗಾಳಿ, ನೀರು ವಿಷ ರಹಿತವಾಗಬೇಕು. ಇದಕ್ಕಾಗಿ ಪ್ರಯತ್ನ ಬೇಕು. ಆಹಾರ ಪದ್ಧತಿ ಬದಲಾಗಬೇಕು. ಸಾವಯವ ಕೃಷಿಯಿಂದ ಇದು ಸಾಧ್ಯವಿದೆ ಎಂದರು.

Advertisement

ಅತಿಥಿಯಾಗಿದ್ದ ಕಹಳೆ ನ್ಯೂಸ್ ಮುಖ್ಯಸ್ಥ ಶ್ಯಾಮಸುದರ್ಶನ ಪೂರ್ವಜರು ಬಳಸುತ್ತಿದ್ದ ವಸ್ತುಗಳು ಸಾವಯವವೇ ಆಗಿತ್ತು. ಹೀಗಾಗಿ ರೋಗಮುಕ್ತ ಬದುಕಾಗಿತ್ತು. ಈಗ ಕಾಲ‌ಬದಲಾಗಿದೆ. ಹೀಗಾಗಿ ಇಂದು ವಿಷಮುಕ್ತ ಆಹಾರ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಮಾಧ್ಯಮಗಳು ಇಂತಹ ಕಾರ್ಯಕ್ರಮಗಳ ಕಡೆಗೆ ಬೆಳಕು ಚೆಲ್ಲಬೇಕಾದ ಅವಶ್ಯಕತೆ ಇದೆ ಎಂದರು.

ಜೇಸಿಐ ಪುತ್ತೂರು ಕಾರ್ಯದರ್ಶಿ ಪ್ರಮಿತಾ ಸಿ ಹಾಸ್ ಸಮಾರೋಪ ಭಾಷಣ ಮಾಡಿದರು. ಜೇಸೀ ವಲಯ15 ರ ಕಾರ್ಯಕ್ರಮ ವಿಭಾಗದ ವಲಯ ನಿರ್ದೇಶಕರಾದ ಅಶ್ವಿನ್ ಐತಾಳ್ ಮಾತನಾಡಿದರು. ಸಭಾಧ್ಯಕ್ಷತೆ ವಹಿಸಿದ್ದ ನವಚೇತನ ಸ್ನೇಹ ಸಂಗಮದ ಅಧ್ಯಕ್ಷ ಅನಂತ ಪ್ರಸಾದ್ ನೈತಡ್ಕ ಮಾತನಾಡಿ ಸಾವಯವ ಹಬ್ಬಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತಿವಾಗಿದೆ. ಮುಂದೆ ಹಣ್ಣು ಮೇಳ, ಹಲಸು ಮೇಳದಂತಹ ಕಾರ್ಯಕ್ರಮದ ಮೂಲಕ ಕೃಷಿಕರಿಗೆ ಹಾಗೂ ಜನತೆಗೆ ವೇದಿಕೆ ನೀಡಲಾಗುತ್ತದೆ ಎಂದರು.

Advertisement

ಕಾರ್ಯಕ್ರಮದಲ್ಲಿ ಕೃಷಿಕ‌ ಬಿ‌ ಎಸ್‌ ಸುಬ್ರಾಯ ಹಾಗೂ ತುಳಸಿ ದಂಪತಿಗಳನ್ನು ಗೌರವಿಸಲಾಯಿತು.

ಜೇಸಿರೆಟ್ ಅಧ್ಯಕ್ಷೆ  ರೇಷ್ಮಾ‌ ಆರ್  ಶೆಟ್ಟಿ ಸ್ವಾಗತಿಸಿದರು. ನವಚೇತನ ಸ್ನೇಹಸಂಗಮ ಕೋಶಾಧಿಕಾರಿ ಪ್ರಕಾಶ್ ಕೊಡೆಂಕಿರಿ  ವಂದಿಸಿದರು. ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ಹಾಗೂ ಪತ್ರಕರ್ತ ನಾ.ಕಾರಂತ ಪೆರಾಜೆ ನಿರೂಪಿಸಿದರು.

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಗೋವಿಜ್ಞಾನ, ವಿಷಮುಕ್ತ ಕೃಷಿ ಹಾಗೂ ಗ್ರಾಮೋದ್ಯೋಗ ಆಧಾರಿತ ಸ್ವಾವಲಂಬಿ ಗ್ರಾಮ ನಿರ್ಮಾಣದ ಮಹಾ ಶಿಬಿರ
March 20, 2024
4:04 PM
by: The Rural Mirror ಸುದ್ದಿಜಾಲ
ಅರ್ಥಿಕ ಬೆಳೆಯಾಗಿ ಬಿದಿರು | ಬಿದಿರು ಬೆಳೆಸುವ ಕುರಿತು ವಿಚಾರ ವಿನಿಮಯ ಸಭೆ
March 18, 2024
2:05 PM
by: The Rural Mirror ಸುದ್ದಿಜಾಲ
ನಿಮಗೆ ಹಾಲು ಕರೆಯಲು ಬರುತ್ತಾ..? ಹಾಗಾದ್ರೆ ಹಾಲು ಕರೆಯಿರಿ, ಭರ್ಜರಿ ಬಹುಮಾನ ಗೆಲ್ಲಿರಿ..
February 10, 2024
12:18 PM
by: The Rural Mirror ಸುದ್ದಿಜಾಲ
ಲಾಲ್‌ಬಾಗ್‌ ಫ್ಲವರ್‌ ಶೋ | ಪ್ರವಾಸಿಗರನ್ನು ಕೈಬೀಸಿ ಕರೆದ ಸಸ್ಯಕಾಶಿ : ಭರ್ಜರಿ ರೆಸ್ಪಾನ್ಸ್, ಕೋಟಿ ಮೀರಿದ ಆದಾಯ
January 27, 2024
11:51 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror