ಪುತ್ತೂರು: ಪುತ್ತೂರಿನ ನವಚೇತನ ಸ್ನೇಹಸಂಗಮ ಹಾಗೂ ಜೆಸಿಐ ಪುತ್ತೂರು ಆಯೋಜನೆಯಲ್ಲಿ ನಡೆಯುತ್ತಿರುವ ‘ಸಾವಯವ ಹಬ್ಬ’ ಜನವರಿ 5 ರಂದು(ಇಂದು) ಸಮಾರೋಪಗೊಳ್ಳಲಿದೆ.
ಬೆಳಗ್ಗೆ 10-30ಕ್ಕೆ ಪುತ್ತೂರಿನ ಫಾರ್ಮರ್ ಫಸ್ಟ್ ಟ್ರಸ್ಟ್ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ಅವರ ಅಧ್ಯಕ್ಷತೆಯಲ್ಲಿ ‘ಸಾವಯವ ವೈವಿಧ್ಯ’ ಎನ್ನುವ ಗೋಷ್ಠಿ ಸಂಪನ್ನವಾಗಲಿದೆ. ಬೆಂಗಳೂರಿನ ಊಟ ಫ್ರಮ್ ಯುವರ್ ತೋಟ ಇದರ ಸಂಚಾಲಕ ರಾಜೇಂದ್ರ ಹೆಗಡೆಯವರು ‘ತಾರಸಿ ಕೈತೋಟ’ದ ಕುರಿತು ಮತ್ತು ತಿಥಿ, ವಾರ, ನಕ್ಷತ್ರ ಆಧಾರಿತ ತರಕಾರಿ ಕೃಷಿ ತಜ್ಞ ಪೆರ್ಲದ ಶಿವಪ್ರಸಾದ್ ವರ್ಮುಡಿಯವರ ತರಕಾರಿ ಕೃಷಿ ಅನುಭವಗಳ ವಿಶೇಷ ಉಪನ್ಯಾಸಗಳು ನಡೆಯಲಿವೆ. ಪುತ್ತೂರಿನ ಕೋಡಿಬೈಲು ಆಗ್ರೋ ಮ್ಯಾಕ್ ಇದರ ಮುಖ್ಯಸ್ಥ ಕೆ.ಸತ್ಯನಾರಾಯಣ ಉಪಸ್ಥಿತಿ.
ಸಂಜೆ ಗಂಟೆ 4ಕ್ಕೆ ಸಾವಯವ ಹಬ್ಬದ ಸಮಾಪನ. ಪುತ್ತೂರಿನ ನವಚೇತನ ಸ್ನೇಹ ಸಂಗಮದ ಅಧ್ಯಕ್ಷ ಅನಂತಪ್ರಸಾದ್ ನೈತ್ತಡ್ಕ ಅಧ್ಯಕ್ಷತೆ. ಜೇಸಿಐ ಪುತ್ತೂರು ಇದರ ಕಾರ್ಯದರ್ಶಿ ಪ್ರಮಿತಾ ಸಿ. ಹಾಸ್ ಅವರು ಸಮಾರೋಪ ನುಡಿಗಳನ್ನಾಡಲಿದ್ದಾರೆ. ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಕಹಳೆ ನ್ಯೂಸ್ ಇದರ ಮುಖ್ಯಸ್ಥ ಶ್ಯಾಮ ಸುದರ್ಶನ ಮತ್ತು ಜೆಸಿಐ ಭಾರತ ವಲಯ ಕಾರ್ಯಕ್ರಮ ವಿಭಾಗದ ವಲಯ ನಿರ್ದೇಶಕ ಜೆ.ಎಫ್.ಎಮ್. ಅಶ್ವಿನಿ ಐತಾಳ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಉತ್ತರ ಕರ್ನಾಟಕದಿಂದ ತಂತಮ್ಮ ಸಾವಯವ ಉತ್ಪನ್ನಗಳೊಂದಿಗೆ ಕೃಷಿಕರೇ ಸ್ವತಃ ಮಳಿಗೆ ತೆರೆದು ಮಾಹಿತಿಯೊಂದಿಗೆ ಉತ್ಪನ್ನಗಳನ್ನು ಮಾರುತ್ತಿರುವುದು ಹಬ್ಬದ ಹೈಲೈಟ್.
ಬೆಳಿಗ್ಗೆ ಗಂಟೆ ಏಳರಿಂದ ಸಾವಯವ ತರಕಾರಿ ಸಂತೆ ನಡೆಯುತ್ತಿದೆ.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…