(ಹರಿದಾಸ್ ಶೇಣಿ ಗೋಪಾಲಕೃಷ್ಣ ಭಟ್ಟರ ‘ಹರಿಶ್ಚಂದ್ರ)
ಪ್ರಸಂಗ : ರಾಜಾ ಹರಿಶ್ಚಂದ್ರ
(ಸಂದರ್ಭ : ವೀರಬಾಹುಕನ ಸಾಂಗತ್ಯದಲ್ಲಿ ಹರಿಶ್ಚಂದ್ರ ಸ್ಮಶಾನವಾಸಿಯಾಗುತ್ತಾನೆ. ಇಲ್ಲಿ ಸಂಪಾದಿಸಿದ ಧನವನ್ನು ವಿಶ್ವಾಮಿತ್ರ ಶಿಷ್ಯ ನಕ್ಷತ್ರಿಕನಿಗೆ ಹಸ್ತಾಂತರಿಸುತ್ತಾನೆ)
“ವಿಶ್ವಾಮಿತ್ರ ಶಿಷ್ಯರೇ, ಈಗಲಾದರೂ ನನ್ನನ್ನು ಆ ಪಾಶದಿಂದ ಬಿಡುಗಡೆಗೊಳಿಸುತ್ತೀರಾ? ಆಗಲಿ. ಧನ್ಯನಾದೆ. ಚಕ್ರವರ್ತಿಯಾಗಿದ್ದ ನಾನು ವೀರ ಬಾಹುಕನ ಆಜ್ಞೆಯಂತೆ ಪ್ರತಿಯೊಂದು ಹೆಣಕ್ಕೂ ಎಷ್ಟು ಹಣವನ್ನು ಸಂಪಾದಿಸಬೇಕೋ, ಅಷ್ಟು ಹಣವನ್ನು ಸಂಪಾದಿಸುತ್ತಾ, ಒಡೆಯನಿಗೆ ಸಲ್ಲಬೇಕಾಗಿದ್ದ ಹಣವನ್ನು ಅವನಿಗೆ ಸಮರ್ಪಿಸುತ್ತಿದ್ದೇನೆ.
ಪಟ್ಟಾಭಿಷೇಕವಾಗುವಾಗ ಹಿರಿಯರು ಹೇಳಿದ ಮಾತು ನೆನಪಾಗುತ್ತದೆ ಪ್ರಜೆಗಳೆಲ್ಲಾ ನಿನ್ನನ್ನು ಕೇಂದ್ರೀಕರಿಸಿಯೇ ಗೃಹಸ್ಥಾಶ್ರಮಿಗಳಾಗುತಾರೆ, ಅಲ್ಲ ಬ್ರಹ್ಮಚಾರಿಗಳಾಗಿರುತ್ತಾರೆ. ಅವನು ಯಾವುದೇ ಆಶ್ರಮ ಸ್ವೀಕಾರ ಮಾಡಬೇಕಿದ್ದರೂ ಕೂಡಾ ಭರವಸೆ ಸಿಂಹಾಸನದಲ್ಲಿ ಕುಳಿತ ನಿನ್ನಿಂದ ಬರಬೇಕು. ಆದ ಕಾರಣ ನೀನು ಕಾವಲುಗಾರನಾಗಬೇಕಾಗುತ್ತದೆ.
ನೀನಾಳು, ರಾಜ್ಯವನ್ನಾಳು. ಇಲ್ಲಿ ‘ಆಳು’ ಎಂಬ ಶಬ್ದ ಎರಡರ್ಥವನ್ನು ಕೊಡುತ್ತದೆ. ಬಾಕಿದ್ದವರನ್ನೆಲ್ಲ ‘ಆಳುವುದು’ ಎಂಬ ಅರ್ಥ ಒಂದಾದರೆ, ರೂಢಿಯ ಮಾತಿನಂತೆ ನೀನು ‘ಆಳು’! ಅವರೆಲ್ಲಾ ಆಳುಗಳಲ್ಲ, ಎಲ್ಲರನ್ನು ಆಳುವ ಆಳಾಗಿ ನೀನು ಬಾಳಬೇಕು. ಆ ಮಾತು ಈ ಹೊತ್ತು ಅನುಭವಕ್ಕೆ ಬಂತು. ಒಮ್ಮೆ ಎಲ್ಲರನ್ನು ಆಳಿದೆ. ಈಗ ನಿಜವಾದಂತಹ ‘ಆಳು’ ಶಬ್ದಕ್ಕೆ ಪ್ರತೀಕವೆನಿಸಿದ್ದೇನೆ. ಸುಡುಗಾಡಿನಲ್ಲಿ ಸುಡುಗಾಡಿನ ಕಾವಲುಗಾರನಾದ ಒಬ್ಬ ಚಾಂಡಾಲನ ಆಳು. ವ್ಯಸನವಿಲ್ಲ. ಯಾಕೆಂದರೆ, ಹಂಸತೂಲಿಕಾತಲ್ಪದಲ್ಲಿ ಪವಡಿಸಿದಂತಹ ಸುಖವನ್ನು ಮರೆಯಬೇಕಿದ್ದರೆ ಬರೇ ನೆಲದಲ್ಲಿ ಮಲಗಬೇಕು. ಈ ಜೀವನದಲ್ಲಿ ಜೀವನದ ಎರಡು ಪುಟವನ್ನು ಯಾವನು ಅಧ್ಯಯನ ಮಾಡುತ್ತಾನೋ ಅವನು ಮರಳಿ ಹುಟ್ಟುವುದಿಲ್ಲವಂತೆ. ಪಾತ್ರಕ್ಕೆ ಬಂದುದೇ ಪಂಚಾಮೃತ. ಇಲ್ಲೇ ಇರುತ್ತೇನೆ…”
ಚಾಮರಾಜನಗರ ಜಿಲ್ಲೆಯ ಸಿದ್ದಾಪುರ ಗ್ರಾಮದ ಸಾವಿರಾರು ಎಕರೆ ಜಮೀನು ರಾಜವಂಶಸ್ಥರಿಗೆ ಸೇರಿದ್ದು, ಅದನ್ನು…
15.04.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಸ್ಮಾರ್ಟ್ ಕೃಷಿಯು ಕೃಷಿ ವಲಯದಲ್ಲಿ ಕ್ರಾಂತಿಕಾರಕ ಬದಲಾವಣೆ ತರುತ್ತಿದೆ. ತಂತ್ರಜ್ಞಾನ, ಯಾಂತ್ರೀಕರಣ ಮತ್ತು…
ಮಂಡ್ಯ ಮೈಷುಗರ್ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿನ ಕಬ್ಬು ಅರೆಯುವ ಪ್ರಕ್ರಿಯೆ ಜೂನ್ 30ರಿಂದ…
ಇಂದು ಸಹಕಾರ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿಯಾಗುತ್ತಿದೆ. 8 ಲಕ್ಷಕ್ಕೂ ಅಧಿಕ ಸಹಕಾರಿ ಸಂಘಗಳು…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490