ಸಂಪಾಜೆ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಶುಕ್ರವಾರ ತಡರಾತ್ರಿ ಮಾತಿನ ಚಕಮಕಿ ನಡೆದು ಕೊಲೆಯಲ್ಲಿ ಅಂತ್ಯವಾದ ಘಟನೆ ಪೆರಾಜೆಯ ಪೀಚೆ ಮನೆ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಉತ್ತರ ಕುಮಾರ ಎಂಬವರು ಮೃತಪಟ್ಟಿದ್ದಾರೆ.
ಮದ್ಯಪಾನ ಮಾಡಿ ಮನೆಗೆ ನುಗ್ಗಿ ಆಸ್ತಿ ವಿಚಾರವಾಗಿ ಗಲಾಟೆ ಮಾಡಿದ ಮೈದುನನ್ನು ಅತ್ತಿಗೆ ಹಾಗೂ ಆಕೆಯ ಪುತ್ರ ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾರೆ. ಆರೋಪಿಗಳಾದ ದಿ.ಕೇಶವ ಅವರ ಪತ್ನಿ ತಾರಿಣಿ , ಹಾಗೂ ಪುತ್ರ ಧರಣೀಧರ ಇವರನ್ನು ಮಡಿಕೇರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶುಕ್ರವಾರ ತಡರಾತ್ರಿ ಸ್ನೇಹಿತರ ಮನೆಗೆ ಹೋಗಿ ಬಂದಿದ್ದ ಉತ್ತರ ಕುಮಾರ ಅವರು ತಾರಿಣಿ ಅವರ ಮನೆಯ ಬಳಿ ಬೈಕ್ ಸದ್ದು ಮಾಡುತ್ತಿರುವುದು ಕೇಳಿ ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ. ಆಸ್ತಿ ತಕರಾರು ಹಿಂದೆಯೇ ಇದ್ದ ಕಾರಣ ಮಾತಿಗೆ ಮಾತು ಬೆಳೆದು ಪಾನಮತ್ತರಾಗಿದ್ದ ಉತ್ತರ ಕುಮಾರ ತಾರಿಣಿಯವರ ಮನೆಯಂಗಳಕ್ಕೆ ಬಂದು ಬೈಯ್ಯತೊಡಗಿದರೆನ್ನಲಾಗಿದೆ.
ಈ ಸಂದರ್ಭ ಉತ್ತರ ಕುಮಾರ ಅವರು ತಾರಿಣಿ ಅವರ ಮನೆ ಪ್ರವೇಶಿಸಿಲು ಯತ್ನಿಸಿದಾಗ ಕತ್ತಿಯಿಂದ ಕಡಿದರು ಎನ್ನಲಾಗಿದೆ. ಈ ವೇಳೆ ಗಂಭೀರ ಗಾಯಗೊಂಡ ಉತ್ತರ ಕುಮಾರ ಅಂಗಳದಲ್ಲಿ ಬಿದ್ದ ಸ್ಥಳದಲ್ಲಿಯೇ ಸಾವನ್ನಪ್ಪಿದರೆನ್ನಲಾಗಿದೆ.
ಶನಿವಾರ ಬೆಳಗ್ಗೆ ಮಡಿಕೇರಿಯಿಂದ ಪೊಲೀಸ್ ಅಧಿಕಾರಿಗಳು ಆಗಮಿಸಿ ತನಿಖೆ ಆರಂಭಿಸಿದ್ದಾರೆ. ತಾರಿಣಿ ಮತ್ತು ಧರಣೀಧರ ಅವರನ್ನು ವಶಕ್ಕೆ ಪಡೆದಿದ್ದಾರೆ.
ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಸಕ್ರಿಯವಾಗಿದ್ದು, ಕರಾವಳಿ ಮತ್ತು ಮಲೆನಾಡು ಸೇರಿದಂತೆ ಹಲವೆಡೆ ಉತ್ತಮ…
ರಾಜ್ಯದಲ್ಲಿ ಸದ್ಯ ಯಾವುದೇ ರೀತಿಯ ವಿದ್ಯುತ್ ಲೋಡ್‌ಶೆಡ್ಡಿಂಗ್ ಇಲ್ಲ ಎಂದು ಇಂಧನ ಸಚಿವ…
2027-28ನೇ ಸಾಲಿನಲ್ಲಿ ನವೋದಯ ವಿದ್ಯಾಲಯಗಳ 9 ಮತ್ತು 11ನೇ ತರಗತಿಯ ಖಾಲಿ ಸ್ಥಾನಗಳಿಗೆ…
1973ರ ಅಡಿಕೆ ಮಾರುಕಟ್ಟೆ ಬಿಕ್ಕಟ್ಟು ಉತ್ಪಾದನೆ ಹೆಚ್ಚಳಕ್ಕೆ ತಕ್ಕಂತೆ ಮಾರುಕಟ್ಟೆ ಹೀರಿಕೊಳ್ಳುವ ಸಾಮರ್ಥ್ಯವೂ…
ಅರಬ್ಬಿ ಸಮುದ್ರದ ಉಡುಪಿ–ದಕ್ಷಿಣ ಕನ್ನಡ ಕರಾವಳಿ ಸಮೀಪ ರೂಪುಗೊಂಡಿರುವ ಮೇಲ್ಮೈ ಸುಳಿಗಾಳಿಯಿಂದ ಕರಾವಳಿ,…
ಅಡಿಕೆ ದರ ಕುಸಿಯುತ್ತಿರುವ ಸಂದರ್ಭದಲ್ಲಿ ಕೃಷಿ ಕೂಲಿ ದರ ನಿರಂತರವಾಗಿ ಏರುತ್ತಿರುವುದು ಮಲೆನಾಡಿನ…