ಇಂಗ್ಲೆಂಡ್ ಕ್ರಿಕೆಟ್ ವಿಶ್ವ ಚಾಂಪಿಯನ್ : ರೋಚಕ ಫೈನಲ್ ನಲ್ಲಿ ವಿಶ್ವಕಪ್ ಎತ್ತಿದ ಆಂಗ್ಲಪಡೆ

July 15, 2019
5:42 AM

ಲಂಡನ್​: ಇಂಗ್ಲೆಂಡ್ ವಿಶ್ವ ಕಪ್ ಕ್ರಿಕೆಟ್ ಚಾಂಪಿಯನ್ ಆಗಿ ಹೊಮ್ಮಿದೆ. ಭಾನುವಾರ ಲಾರ್ಡ್ಸ್​ ಮೈದಾನದಲ್ಲಿ ನಡೆದ ರೋಚಕ ಫೈನಲ್​ ಹಣಾಹಣಿಯಲ್ಲಿ ಆತಿಥೇಯ ಇಂಗ್ಲೆಂಡ್​ ಹಾಗೂ ನ್ಯೂಜಿಲೆಂಡ್​ ನಡುವಿನ ಪಂದ್ಯ ಟೈ ಆಗಿ ಆಯಿತು. ಬಳಿಕ ನಡೆದ ಸೂಪರ್ ಓವರ್ ಕೂಡ ಟೈ ಆಯಿತು. ಬಳಿಕ ಇನ್ನೀಂಗ್ಸ್ ನಲ್ಲಿ ಅತೀ ಹೆಚ್ಚು ಬೌಂಡರಿ ಬಾರಿಸಿದ ತಂಡ ಎಂಬ ನೆಲೆಯಲ್ಲಿ ಇಂಗ್ಲೆಂಡ್ ತಂಡವನ್ನು ವಿಜಯಿ ಆಗಿ ಘೋಷಿಸಲಾಯಿತು.

Advertisement
Advertisement

ಟಾಸ್ ಗೆದ್ದು ಬ್ಯಾಟ್ ಮಾಡಿದ ಕಿವೀಸ್​​ ತಂಡ 50ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿ ಆಂಗ್ಲ ಪಡೆಗೆ 242 ರನ್​​ ಗುರಿ ನೀಡಿತ್ತು. ಗುರಿ ಬೆನ್ನತ್ತಿದ ಆಂಗ್ಲ ಪಡೆ ಸಮಬಲ ಹೋರಾಟ ನಡೆಸಿದರೂ ಕೊನೆಯಲ್ಲಿ 50 ಓವರ್ ಗಳ ಮುಕ್ತಾಯಕ್ಕೆ 9 ವಿಕೆಟ್ ಕಳೆದುಕೊಂಡು 241 ಗಳಿಸಿ ಪಂದ್ಯ ಟೈ ಆಯಿತು. ಬಳಿಕ ನಡೆದ ಸೂಪರ್​ ಓವರ್​ನಲ್ಲಿ ಇಂಗ್ಲೆಂಡ್​ ಪಡೆ ಆರು ಬಾಲ್ ಗಳಲ್ಲಿ 15 ರನ್ ಗಳಿಸಿತು. ಕಿವೀಸ್ ಕೂಡ ಆರು ಬಾಲ್ ಗಳಲ್ಲಿ 15 ರನ್ ಗಳಿಸಿದಾಗ ಮತ್ತೆ ಟೈ ಆಯಿತು. ಬಳಿಕ ಐಸಿಸಿ ಕಾನೂನು ಪ್ರಕಾರ ಅತೀ ಹೆಚ್ಚು ಬೌಂಡರಿ ಬಾರಿಸಿದ ತಂಡ ಎಂಬ ನೆಲೆಯಲ್ಲಿ ಇಂಗ್ಲೆಂಡ್ ಜಯಶಾಲಿಯಾಗಿ ಚೊಚ್ಚಲ ಬಾರಿಗೆ ವಿಶ್ವಕಪ್​ ಟ್ರೋಫಿಗೆ ಇಯಾನ್​ ಮಾರ್ಗನ್​ ಪಡೆ ಮುತ್ತಿಟ್ಟಿತು.

ಆಂಗ್ಲ ಪಡೆಯ ಪರ ಆರಂಭಿಕರಾಗಿ ಕಣಕ್ಕಿಳಿದ ಜಾಸನ್​ ರಾಯ್​ ಹಾಗೂ ಜಾನಿ ಬೈರ್​ಸ್ಟೋ ಕೇವಲ 28 ರನ್​ ಜತೆಯಾಟ ಆಡುವ ಮೂಲಕ ತಂಡಕ್ಕೆ ಆಘಾತ ನೀಡಿದರು. 17 ರನ್​ ಗಳಿಸಿದ್ದ ರಾಯ್​ ಕ್ಯಾಚಿತ್ತು ನಿರ್ಗಮಿಸಿದರೆ, ಇದರ ಬೆನ್ನಲ್ಲೇ ಜೋ ರೂಟ್​ ಕೇವಲ 7 ರನ್​ ಕಲೆಹಾಕಿ ಕ್ಯಾಚಿತ್ತರು. ಈ ವೇಳೆ ನಿಧಾನಗತಿಯಲ್ಲಿ ಬ್ಯಾಟ್​ ಬೀಸುತ್ತಿದ್ದ ಜಾನಿ ಬೈರ್​ಸ್ಟೋ(36) ಬೋಲ್ಡ್​ ಆಗಿ ಪೆವಲಿಯನ್​ ಸೇರಿದರೆ, ಇದರ ಬೆನ್ನಲ್ಲೇ ನಾಯಕ ಇಯಾನ್​ ಮಾರ್ಗನ್(9) ವಿಕೆಟ್ ಕಳೆದುಕೊಂಡಿತು. 23.1 ಓವರ್​ಗಳಲ್ಲಿ 86 ರನ್​ಗೆ ಪ್ರಮುಖ 4 ವಿಕೆಟ್​ ಕಳೆದು ಇಂಗ್ಲೆಂಡ್​ ತಂಡ ಸಂಕಷ್ಟಕ್ಕೆ ಸಿಲುಕಿಕೊಂಡಿತ್ತು.

ಈ ಹಂತದಲ್ಲಿ ತಂಡಕ್ಕೆ ಆಸರೆಯಾದ ಬೆನ್​ ಸ್ಟೋಕ್ಸ್​ ಹಾಗೂ ಜಾಸ್​ ಬಟ್ಲರ್​ ಉತ್ತಮ ಇನಿಂಗ್ಸ್​ ಕಟ್ಟುವ ಮೂಲಕ 110ರನ್​ ಜತೆಯಾಟ ಆಡಿದರು. ಈ ವೇಳೆ ಬಟ್ಲರ್​(59) ಅರ್ಧಶತಕ ಗಳಿಸಿ ಕ್ಯಾಚಿತ್ತರು. ಇದರ ಬೆನ್ನಲ್ಲೇ ಕ್ರಿಸ್​ ವೋಕ್ಸ್​(2), ಲಿಯಾಮ್​ ಫ್ಲಂಕೆಟ್​ (10), ಜೋಫ್ರಾ ಆರ್ಚರ್​(0), ಆದಿಲ್​ ರಶೀದ್​(0) ಹಾಗೂ ಮಾರ್ಕ್​ ವುಡ್​(0) ರನ್​ ಗಳಿಸಿ ನಿರ್ಗಮಿಸಿದರು.

ಕೊನೆಯವರೆಗೂ ಉತ್ತಮ ಹೋರಾಟ ನಡೆಸಿದ ಬೆನ್​ ಸ್ಟೋಕ್ಸ್​ ಔಟಾಗದೇ 89 ರನ್​ ಗಳಿಸಿದರೂ ಕೂಡ ಪಂದ್ಯ ಟೈ ಕಂಡಿತು. ಕ್ರಿಕೆಟ್​ ವಿಶ್ವಕಪ್​ ಇತಿಹಾಸದಲ್ಲೇ ಮೊದಲ ಟೈ ಪಂದ್ಯ ಇದಾಗಿತ್ತು.

Advertisement

ನ್ಯೂಜಿಲೆಂಡ್​ ಪರ ಜೇಮ್ಸ್​ ನೀಶಾಮ್ ಹಾಗೂ ಲುಕಿ ಫರ್ಗ್ಯೂಸನ್​ ತಲಾ ಮೂರು ವಿಕೆಟ್​ ಕಬಳಿಸಿದರು. ಉಳಿದಂತೆ​ ಮ್ಯಾಟ್​ ಹೆನ್ರಿ ಹಾಗೂ ಕೊಲಿನ್​ ಗ್ರ್ಯಾಂಡ್​ಹೋಮ್​ ತಲಾ ಒಂದೊಂದು ವಿಕೆಟ್​ ಕಬಳಿಸಿದರು. ರನೌಟ್​ ಮೂಲಕ ಎರಡು ವಿಕೆಟ್​ ಕಿವೀಸ್​ ಪಾಲಾಯಿತು.

ಇದಕ್ಕೂ ಮೊದಲು ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಕಿವೀಸ್​ ಪರ ಆರಂಭಿಕರಾಗಿ ಕಣಕ್ಕಿಳಿದ ಮಾರ್ಟಿನ್​ ಗುಪ್ಟಿಲ್​​ ಹಾಗೂ ಹೆನ್ರಿ ನಿಕೋಲಸ್​ 21 ರನ್​ ಜತೆಯಾಟ ಆಡುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸುವಲ್ಲಿ ವಿಫಲವಾದರೂ. ಈ ವೇಳೆ 19 ರನ್​ ಗಳಿಸಿದ್ದ ಗುಪ್ಟಿಲ್​ ಎಲ್​ಬಿ ಬಲೆಗೆ ಬಿದ್ದು ನಿರ್ಗಮಿಸಿದರು. ಬಳಿಕ ಹೆನ್ರಿ ಜತೆಯಾದ ಕೇನ್​ ವಿಲಿಯಮ್ಸನ್​ ಉತ್ತಮ ಜತೆಯಾಟವಾಡಿ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. 30 ರನ್​ ಗಳಿಸಿ ನಿಧಾನಗತಿಯಲ್ಲಿ ಆಡುತ್ತಿದ್ದ ವಿಲಿಯಮ್ಸನ್​ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇದರ ಬೆನ್ನಲ್ಲೇ ಹೆನ್ರಿ ನಿಕೋಲಸ್​(55) ಅರ್ಧ ಶತಕ ಬಾರಿಸಿ ಬೋಲ್ಡ್​ ಆಗಿ ಹೊರ ನಡೆದರು. ಬಳಿಕ ಬಂದ ರಾಸ್​ ಟೇಲರ್​(15) ಕೂಡ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲದೇ ಎಲ್​ಬಿ ಬಲೆಗೆ ಬಿದ್ದರು. ಇದರ ಬೆನ್ನಲ್ಲೇ ಜೇಮ್ಸ್​ ನಿಶಾಮ್​(19), ಕೊಲಿನ್​ ಗ್ರ್ಯಾಂಡ್​ ಹೋಮ್​(16) ರನ್​ ಗಳಿಸಿ ಬಹುಬೇಗ ವಿಕೆಟ್​ ಒಪ್ಪಿಸಿ ಪೆವಲಿಯನ್​ ಸೇರಿದರು.

ಈ ಹಂತದಲ್ಲಿ ತಂಡಕ್ಕೆ ಆಸರೆಯಾದ ವಿಕೆಟ್​ ಕೀಪರ್​ ಟಾಮ್​ ಲಾಥಮ್​​(47) ರನ್​ ಗಳಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿ ಅರ್ಧಶತಕ ವಂಚಿತರಾಗಿ ಕ್ಯಾಚಿತ್ತು ನಿರ್ಗಮಿಸಿದರು. ಇದರ ಬೆನ್ನಲ್ಲೇ ಮ್ಯಾಟ್​ ಹೆನ್ರಿ(4) ರನ್​ ಗಳಿಸಿ ಬೋಲ್ಡ್​ ಆದರು. ಉಳಿದಂತೆ ಮಿಚೆಲ್​ ಸ್ಯಾಂಟ್ನರ್​(5) ಹಾಗೂ ಟ್ರೆಂಟ್​ ಬೋಲ್ಟ್​(1) ರನ್​ ಗಳಿಸಿ ಅಜೇಯರಾಗಿ ಉಳಿದರು.

ಆಂಗ್ಲ ಪಡೆಯ ಪರ ಕ್ರಿಸ್​ ವೋಕ್ಸ್​ ಹಾಗೂ ಲಿಯಾಮ್​ ಫ್ಲಂಕೆಟ್​ ತಲಾ ಮೂರು ವಿಕೆಟ್​ ಉರುಳಿಸಿ ಕಿವೀಸ್​ ತಂಡದ ಪಾಲಿಗೆ ಬಹುವಾಗಿ ಕಾಡಿದರು. ಉಳಿದಂತೆ ಜೋಫ್ರಾ ಆರ್ಚರ್​ ಮತ್ತು ಮಾರ್ಕ್​ ವುಡ್​ ತಲಾ ಒಂದೊಂದು ವಿಕೆಟ್​ ಕಬಲಳಿಸಿದರು.

Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

2028ರ ವೇಳೆಗೆ ಭಾರತದ ಉಪಗ್ರಹ ಸಂವಹನದ ಮಾರುಕಟ್ಟೆ 20 ಶತಕೋಟಿ  ಡಾಲರ್
May 21, 2025
11:18 AM
by: The Rural Mirror ಸುದ್ದಿಜಾಲ
ಹಾಳೆತಟ್ಟೆಯ ಬಳಿಕ ಈಗ ಮಾವಿನಹಣ್ಣು | ಭಾರತದ 15 ಮಾವಿನ ಹಣ್ಣು ಶಿಪ್‌ಮೆಂಟ್‌ಗಳನ್ನು ತಿರಸ್ಕರಿಸಿದ ಅಮೇರಿಕಾ |
May 21, 2025
7:45 AM
by: The Rural Mirror ಸುದ್ದಿಜಾಲ
ಸಿಂಧು ಜಲ ಒಪ್ಪಂದ ಅಮಾನತು – ದೇಶದ ಹಲವು ರಾಜ್ಯಗಳ ರೈತರಿಗೆ ಅನುಕೂಲ
May 20, 2025
7:53 PM
by: The Rural Mirror ಸುದ್ದಿಜಾಲ
58ನೇ ಜ್ಞಾನಪೀಠ ಪ್ರಶಸ್ತಿ  ಪ್ರದಾನ | ಜಗದ್ಗುರು ರಾಮಭದ್ರಾಚಾರ್ಯ ಅವರಿಗೆ ಜ್ಞಾನಪೀಠ ಪ್ರಶಸ್ತಿ ಪ್ರದಾನ
May 17, 2025
10:22 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group