ಪುತ್ತೂರು: ರಾಜ್ಯ ಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲದ ವತಿಯಿಂದ ಲಯನ್ಸ್ ಕ್ಲಬ್ ಪುತ್ತೂರು,ಜನಜಾಗೃತಿ ವೇದಿಕೆ ಸವಣೂರು ವಲಯ ಇವುಗಳ ಸಹಯೋಗದೊಂದಿಗೆ ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಹಾಗೂ ಭಕ್ತವೃಂದದ ಸಹಕಾರದಲ್ಲಿ ಶ್ರವಣರಂಗ ಪ್ರತಿಷ್ಠಾನ ಸವಣೂರು ಪ್ರಸ್ತುತ ಪಡಿಸುವ ಯಕ್ಷಗಾನ ತಾಳಮದ್ದಳೆ ಸಪ್ತಾಹ ಆ.4 ರಿಂದ ಆ.10ರವರೆಗೆ ನಡೆಯಲಿದೆ.
ಧರ್ಮ ಜಾಗೃತಿಯನ್ನು ಮಾಡುವ ಮೂಲ ಉದ್ದೇಶ ಮತ್ತು ಯುವ ಪಿಳಿಗೆಗೆ ಧಾರ್ಮಿಕವಾದ ಚಿಂತನೆ, ಪುರಾಣಗಳ ಮೌಲ್ಯಗಳನ್ನು ತಿಳಿಸುವ ಉದ್ದೇಶದಿಂದ ಯಕ್ಷಗಾನ ತಾಳಮದ್ದಳೆ ಸಪ್ತಾಹವನ್ನು ಆಯೋಜಿಸಲಾಗಿದ್ದು, ತಾಳಮದ್ದಳೆಯಲ್ಲಿ ಮಹಾಭಾರತ ಕಥೆಯ ಪ್ರಚಾರ ಮಾಡಲಾಗುತ್ತದೆ ಎಂದು ಸವಣೂರು ಯುವಕ ಮಂಡಲದ ಮಾಜಿ ಅಧ್ಯಕ್ಷರಾದ ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಸವಣೂರಿನಲ್ಲಿ ಇದೇ ಪ್ರಥಮ ಬಾರಿಗೆ ಯಕ್ಷಗಾನ ತಾಳಮದ್ದಳೆ ಸಪ್ತಾಹ ನಡೆಯಲಿದ್ದು,ಸಾಂಸ್ಕೃತಿಕ ಚಟುವಟಿಕೆಗಳಿಗೆ ಸದಾ ಪ್ರೋತ್ಸಾಹ ವನ್ನು ಸವಣೂರಿನ ಜನತೆ ನೀಡುತ್ತಿದ್ದಾರೆ.ಈ ನಿಟ್ಟಿನಲ್ಲಿ ತಾಳಮದ್ದಳೆ ಸಪ್ತಾಹವೂ ಯಶಸ್ವಿಯಾಗಿ ನಡೆಯಲಿದೆ ಎಂಬ ವಿಶ್ವಾಸ ಇದೆ.ರಾಜ್ಯ ಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲದ ವತಿಯಿಂದ ಸುವರ್ಣ ಸಂಭ್ರಮ ಹೊಸ್ತಿಲಲ್ಲಿರುವ ಲಯನ್ಸ್ ಕ್ಲಬ್ ಪುತ್ತೂರು, ಜನಜಾಗೃತಿ ವೇದಿಕೆ ಸವಣೂರು ವಲಯ ಇವುಗಳ ಸಹಯೋಗದೊಂದಿಗೆ ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಹಾಗೂ ಭಕ್ತವೃಂದದ ಸಹಕಾರದಲ್ಲಿ ಶ್ರವಣರಂಗ ಪ್ರತಿಷ್ಠಾನ ಸವಣೂರು ತಾಳಮದ್ದಳೆಯನ್ನು ಪ್ರಸ್ತುತಿ ಪಡಿಸಲಿದೆ ಎಂದ ಅವರು ಸವಣೂರಿನಲ್ಲಿ ಇದೇ ಪ್ರಥಮ ಬಾರಿಗೆ ಯಕ್ಷಗಾನ ತಾಳಮದ್ದಳೆ ಸಪ್ತಾಹ ನಡೆಯಲಿದ್ದು, ತಾಳಮದ್ದಳೆ ಪ್ರತಿ ದಿನ ಸಂಜೆ ಗಂಟೆ 5 ರಿಂದ ರಾತ್ರಿ 9ರ ತನಕ ನಡೆಯಲಿದೆ. ರಾತ್ರಿ ದೇವಸ್ಥಾನದ ವತಿಯಿಂದ ಅನ್ನಸಂತರ್ಪಣೆ ನಡೆಯಲಿದೆ ಎಂದ ಅವರು ತಾಳಮದ್ದಳೆಯ ವಿವರಣೆಯನ್ನು ನೀಡಿದರು.
ಆ.4ರಂದು ಸಂಜೆ 5 ಕ್ಕೆ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ, ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈ ಅವರು ತಾಳಮದ್ದಳೆ ಸಪ್ತಾಹವನ್ನು ಉದ್ಘಾಟಲಿದ್ದಾರೆ. ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಸವಣೂರು ಸಿಎ ಬ್ಯಾಂಕ್‌ನ ಅಧ್ಯಕ್ಷ ಗಣೇಶ ನಿಡ್ವಣ್ಣಾಯ, ಲಯನ್ಸ್ ಕ್ಲಬ್ ವಲಯ ಚೇರ್‌ಮ್ಯಾನ್ ಆನಂದ ರೈ, ನಿವೃತ ಡಿವೈಸ್ಪಿ ಜಗನ್ನಾಥ ರೈ ನುಳಿಯಾಲು, ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ನವೀನ್ ಕುಮಾರ್ ಶೆಟ್ಟಿ ಮುಗೇರುಗುತ್ತು, ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಮನೋಹರ ಕೆ.ವಿ, ಪೂರ್ವಾಧ್ಯಕ್ಷ ಭಾಸ್ಕರ ಕೋಡಿಂಬಾಳ, ಸವಣೂರು ಬೊಳ್ಳಿಬೊಳ್ಪು ತುಳು ಕೂಟದ ಅಧ್ಯಕ್ಷ ಪ್ರಕಾಶ್‌ಚಂದ್ರ ರೈ ಮುಗೇರುಗುತ್ತು, ಪುಣ್ಚಪ್ಪಾಡಿ ಗೌರಿ ಗಣೇಶ ಸೇವಾ ಸಂಘದ ಅಧ್ಯಕ್ಷ ಸಚಿನ್ ಕುಮಾರ್ ಜೈನ್, ಎನ್ ಬಾಲಕೃಷ್ಣ ಕೊಳತ್ತಾಯ ,ಸವಣೂರು ಮೆಸ್ಕಾಂ ಜೆಇ ನಾಗರಾಜ್ ಕೆ ಭಾಗವಹಿಸಲಿದ್ದಾರೆ. ಸಭೆಯ ಬಳಿಕ ರಾತ್ರಿ 9 ರವರೆಗೆ ಯೋಜನಾಗಂಧಿ ಯಕ್ಷಗಾನ ತಾಳಮದ್ದಳೆ ಯಕ್ಷನಂದನ ಕಲಾ ಸಂಘ ಗೋಕುಲ ನಗರ ಕೊಲ ಅವರ ಪ್ರಸ್ತುತಿಯಲ್ಲಿ ಗಣರಾಜ್ ಕುಂಬ್ಲೆ ಸಂಯೋಜನೆಯಲ್ಲಿ ನಡೆಯಲಿದೆ.
ಆ.5ರಂದು ಜ್ಯೋತಿಷಿ ಭಾಸ್ಕರ ಬಲ್ಯಾಯ ಮದ್ಲ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಬಿ.ಕೆ.ರಮೇಶ್ ಕಲ್ಲೂರಾಯ ಬಂಬಿಲ ಅವರು ಕಲಾವಿದರಿಗೆ ಗೌರವಿಸಲಿದ್ದಾರೆ. ಅತಿಥಿಗಳಾಗಿ ಸವಣೂರು ಸಿಎ ಬ್ಯಾಂಕ್ ನಿರ್ದೇಶಕ ಸೋಮನಾಥ ಕನ್ಯಾಮಂಗಲ, ಧ.ಗ್ರಾ.ಯೋ.ಸವಣೂರು ಬಿ ಒಕ್ಕೂಟದ ಅಧ್ಯಕ್ಷ ವಿಜಯ ಗೌಡ ಪಾಲ್ಗೊಳ್ಳುವರು. ಸಭೆಯ ಬಳಿಕ ದುರ್ಗಾಂಬಾ ಕಲಾ ಸಂಗಮ ಶ್ರೀಕ್ಷೇತ್ರ ಶರವೂರು ಅವರ ಪ್ರಸ್ತುತಿಯಲ್ಲಿ ಚಂದ್ರಶೇಖರ್ ಆಲಂಕಾರು ಸಂಯೋಜನೆಯಲ್ಲಿ ಅಂಬಾ ಶಪಥ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಆ.6 ರಂದು ವಸಂತ್ ಎಸ್ ವೀರಮಮಗಲ ತಾಳಮದ್ದಳೆ ಚಾಲನೆ ನೀಡಲಿದ್ದಾರೆ. ಉದ್ಯಮಿ ಎನ್ ಸುಂದರ ರೈ ಅವರು ಕಲಾವಿದರನ್ನು ಗೌರವಿಸಲಿದ್ದಾರೆ. ಅತಿಥಿಗಳಾಗಿ ವಾಸುದೇವ ಇಡ್ಯಾಡಿ, ಕುಸುಮಾ ಪಿ.ಶೆಟ್ಟಿ ಭಾಗವಹಿಸಲಿದ್ದು, ಸಭೆಯ ಬಳಿಕ ರಾತ್ರಿ ಬೊಳುವಾರು ಆಂಜನೇಯ ಯಕ್ಷಗಾನ ಕಲಾ ಸಂಘ ಅವರ ಪ್ರಸ್ತುತಿಯಲ್ಲಿ ಭಾಸ್ಕರ ಬಾರ್ಯ ಸಂಯೋಜನೆಯಲ್ಲಿ ಸುಭದ್ರಾ ಕಲ್ಯಾಣ ಯಕ್ಷಗಾನ ತಾಳಮದ್ದಳೆ ಜರುಗಲಿದೆ.
ಆ.7ರಂದು ಪುತ್ತೂರು ಎವಿಜಿ ಅಸೋಸಿಯೆಟ್ಸ್‌ನ ಮಾಲಕ ಎ.ವಿ.ನಾರಾಯಣ ದೀಪ ಪ್ರಜ್ವಲಿಸುವರು. ವೆಂಕಪ್ಪ ಶೆಟ್ಟಿ ಸವಣೂರುಗುತ್ತು ಅವರು ಕಲಾವಿದರಿಗೆ ಗೌರವಾರ್ಪಣೆ ಮಾಡುವರು. ಅತಿಥಿಗಳಾಗಿ ಚಂದ್ರಶೇಖರ ಪಿ,ವತ್ಸಲಾ ರಾಜ್ಮಿ ಪಾಲ್ಗೊಳ್ಳುವರು. ಸಭೆಯ ಬಳಿಕ ರಾತ್ರಿ 9ರವರೆಗೆ ಬೆಟ್ಟಂಪಾಡಿ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಸಂಘಅವರ ಪ್ರಸ್ತುತಿಯಲ್ಲಿ ಭಾಸ್ಕರ ಶೆಟ್ಟಿ ಸಂಯೋಜನೆಯಲ್ಲಿ ಮಾಗಧ ವಧೆ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಆ.8 ರಂದು ಪ್ರಸಾದ್ ಪಾಂಗಣ್ಣಾಯ ದೀಪ ಪ್ರಜ್ವಲಿಸುವರು. ಶಿವರಾಮ ಗೌಡ ಮೆದು ಅವರು ಕಲಾವಿದರಿಗೆ ಗೌರವಾರ್ಪಣೆ ಮಾಡುವರು. ಅತಿಥಿಗಳಾಗಿ ರಾಶಿ ಕಾಂಪ್ಲೆಕ್ಸ್‌ನ ಚಂದ್ರಶೇಖರ ಬರೆಪ್ಪಾಡಿ, ದೈಪಿಲ ಕ್ರೀಡಾ ಸೇವಾ ಸಂಘದ ಗೌರವಾಧ್ಯಕ್ಷ ಪ್ರವೀಣ್ ಕುಂಟ್ಯಾನ ಪಾಲ್ಗೊಳ್ಳುವರು. ಸಭೆಯ ಬಳಿಕ ರಾತ್ರಿ ಶಿಕ್ಷಕರ ಯಕ್ಷಚಗಾನ ಒಕ್ಕೂಟ ಸುಳ್ಯ ಅವರ ಪ್ರಸ್ತುತಿಯಲ್ಲಿ ಲಿಂಗಪ್ಪ ಬೆಳ್ಳಾರೆ ಸಂಯೋಜನೆಯಲ್ಲಿ ಸತ್ವ ಪರೀಕ್ಷೆ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಆ.9 ರಂದು ಡಾ.ಸುಬ್ರಹ್ಮಣ್ಯ ಭಟ್ ದೀಪ ಪ್ರಜ್ವಲಿಸುವರು. ಜ್ಯೋತಿಷಿ ವಿಶ್ವಮೂರ್ತಿ ಬಡಿಕಿಲ್ಲಾಯ ಅವರು ಕಲಾವಿದರಿಗೆ ಗೌರವಾರ್ಪಣೆ ಮಾಡುವರು. ಅತಿಥಿಗಳಾ ಗಿ ಆಶಾ ಪ್ರವೀಣ್ ಕಂಪ,ನಾರಾಯಣ ಗೌಡ ಪೂವ ಪಾಲ್ಗೊಳ್ಳುವರು. ಸಭೆಯ ಬಳಿಕ ರಾತ್ರಿ ೯ರವರೆಗೆ ಅಮೃತ ಕಲಶ ಯಕ್ಷಗಾನ ತಾಳಮದ್ದಳೆ ಯಕ್ಷ ಕಲಾ ಒಕ್ಕೂಟ ಮಂಗಳೂರು ಅವರ ಪ್ರಸ್ತುತಿಯಲ್ಲಿ ಪ್ರಸಾದ ಆರೇಲ್ತಡಿ ಸಂಯೋಜನೆಯಲ್ಲಿ ನಡೆಯಲಿದೆ.
ಆ.10 ರಂದು ಯಕ್ಷ ಸಂಪನ್ನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಕಿನಾರ ವಹಿಸುವರು.ಶ್ರೀಕ್ಷೇತ್ರ ಹನುಮಗಿರಿಯ ಧರ್ಮದರ್ಶಿ ನನ್ಯ ಅಚ್ಚುತ ಮೂಡಿತ್ತಾಯ ಸಮಾರೋಪ ಭಾಷಣ ಮಾಡುವರು.ಅತಿಥಿಗಳಾಗಿ ಲಯನ್ಸ್ ಕ್ಲಬ್ ರೀಜನ್ ೭ರ ಚೆಯರ್ ಪರ್ಸನ್ ಕೃಷ್ಣ ಪ್ರಶಾಂತ್,ನೋಟರಿ ನ್ಯಾಯವಾದಿ ಚಿದಾನಂದ ಬಲಾಡಿ,ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ಟಾರ್ ಚಂದ್ರಹಾಸ ರೈ ಬಿ,ಸುಜಿತ್ ಕುಮಾರ್ ಶೆಟ್ಟಿ ಪಾಲ್ಗೊಳ್ಳುವರು.ಯುವ ಭಾಗವತ ರಾಮಚಂದ್ರ ಅರ್ಭಿತ್ತಾಯ ಸುಬ್ರಹ್ಮಣ್ಯ ಅವರಿಗೆ ಯಕ್ಷ ಸನ್ಮಾನ ನಡೆಯಲಿದ್ದು,ಮುಗೇರು ದೇವಸ್ಥಾನದ ಪ್ರಧಾನ ಅರ್ಚಕ ಪದ್ಮನಾಭ ಕುಂಜತ್ತಾಯ ಸಮ್ಮಾನಿಸುವರು.
ಯಕ್ಷಗಾನ ತಾಳಮದ್ದಳೆ ಆರಂಭಕ್ಕೆ ಶಂಕರ ನಾಕ್ ಮೆದು ದೀಪ ಪ್ರಜ್ವಲಿಸುವರು. ಗೋಪಾಲಕೃಷ್ಣ ಪಟೇಲ್ ಅವರು ಕಲಾವಿದರಿಗೆ ಗೌರವಾರ್ಪಣೆ ಮಾಡುವರು. ಅತಿಥಿಗಳಾ ಗಿ ರಾಜರಾಮ ಪ್ರಭು,ಅಜಿತ್ ಕಾರಿಂಜ ಪಾಲ್ಗೊಳ್ಳುವರು. ಸಭೆಯ ಬಳಿಕ ರಾತ್ರಿ ೯ರವರೆಗೆ ಊರುಭಂಗ ಯಕ್ಷಗಾನ ತಾಳಮದ್ದಳೆ ಶ್ರವಣ ರಂಗ ಪ್ರತಿಷ್ಠಾನ ಸವಣೂರು ಅವರ ಪ್ರಸ್ತುತಿಯಲ್ಲಿ ಆನಂದ ಸವಣೂರು ಸಂಯೋಜನೆಯಲ್ಲಿ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಲಯನ್ಸ್ ಕ್ಲಬ್ ಪುತ್ತೂರು ಅಧ್ಯಕ್ಷರಾದ ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಶಿವಪ್ರಸಾದ್ ಶೆಟ್ಟಿ ಕಿನಾರ, ಸವಣೂರು ಯುವಕ ಮಂಡಲದ ಕಾರ್ಯದರ್ಶಿ ಪ್ರವೀಣ್ ಚೆನ್ನಾವರ, ಸವಣೂರು ಜನಜಾಗೃತಿ ವೇದಿಕೆ ಅಧ್ಯಕ್ಷ ಮಹೇಶ್ ಕೆ. ಸವಣೂರು, ಶ್ರವಣರಂಗ ಪ್ರತಿಷ್ಠಾನದ ಸದಸ್ಯ ಆನಂದ ಇಡ್ಯಾಡಿ ,ದಯಾನಂದ ಮೆದು ಉಪಸ್ಥಿತರಿದ್ದರು