ಸುಬ್ರಹ್ಮಣ್ಯ:ಕುಕ್ಕೇಸುಬ್ರಹ್ಮಣ್ಯದಲ್ಲಿ ಮಹಾಪ್ರಸಾದ ಮೂಲಮೃತ್ತಿಕೆಯನ್ನು ಶನಿವಾರ ತೆಗೆಯಲಾಗುತ್ತದೆ. ದೇವಳದ ಗರ್ಭಗುಡಿಯಿಂದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯರು ವೈದಿಕ ವಿದಿವಿಧಾನಗಳೊಂದಿಗೆ ಮೂಲಪ್ರಸಾದ ತೆಗೆಯಲಿದ್ದಾರೆ.ಬಳಿಕ ಪ್ರಸಾದ ವಿತರಣೆ ನಡೆಯುತ್ತದೆ. ಶ್ರೀದೇವಳದಲ್ಲಿ ಮೂಲಮೃತ್ತಿಕಾ ಪ್ರಸಾದ ತೆಗೆಯಲು ಇರುವುದರಿಂದ ಇಂದು ಮದ್ಯಾಹ್ನ 2 ಗಂಟೆಯ ನಂತರ ಭಕ್ತಾಧಿಗಳಿಗೆ ಶ್ರೀ ದೇವರ ದರುಶನಕ್ಕೆ ಅವಕಾಶ ಮಾಡಲಾಗಿದೆ. ಶ್ರೀದೇವರ ಜಾತ್ರಾಮಹೋತ್ಸವವು ನ.24ರಂದು ಆರಂಭಗೊಂಡು ಡಿ.9ರವರೆಗೆ ನಡೆಯಲಿದೆ.
ಮೂಲಮೃತ್ತಿಕಾ ಪ್ರಸಾದವನ್ನು ವರ್ಷದಲ್ಲಿ ಒಂದೇ ಬಾರಿ ಮಾತ್ರಾ ತೆಗೆಯಲಾಗುವುದು. ಮೂಲ ಮೃತ್ತಿಕಾ ಪ್ರಸಾದವು ವಿವಿಧ ರೋಗಗಳ ಪರಿಹಾರಕ್ಕೆ ದಿವ್ಯ ಔಷಧ ಎಂಬ ನಂಬಿಕೆ ಇದೆ.
ಇಂದು ಸಭೆ:
ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರ ಲಕ್ಷದೀಪೋತ್ಸವ ರಥೋತ್ಸವದ ಸಮಯದಲ್ಲಿ ಈ ಹಿಂದಿನಂತೆ ಒಂದು ಲಕ್ಷ ಹಣತೆಯನ್ನು ಉರಿಸುವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಇಂದು ಸಂಜೆ 3.00 ಗಂಟೆಗೆ ಶ್ರೀ ದೇವಳದ ಆಡಳಿತ ಕಚೇರಿಯ ಸಭಾಂಗಣದಲ್ಲಿ ಭಕ್ತರ ಸಭೆಯನ್ನು ಕರೆಯಲಾಗಿದೆ.
ಮುಂಗಾರು ಮತ್ತಷ್ಟು ದುರ್ಬಲಗೊಳ್ಳತ್ತಿದ್ದು, ರಾಜ್ಯದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಆಗಸ್ಟ್ ತಿಂಗಳಲ್ಲಿ…
ದ ರೂರಲ್ ಮಿರರ್.ಕಾಂ ನಲ್ಲಿ "ಹೊಸರುಚಿ" ಯ ಮೂಲಕ ಹಲಸು ಅಡುಗೆಯ ಮೂಲಕ…
ತುಳು ಸಾಹಿತ್ಯ ಅಕಾಡೆಮಿ ಹಾಗೂ ಅಖಿಲ ಭಾರತ ಮುಂಡಾಲ ಯುವ ವೇದಿಕೆಯ ವತಿಯಿಂದ…
ವಿಶ್ವದಲ್ಲಿ ಅಡಿಕೆ ಉತ್ಪಾದನೆ ಆಗುವ ಎಲ್ಲಾ ರಾಷ್ಟ್ರಗಳಲ್ಲಿ ಅದರ ಬಳಕೆಯೂ ಆಗುತ್ತಿದೆ.ಇದರೊಂದಿಗೆ ಈ…
ಪ್ಲಾಸ್ಟಿಕ್ ಮಾಲಿನ್ಯವು ಪರಿಸರ ವಿನಾಶದ ಅಂಶಗಳಲ್ಲಿ ಒಂದಾಗಿದೆ. ನಮ್ಮ ಸಾಗರಗಳು ಮತ್ತು ಕರಾವಳಿಗಳಲ್ಲಿ…
ವಿಯೆಟ್ನಾಂ 2030 ರ ವೇಳೆಗೆ ಕೃಷಿಯಲ್ಲಿ ಹೊರಸೂಸುವ ಮೀಥೇನ್ ಅನ್ನು 30% ರಷ್ಟು…