ಸುಳ್ಯ: ದಕ್ಷಿಣ ಕನ್ನಡ ಜಿಲ್ಲಾ ಎಸ್ಎಸ್ಎಫ್ ನ ಬ್ಲಡ್ ಸೈಬೋ ಅಧೀನದಲ್ಲಿ 100ನೇ ರಕ್ತದಾನ ಶಿಬಿರವು ಆ.18 ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ ಎಂದು ಬ್ಲಡ್ ಸೈಬೋ ಸುಳ್ಯ ಡಿವಿಜನ್ ಉಸ್ತುವಾರಿ ಅಬೂಬಕ್ಕರ್ ಸಿದ್ದಿಕ್ ಗೂನಡ್ಕ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಎಸ್ಎಸ್ಎಫ್ ರಕ್ತದಾನಿಗಳ ತಂಡವನ್ನು ಕಟ್ಟಿ ಬೆಳೆಸಿದ್ದು ಎರಡು ದಶಕಗಳಲ್ಲಿ ಸಾವಿರಾರು ಮಂದಿಗೆ ರಕ್ತದಾನದ ಮೂಲಕ ಜೀವದಾನ ನೀಡಿದೆ. ಇದಕ್ಕಾಗಿ ಪ್ರತ್ಯೇಕ ಬ್ಲಡ್ ಸೈಬೋ ಎಂಬ ಪ್ರತ್ಯೇಕ ತಂಡ ಅಸ್ತಿತ್ವದಲ್ಲಿದೆ. ಬ್ಲಡ್ ಸೈಬೋ ಮೂಲಕ ಎರಡು ವರುಷದಲ್ಲಿ 99 ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದು ದಕ, ಉಡುಪಿ, ಕಾಸರಗೋಡು ಜಿಲ್ಲೆಯ ನಾನಾ ಆಸ್ಪತ್ರೆಗಳ ರೋಗಿಗಳಿಗೆ 7260 ಯೂನಿಟ್ ರಕ್ತ ದಾನ ಮಾಡಿದೆ. ಜಾತಿ, ಧರ್ಮ,ಭೇದವಿಲ್ಲದೆ ಎಲ್ಲರಿಗೂ ಅಗತ್ಯ ಸಮಯದಲ್ಲಿ ರಕ್ತವನ್ನು ಪೂರೈಸುವ ಕೆಲಸ ಮಾಡುತ್ತಿದೆ. ಅಲ್ಲದೆ ಪ್ರವಾಹ ಮತ್ತು ನೆರೆ ಪೀಡಿತ ಪ್ರದೇಶದಲ್ಲಿ ಧನ ಸಹಾಯ, ವಸ್ತ್ರವಿತರಣೆ, ಮನೆಗಳ ಶುಚಿತ್ವ ಮತ್ತು ರಕ್ಷಣಾ ಕಾರ್ಯದಲ್ಲಿ ಕೈ ಜೋಡಿಸುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಸ್ ವೈ ಎಸ್ ಸೆಂಟರ್ ಅಧ್ಯಕ್ಷ ಎ.ಬಿ.ಅಶ್ರಫ್ ಸಹದಿ, ಪ್ರಧಾನ ಕಾರ್ಯದರ್ಶಿ ಅಂದುಂಞಿ ಗೋರಡ್ಕ,ಎಸ್ಎಸ್ಎಫ್ ಸುಳ್ಯ ಸೆಕ್ಟರ್ ಅಧ್ಯಕ್ಷ ಸ್ವಬಾಹ್ ಹಿಮಮಿ,ಎಸ್ಎಸ್ಎಫ್ ಜಿಲ್ಲಾ ಸದಸ್ಯ ಎ.ಎಂ. ಫೈಝಲ್ ಝುಹ್ರಿ ಕಲ್ಲುಗುಂಡಿ,ಕೆಸಿಎಫ್ ಅಬುದಾಬಿ ವಲಯ ಅಧ್ಯಕ್ಷ ಎಬಿ ಹಸೈನಾರ್ ಅಮಾನಿ, ಡಿವಿಷನ್ ಸದಸ್ಯ ನೌಶಾದ್ ಕೆರೆಮೂಲೆ,ಎಸ್ ವೈ ಎಸ್ ಹಿಸಾಬ ನಾಯಕ ಸಿದ್ದಿಕ್ ಕಟ್ಟೆಕ್ಕಾರ್ ಉಪಸ್ಥಿತರಿದ್ದರು.
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…