ಪುತ್ತೂರು: ರಾಸಾಯನಿಕ ಬಳಕೆಯಿಂದಾಗಿ ನಾವು ಸೇವಿಸುವ ಪ್ರತಿಯೊಂದು ಆಹಾರ ಪದಾರ್ಥಗಳು ವಿಷಮಯವಾಗಿದ್ದು, ಹಲವಾರು ರೋಗಗಳಿಗೆ ಕಾರಣವಾಗುತ್ತಿದೆ. ಆರೋಗ್ಯವಂತ ಸಮಾಜಕ್ಕಾಗಿ ಸಾವಯವ ಬದುಕು ಅನಿವಾರ್ಯವಾಗಿದೆ ಎಂದು ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂಶುದ್ಧೀನ್ ಸಂಪ್ಯ ಹೇಳಿದರು.
ಅವರು ಶನಿವಾರ ನವಚೇತನ ಸ್ನೇಹಸಂಗಮ ಪುತ್ತೂರು, ಜೆಸಿಐ ಪುತ್ತೂರು ಇವುಗಳ ಆಯೋಜನೆಯಲ್ಲಿ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ 2 ದಿನಗಳ ಕಾಲ ನಡೆಯುತ್ತಿರುವ ಸಾವಯವ ಹಬ್ಬದಲ್ಲಿನ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿಂದಿನ ಜನರು ಸಾವಯವ ಪದ್ದತಿಯನ್ನು ಮಾತ್ರ ಅಳವಡಿಸಿಕೊಂಡಿದ್ದ ಕಾರಣ ಆರೋಗ್ಯವಂತರಾಗಿ ದೀರ್ಘಾಯ್ಯುಷಿಗಳಾಗಿ ಬದುಕಿದ್ದರು. ಆದರೆ ಇಂದಿನ ಜನಾಂಗ ಹೆಚ್ಚಿನ ಮಂದಿ ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ಕಂಡು ಬರುತ್ತದೆ. ಇದಕ್ಕೆಲ್ಲಾ ವಿಷಕಾರಕ ಆಹಾರ ಸೇವನೆಯೂ ಮುಖ್ಯ ಕಾರಣವಾಗಿದ್ದು, ಇದನ್ನು ತಡೆಯುವ ಪ್ರಯತ್ನಗಳಾಗಬೇಕು. ಸಾವಯವ ಆಹಾರ ಸೇವನೆ ಗುರಿ ನಮ್ಮದಾಗಬೇಕು ಎಂದರು.
`ಸಾವಯವ ಬದುಕು’ ಕುರಿತು ವಿಷಯ ಮಂಡಿಸಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷಿಕ ವಿಶ್ವೇಶ್ವರ ಸಜ್ಜನ ಅವರು ಕೃಷಿ ಭೂಮಿಯು ಕೃಷಿಕನಿಗೆ ದೇವಾಲಯವಿದ್ದಂತೆ. ಕೃಷಿ ಕೆಲಸ ಎಂದಿಗೂ ಅವಮಾನಕಾರಿಯಲ್ಲ. ಅದೊಂದು ಅಭಿಮಾನವಾಗಿದೆ. ಆದರೆ ಕೃಷಿಕರನ್ನು ನೋಡುವ ದೃಷ್ಠಿಕೋನವು ಬದಲಾಗಬೇಕಾದ ಅನಿವಾರ್ಯತೆಯಿದೆ. ರೈತನ ಬೆಳೆಗೆ ಆತನೇ ಬೆಲೆ ನಿಗದಿಪಡಿಸುವ ವಾತಾವರಣವನ್ನು ಸೃಷ್ಠಿಸಬೇಕಾಗಿದೆ ಎಂದರು.
`ಸಾವಯವ ಕೃಷಿ ವೈವಿದ್ಯ’ ಕುರಿತು ವಿಷಯ ಮಂಡಿಸಿದ ಕೃಷಿಕ ಮಡಿಕೇರಿಯ ಸಿವಿಲ್ ಇಂಜಿನಿಯರ್ ಶಿವಕುಮಾರ ಮಾತನಾಡಿ ಕೃತಿಯ ವಿವಿಧ ಆಯಾಮಗಳ ಬಗ್ಗೆ ವಿವರಿಸಿದರು. ಹಲವು ಕೃಷಿ ಅಧ್ಯಯನಕಾರರು, ತಜ್ಞರ ಬಗ್ಗೆ ವಿವರ ನೀಡಿದ ಅವರು ಕೃಷಿಯು ಎಂದಿಗೂ ನಮ್ಮನ್ನು ಸೋಲಿಸುವುದಿಲ್ಲ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಾಂಪ್ರದಾಯಿಕ ಭತ್ತದ ಕೃಷಿಕ ಕೊಡಿಪ್ಪಾಡಿಯ ರಘುಪತಿ ಏರ್ಕಡಿತ್ತಾಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಂಕಣಕಾರ, ಲೇಖಕ ನಾ. ಕಾರಂತ ಪೆರಾಜೆ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.
ಹರಿಯಾಣ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಯಮುನಾ ನಗರದಲ್ಲಿ ಇಂದು ಧೀನಬಂಧು ಚೋಟು…
ಚಾಮರಾಜನಗರ ಜಿಲ್ಲೆಯ ಸಿದ್ದಾಪುರ ಗ್ರಾಮದ ಸಾವಿರಾರು ಎಕರೆ ಜಮೀನು ರಾಜವಂಶಸ್ಥರಿಗೆ ಸೇರಿದ್ದು, ಅದನ್ನು…
15.04.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಸ್ಮಾರ್ಟ್ ಕೃಷಿಯು ಕೃಷಿ ವಲಯದಲ್ಲಿ ಕ್ರಾಂತಿಕಾರಕ ಬದಲಾವಣೆ ತರುತ್ತಿದೆ. ತಂತ್ರಜ್ಞಾನ, ಯಾಂತ್ರೀಕರಣ ಮತ್ತು…
ಮಂಡ್ಯ ಮೈಷುಗರ್ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿನ ಕಬ್ಬು ಅರೆಯುವ ಪ್ರಕ್ರಿಯೆ ಜೂನ್ 30ರಿಂದ…
ಇಂದು ಸಹಕಾರ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿಯಾಗುತ್ತಿದೆ. 8 ಲಕ್ಷಕ್ಕೂ ಅಧಿಕ ಸಹಕಾರಿ ಸಂಘಗಳು…