ಆ.18: ದಕ್ಷಿಣ ಕನ್ನಡ ಜಿಲ್ಲಾ ಎಸ್ಎಸ್ಎಫ್ ವತಿಯಿಂದ 100ನೇ ರಕ್ತದಾನ ಶಿಬಿರ

August 16, 2019
3:45 PM

ಸುಳ್ಯ: ದಕ್ಷಿಣ ಕನ್ನಡ ಜಿಲ್ಲಾ ಎಸ್ಎಸ್ಎಫ್ ನ ಬ್ಲಡ್ ಸೈಬೋ ಅಧೀನದಲ್ಲಿ 100ನೇ ರಕ್ತದಾನ ಶಿಬಿರವು ಆ.18 ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ ಎಂದು ಬ್ಲಡ್ ಸೈಬೋ ಸುಳ್ಯ ಡಿವಿಜನ್ ಉಸ್ತುವಾರಿ ಅಬೂಬಕ್ಕರ್ ಸಿದ್ದಿಕ್ ಗೂನಡ್ಕ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement
Advertisement
Advertisement

ಎಸ್ಎಸ್ಎಫ್ ರಕ್ತದಾನಿಗಳ ತಂಡವನ್ನು ಕಟ್ಟಿ ಬೆಳೆಸಿದ್ದು ಎರಡು ದಶಕಗಳಲ್ಲಿ ಸಾವಿರಾರು ಮಂದಿಗೆ ರಕ್ತದಾನದ ಮೂಲಕ ಜೀವದಾನ ನೀಡಿದೆ. ಇದಕ್ಕಾಗಿ ಪ್ರತ್ಯೇಕ ಬ್ಲಡ್ ಸೈಬೋ ಎಂಬ ಪ್ರತ್ಯೇಕ ತಂಡ ಅಸ್ತಿತ್ವದಲ್ಲಿದೆ. ಬ್ಲಡ್ ಸೈಬೋ ಮೂಲಕ ಎರಡು ವರುಷದಲ್ಲಿ 99 ರಕ್ತದಾ‌ನ ಶಿಬಿರವನ್ನು ಹಮ್ಮಿಕೊಂಡಿದ್ದು ದಕ, ಉಡುಪಿ, ಕಾಸರಗೋಡು ಜಿಲ್ಲೆಯ ನಾನಾ ಆಸ್ಪತ್ರೆಗಳ ರೋಗಿಗಳಿಗೆ 7260 ಯೂನಿಟ್ ರಕ್ತ ದಾನ ಮಾಡಿದೆ‌. ಜಾತಿ, ಧರ್ಮ,ಭೇದವಿಲ್ಲದೆ ಎಲ್ಲರಿಗೂ ಅಗತ್ಯ ಸಮಯದಲ್ಲಿ ರಕ್ತವನ್ನು ಪೂರೈಸುವ ಕೆಲಸ ಮಾಡುತ್ತಿದೆ‌. ಅಲ್ಲದೆ ಪ್ರವಾಹ ಮತ್ತು ನೆರೆ ಪೀಡಿತ ಪ್ರದೇಶದಲ್ಲಿ ಧನ ಸಹಾಯ, ವಸ್ತ್ರವಿತರಣೆ, ಮನೆಗಳ ಶುಚಿತ್ವ ಮತ್ತು ರಕ್ಷಣಾ ಕಾರ್ಯದಲ್ಲಿ ಕೈ ಜೋಡಿಸುತ್ತಿದೆ ಎಂದರು.

Advertisement

ಸುದ್ದಿಗೋಷ್ಠಿಯಲ್ಲಿ ಎಸ್ ವೈ ಎಸ್ ಸೆಂಟರ್ ಅಧ್ಯಕ್ಷ ಎ.ಬಿ.ಅಶ್ರಫ್ ಸಹದಿ, ಪ್ರಧಾನ ಕಾರ್ಯದರ್ಶಿ ಅಂದುಂಞಿ ಗೋರಡ್ಕ,ಎಸ್ಎಸ್ಎಫ್ ಸುಳ್ಯ ಸೆಕ್ಟರ್ ಅಧ್ಯಕ್ಷ ಸ್ವಬಾಹ್ ಹಿಮಮಿ,ಎಸ್ಎಸ್ಎಫ್ ಜಿಲ್ಲಾ ಸದಸ್ಯ ಎ.ಎಂ. ಫೈಝಲ್ ಝುಹ್ರಿ ಕಲ್ಲುಗುಂಡಿ,ಕೆಸಿಎಫ್ ಅಬುದಾಬಿ ವಲಯ ಅಧ್ಯಕ್ಷ ಎಬಿ ಹಸೈನಾರ್ ಅಮಾನಿ, ಡಿವಿಷನ್ ಸದಸ್ಯ ನೌಶಾದ್ ಕೆರೆಮೂಲೆ,ಎಸ್ ವೈ ಎಸ್ ಹಿಸಾಬ ನಾಯಕ ಸಿದ್ದಿಕ್ ಕಟ್ಟೆಕ್ಕಾರ್ ಉಪಸ್ಥಿತರಿದ್ದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |
January 19, 2025
11:01 AM
by: ಸಾಯಿಶೇಖರ್ ಕರಿಕಳ
ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ
January 19, 2025
7:22 AM
by: The Rural Mirror ಸುದ್ದಿಜಾಲ
ಅಡಿಕೆ ಬೆಳೆಗಾರರಿಗೆ ಆತಂಕ ಬೇಡ | ಅಡಿಕೆ ಬೆಳೆಗಾರರ ಸಮಸ್ಯೆ ಬಗಹೆರಿಸಲು ಸಿದ್ದ | ಕೇಂದ್ರ ಸಚಿವ ಶಿವರಾಜ್ ಸಿಂಗ್  ಚಾವ್ಙಾಣ್ ಭರವಸೆ |
January 19, 2025
7:03 AM
by: The Rural Mirror ಸುದ್ದಿಜಾಲ
ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ
January 16, 2025
3:11 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror