ಸುಳ್ಯ: ಆಲೆಟ್ಟಿ ಗ್ರಾಮದ ವಿವಿಧ ಭಾಗಗಳಲ್ಲಿ ಕಾಡಾನೆ ಹಾವಳಿ ತೀವ್ರಗೊಂಡಿದೆ. ಆಲೆಟ್ಟಿ ಗ್ರಾಮದ ತುದಿಯಡ್ಕ ಭಾಗದಲ್ಲಿ ಬುಧವಾರ ರಾತ್ರಿ ದಾಳಿ ಮಾಡಿದ ಆನೆಗಳ ಹಿಂಡು ಬಾಳೆ, ತೆಂಗು, ಅಡಕೆ ಮರಗಳನ್ನು ನಾಶಪಡಿಸಿದೆ. ಹಲವೆಡೆ ಚಿಕ್ಕ ಅಡಕೆ ಗಿಡಗಳನ್ನೂ ನಾಶ ಮಾಡಿವೆ. ದನಗಳಿಗೆ ತಿನ್ನಲು ಬೆಳೆಸಿದ ಸೀಮೆ ಹುಲ್ಲನ್ನು ಕೂಡ ಆನೆಗಳು ತಿಂದು ಹೋಗಿದೆ ಎನ್ನುತ್ತಾರೆ ಕೃಷಿಕರಾದ ಗಿರಿಜಾಶಂಕರ ತುದಿಯಡ್ಕ. 3-4 ಆನೆಗಳ ಹಿಂಡು ಕಳೆದ ಕೆಲವು ದಿನಗಳಿಂದ ಆಲೆಟ್ಟಿ ಗ್ರಾಮದ ವಿವಿಧ ಜನ ವಸತಿ ಪ್ರದೇಶಗಳ ಸಮೀಪದ ಕಾಡುಗಳಲ್ಲಿ ಬೀಡು ಬಿಟ್ಟಿದ್ದು ರಾತ್ರಿಯಾಗುತ್ತಲೆ ತೋಟಕ್ಕೆ ನುಗ್ಗಿ ಕೃಷಿ ಹಾನಿ ಮಾಡುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಡಾನೆಗಳನ್ನು ಕಾಡಿಗೆ ಅಟ್ಟುವ ಪ್ರಯತ್ನ ನಡೆಸುತ್ತಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel