ಲಂಡನ್: ಇಂಗ್ಲೆಂಡ್ ವಿಶ್ವ ಕಪ್ ಕ್ರಿಕೆಟ್ ಚಾಂಪಿಯನ್ ಆಗಿ ಹೊಮ್ಮಿದೆ. ಭಾನುವಾರ ಲಾರ್ಡ್ಸ್ ಮೈದಾನದಲ್ಲಿ ನಡೆದ ರೋಚಕ ಫೈನಲ್ ಹಣಾಹಣಿಯಲ್ಲಿ ಆತಿಥೇಯ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯ ಟೈ ಆಗಿ ಆಯಿತು. ಬಳಿಕ ನಡೆದ ಸೂಪರ್ ಓವರ್ ಕೂಡ ಟೈ ಆಯಿತು. ಬಳಿಕ ಇನ್ನೀಂಗ್ಸ್ ನಲ್ಲಿ ಅತೀ ಹೆಚ್ಚು ಬೌಂಡರಿ ಬಾರಿಸಿದ ತಂಡ ಎಂಬ ನೆಲೆಯಲ್ಲಿ ಇಂಗ್ಲೆಂಡ್ ತಂಡವನ್ನು ವಿಜಯಿ ಆಗಿ ಘೋಷಿಸಲಾಯಿತು.
ಟಾಸ್ ಗೆದ್ದು ಬ್ಯಾಟ್ ಮಾಡಿದ ಕಿವೀಸ್ ತಂಡ 50ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿ ಆಂಗ್ಲ ಪಡೆಗೆ 242 ರನ್ ಗುರಿ ನೀಡಿತ್ತು. ಗುರಿ ಬೆನ್ನತ್ತಿದ ಆಂಗ್ಲ ಪಡೆ ಸಮಬಲ ಹೋರಾಟ ನಡೆಸಿದರೂ ಕೊನೆಯಲ್ಲಿ 50 ಓವರ್ ಗಳ ಮುಕ್ತಾಯಕ್ಕೆ 9 ವಿಕೆಟ್ ಕಳೆದುಕೊಂಡು 241 ಗಳಿಸಿ ಪಂದ್ಯ ಟೈ ಆಯಿತು. ಬಳಿಕ ನಡೆದ ಸೂಪರ್ ಓವರ್ನಲ್ಲಿ ಇಂಗ್ಲೆಂಡ್ ಪಡೆ ಆರು ಬಾಲ್ ಗಳಲ್ಲಿ 15 ರನ್ ಗಳಿಸಿತು. ಕಿವೀಸ್ ಕೂಡ ಆರು ಬಾಲ್ ಗಳಲ್ಲಿ 15 ರನ್ ಗಳಿಸಿದಾಗ ಮತ್ತೆ ಟೈ ಆಯಿತು. ಬಳಿಕ ಐಸಿಸಿ ಕಾನೂನು ಪ್ರಕಾರ ಅತೀ ಹೆಚ್ಚು ಬೌಂಡರಿ ಬಾರಿಸಿದ ತಂಡ ಎಂಬ ನೆಲೆಯಲ್ಲಿ ಇಂಗ್ಲೆಂಡ್ ಜಯಶಾಲಿಯಾಗಿ ಚೊಚ್ಚಲ ಬಾರಿಗೆ ವಿಶ್ವಕಪ್ ಟ್ರೋಫಿಗೆ ಇಯಾನ್ ಮಾರ್ಗನ್ ಪಡೆ ಮುತ್ತಿಟ್ಟಿತು.
ಆಂಗ್ಲ ಪಡೆಯ ಪರ ಆರಂಭಿಕರಾಗಿ ಕಣಕ್ಕಿಳಿದ ಜಾಸನ್ ರಾಯ್ ಹಾಗೂ ಜಾನಿ ಬೈರ್ಸ್ಟೋ ಕೇವಲ 28 ರನ್ ಜತೆಯಾಟ ಆಡುವ ಮೂಲಕ ತಂಡಕ್ಕೆ ಆಘಾತ ನೀಡಿದರು. 17 ರನ್ ಗಳಿಸಿದ್ದ ರಾಯ್ ಕ್ಯಾಚಿತ್ತು ನಿರ್ಗಮಿಸಿದರೆ, ಇದರ ಬೆನ್ನಲ್ಲೇ ಜೋ ರೂಟ್ ಕೇವಲ 7 ರನ್ ಕಲೆಹಾಕಿ ಕ್ಯಾಚಿತ್ತರು. ಈ ವೇಳೆ ನಿಧಾನಗತಿಯಲ್ಲಿ ಬ್ಯಾಟ್ ಬೀಸುತ್ತಿದ್ದ ಜಾನಿ ಬೈರ್ಸ್ಟೋ(36) ಬೋಲ್ಡ್ ಆಗಿ ಪೆವಲಿಯನ್ ಸೇರಿದರೆ, ಇದರ ಬೆನ್ನಲ್ಲೇ ನಾಯಕ ಇಯಾನ್ ಮಾರ್ಗನ್(9) ವಿಕೆಟ್ ಕಳೆದುಕೊಂಡಿತು. 23.1 ಓವರ್ಗಳಲ್ಲಿ 86 ರನ್ಗೆ ಪ್ರಮುಖ 4 ವಿಕೆಟ್ ಕಳೆದು ಇಂಗ್ಲೆಂಡ್ ತಂಡ ಸಂಕಷ್ಟಕ್ಕೆ ಸಿಲುಕಿಕೊಂಡಿತ್ತು.
ಈ ಹಂತದಲ್ಲಿ ತಂಡಕ್ಕೆ ಆಸರೆಯಾದ ಬೆನ್ ಸ್ಟೋಕ್ಸ್ ಹಾಗೂ ಜಾಸ್ ಬಟ್ಲರ್ ಉತ್ತಮ ಇನಿಂಗ್ಸ್ ಕಟ್ಟುವ ಮೂಲಕ 110ರನ್ ಜತೆಯಾಟ ಆಡಿದರು. ಈ ವೇಳೆ ಬಟ್ಲರ್(59) ಅರ್ಧಶತಕ ಗಳಿಸಿ ಕ್ಯಾಚಿತ್ತರು. ಇದರ ಬೆನ್ನಲ್ಲೇ ಕ್ರಿಸ್ ವೋಕ್ಸ್(2), ಲಿಯಾಮ್ ಫ್ಲಂಕೆಟ್ (10), ಜೋಫ್ರಾ ಆರ್ಚರ್(0), ಆದಿಲ್ ರಶೀದ್(0) ಹಾಗೂ ಮಾರ್ಕ್ ವುಡ್(0) ರನ್ ಗಳಿಸಿ ನಿರ್ಗಮಿಸಿದರು.
ಕೊನೆಯವರೆಗೂ ಉತ್ತಮ ಹೋರಾಟ ನಡೆಸಿದ ಬೆನ್ ಸ್ಟೋಕ್ಸ್ ಔಟಾಗದೇ 89 ರನ್ ಗಳಿಸಿದರೂ ಕೂಡ ಪಂದ್ಯ ಟೈ ಕಂಡಿತು. ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲೇ ಮೊದಲ ಟೈ ಪಂದ್ಯ ಇದಾಗಿತ್ತು.
ನ್ಯೂಜಿಲೆಂಡ್ ಪರ ಜೇಮ್ಸ್ ನೀಶಾಮ್ ಹಾಗೂ ಲುಕಿ ಫರ್ಗ್ಯೂಸನ್ ತಲಾ ಮೂರು ವಿಕೆಟ್ ಕಬಳಿಸಿದರು. ಉಳಿದಂತೆ ಮ್ಯಾಟ್ ಹೆನ್ರಿ ಹಾಗೂ ಕೊಲಿನ್ ಗ್ರ್ಯಾಂಡ್ಹೋಮ್ ತಲಾ ಒಂದೊಂದು ವಿಕೆಟ್ ಕಬಳಿಸಿದರು. ರನೌಟ್ ಮೂಲಕ ಎರಡು ವಿಕೆಟ್ ಕಿವೀಸ್ ಪಾಲಾಯಿತು.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಕಿವೀಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಮಾರ್ಟಿನ್ ಗುಪ್ಟಿಲ್ ಹಾಗೂ ಹೆನ್ರಿ ನಿಕೋಲಸ್ 21 ರನ್ ಜತೆಯಾಟ ಆಡುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸುವಲ್ಲಿ ವಿಫಲವಾದರೂ. ಈ ವೇಳೆ 19 ರನ್ ಗಳಿಸಿದ್ದ ಗುಪ್ಟಿಲ್ ಎಲ್ಬಿ ಬಲೆಗೆ ಬಿದ್ದು ನಿರ್ಗಮಿಸಿದರು. ಬಳಿಕ ಹೆನ್ರಿ ಜತೆಯಾದ ಕೇನ್ ವಿಲಿಯಮ್ಸನ್ ಉತ್ತಮ ಜತೆಯಾಟವಾಡಿ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. 30 ರನ್ ಗಳಿಸಿ ನಿಧಾನಗತಿಯಲ್ಲಿ ಆಡುತ್ತಿದ್ದ ವಿಲಿಯಮ್ಸನ್ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇದರ ಬೆನ್ನಲ್ಲೇ ಹೆನ್ರಿ ನಿಕೋಲಸ್(55) ಅರ್ಧ ಶತಕ ಬಾರಿಸಿ ಬೋಲ್ಡ್ ಆಗಿ ಹೊರ ನಡೆದರು. ಬಳಿಕ ಬಂದ ರಾಸ್ ಟೇಲರ್(15) ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲದೇ ಎಲ್ಬಿ ಬಲೆಗೆ ಬಿದ್ದರು. ಇದರ ಬೆನ್ನಲ್ಲೇ ಜೇಮ್ಸ್ ನಿಶಾಮ್(19), ಕೊಲಿನ್ ಗ್ರ್ಯಾಂಡ್ ಹೋಮ್(16) ರನ್ ಗಳಿಸಿ ಬಹುಬೇಗ ವಿಕೆಟ್ ಒಪ್ಪಿಸಿ ಪೆವಲಿಯನ್ ಸೇರಿದರು.
ಈ ಹಂತದಲ್ಲಿ ತಂಡಕ್ಕೆ ಆಸರೆಯಾದ ವಿಕೆಟ್ ಕೀಪರ್ ಟಾಮ್ ಲಾಥಮ್(47) ರನ್ ಗಳಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿ ಅರ್ಧಶತಕ ವಂಚಿತರಾಗಿ ಕ್ಯಾಚಿತ್ತು ನಿರ್ಗಮಿಸಿದರು. ಇದರ ಬೆನ್ನಲ್ಲೇ ಮ್ಯಾಟ್ ಹೆನ್ರಿ(4) ರನ್ ಗಳಿಸಿ ಬೋಲ್ಡ್ ಆದರು. ಉಳಿದಂತೆ ಮಿಚೆಲ್ ಸ್ಯಾಂಟ್ನರ್(5) ಹಾಗೂ ಟ್ರೆಂಟ್ ಬೋಲ್ಟ್(1) ರನ್ ಗಳಿಸಿ ಅಜೇಯರಾಗಿ ಉಳಿದರು.
ಆಂಗ್ಲ ಪಡೆಯ ಪರ ಕ್ರಿಸ್ ವೋಕ್ಸ್ ಹಾಗೂ ಲಿಯಾಮ್ ಫ್ಲಂಕೆಟ್ ತಲಾ ಮೂರು ವಿಕೆಟ್ ಉರುಳಿಸಿ ಕಿವೀಸ್ ತಂಡದ ಪಾಲಿಗೆ ಬಹುವಾಗಿ ಕಾಡಿದರು. ಉಳಿದಂತೆ ಜೋಫ್ರಾ ಆರ್ಚರ್ ಮತ್ತು ಮಾರ್ಕ್ ವುಡ್ ತಲಾ ಒಂದೊಂದು ವಿಕೆಟ್ ಕಬಲಳಿಸಿದರು.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…