ಸಂಪಾಜೆ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಶುಕ್ರವಾರ ತಡರಾತ್ರಿ ಮಾತಿನ ಚಕಮಕಿ ನಡೆದು ಕೊಲೆಯಲ್ಲಿ ಅಂತ್ಯವಾದ ಘಟನೆ ಪೆರಾಜೆಯ ಪೀಚೆ ಮನೆ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಉತ್ತರ ಕುಮಾರ ಎಂಬವರು ಮೃತಪಟ್ಟಿದ್ದಾರೆ.
ಮದ್ಯಪಾನ ಮಾಡಿ ಮನೆಗೆ ನುಗ್ಗಿ ಆಸ್ತಿ ವಿಚಾರವಾಗಿ ಗಲಾಟೆ ಮಾಡಿದ ಮೈದುನನ್ನು ಅತ್ತಿಗೆ ಹಾಗೂ ಆಕೆಯ ಪುತ್ರ ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾರೆ. ಆರೋಪಿಗಳಾದ ದಿ.ಕೇಶವ ಅವರ ಪತ್ನಿ ತಾರಿಣಿ , ಹಾಗೂ ಪುತ್ರ ಧರಣೀಧರ ಇವರನ್ನು ಮಡಿಕೇರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶುಕ್ರವಾರ ತಡರಾತ್ರಿ ಸ್ನೇಹಿತರ ಮನೆಗೆ ಹೋಗಿ ಬಂದಿದ್ದ ಉತ್ತರ ಕುಮಾರ ಅವರು ತಾರಿಣಿ ಅವರ ಮನೆಯ ಬಳಿ ಬೈಕ್ ಸದ್ದು ಮಾಡುತ್ತಿರುವುದು ಕೇಳಿ ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ. ಆಸ್ತಿ ತಕರಾರು ಹಿಂದೆಯೇ ಇದ್ದ ಕಾರಣ ಮಾತಿಗೆ ಮಾತು ಬೆಳೆದು ಪಾನಮತ್ತರಾಗಿದ್ದ ಉತ್ತರ ಕುಮಾರ ತಾರಿಣಿಯವರ ಮನೆಯಂಗಳಕ್ಕೆ ಬಂದು ಬೈಯ್ಯತೊಡಗಿದರೆನ್ನಲಾಗಿದೆ.
ಈ ಸಂದರ್ಭ ಉತ್ತರ ಕುಮಾರ ಅವರು ತಾರಿಣಿ ಅವರ ಮನೆ ಪ್ರವೇಶಿಸಿಲು ಯತ್ನಿಸಿದಾಗ ಕತ್ತಿಯಿಂದ ಕಡಿದರು ಎನ್ನಲಾಗಿದೆ. ಈ ವೇಳೆ ಗಂಭೀರ ಗಾಯಗೊಂಡ ಉತ್ತರ ಕುಮಾರ ಅಂಗಳದಲ್ಲಿ ಬಿದ್ದ ಸ್ಥಳದಲ್ಲಿಯೇ ಸಾವನ್ನಪ್ಪಿದರೆನ್ನಲಾಗಿದೆ.
ಶನಿವಾರ ಬೆಳಗ್ಗೆ ಮಡಿಕೇರಿಯಿಂದ ಪೊಲೀಸ್ ಅಧಿಕಾರಿಗಳು ಆಗಮಿಸಿ ತನಿಖೆ ಆರಂಭಿಸಿದ್ದಾರೆ. ತಾರಿಣಿ ಮತ್ತು ಧರಣೀಧರ ಅವರನ್ನು ವಶಕ್ಕೆ ಪಡೆದಿದ್ದಾರೆ.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…