ಸುಳ್ಯ: ಬೇಸಿಗೆ ರಜೆ ಕಳೆದು ಶಾಲೆ ಇಂದು ಪುನರಾರಂಭಗೊಳ್ಳುತ್ತಿದೆ. ಶಾಲೆಯಲ್ಲಿ ಸಂಭ್ರಮ ಮನೆ ಮಾಡಲಿದೆ. ಮಕ್ಕಳಿಗೆ ಹಳೆಯ ಗೆಳೆಯರು, ಹೊಸ ಗೆಳೆಯರು ಸಿಕ್ಕಿ ರಜೆಯ ಮಜಾ ಚರ್ಚಿಸುವ ಹೊತ್ತು ಬಂದಿದೆ. ಅದಕ್ಕೂ ಮೊದಲು, ಅಮ್ಮಾ… ಚೀಲ ಎಲ್ಲಿದೆ, ಪುಸ್ತಕ ಎಲ್ಲಿದೆ… ಬೇಗ ಬೇಗ ಲೇಟಾಯಿತು ಶಾಲೆಗೆ…… ಎಂದು ತಡಕಾಡುವ ಹೊತ್ತು ಶುರುವಾಗಿದೆ.
ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಮೇ 29 ರಂದು ಆರಂಭಗೊಳ್ಳುತ್ತಿದೆ. ಸುದೀರ್ಘ ರಜೆಯ ಬಳಿಕ ವಿದ್ಯಾರ್ಥಿಗಳು ಶಾಲೆಯ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ. ಸರಕಾರಿ ಶಾಲೆಗಳಲ್ಲಿ ಮೇ 29ರಂದು ಪ್ರಾರಂಭೋತ್ಸವ ನಡೆಯಲಿದೆ. ಎಲ್ಲಾ ಶಾಲೆಗಳಲ್ಲೂ ಸ್ವಾಗತ ಕಾರ್ಯಕ್ರಮ ನಡೆಯಬೇಕು. ಇದಕ್ಕಾಗಿಯೇ ಶಾಲೆಯಲ್ಲಿ ಸಿದ್ಧತೆ ನಡೆಯಬೇಕು. ಶಾಲೆಗಳನ್ನು ತಳಿರು ತೋರಣ ಗಳಿಂದ ಸಿಂಗರಿಸಬೇಕು.
ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಪಠ್ಯಪುಸ್ತಕಗಳು ಉಚಿತವಾಗಿ ದೊರೆಯುತ್ತವೆ. ಸರಕಾರದಿಂದ ಈಗಾಗಲೇ ಶೇ.75ರಷ್ಟು ಪಠ್ಯಪುಸ್ತಕಗಳು ಸರಬರಾಜು ಆಗಿದ್ದು, ಶಾಲಾ ಆರಂಭೋತ್ಸವದಂದೇ ಪಠ್ಯ ಪುಸ್ತಕಗಳನ್ನು ಮಕ್ಕಳಿಗೆ ವಿತರಿಸಲು ಇಲಾಖೆ ಕ್ರಮ ಕೈಗೊಳ್ಳುತ್ತಿದೆ.
ಇದೆಲ್ಲಾ ಸರಿ. ಈ ಬಾರಿ ಮಳೆ ಇನ್ನೂ ಶುರುವಾಗಿಲ್ಲ. ಬಿಸಿಲಿನ ಕಾರಣದಿಂದ ಸೆಖೆಯಲ್ಲಿ ಕ್ಲಾಸಲ್ಲಿ ಕುಳಿತುಕೊಳ್ಳುವುದು ಹೇಗೆ ಎಂಬುದು ಹೆತ್ತವರ ತಲೆಬಿಸಿ. ವಿಪರೀತ ಬೆವರುತ್ತದೆ, ಹಿಂದೆಲ್ಲಾ ಆದಂತೆ ಜೂನ್ ಮೊದಲ ವಾರದಲ್ಲಿ ಶಾಲೆ ಪುನರಾರಂಭವಾದರೆ ಸಾಕಿತ್ತು ಎಂದು ಹೆತ್ತವರು ಹೇಳುತ್ತಾರೆ.
ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಒಂದೇ ದಿನ 4 ಚಿನ್ನ ಸೇರಿದಂತೆ 7 ಪದಕ…
ಅಸ್ಸಾಂನಲ್ಲಿ 5.74 ಟನ್ ಅಡಿಕೆ ವಶ, ಕೇರಳದಲ್ಲಿ 380 ಚೀಲ ಅಡಿಕೆ ಬಿಡುಗಡೆಗೆ…
ರಬಿ(ಹಿಂಗಾರು) ಬೆಳೆಗಳಿಗೆ ಕೇಂದ್ರ ಸರ್ಕಾರ MSP ಹೆಚ್ಚಿಸಿದೆ. ಗೋಧಿ MSP ₹2,610ಕ್ಕೆ, ಕಡಲೆ…
ಅಕ್ಟೋಬರ್ 1ರಿಂದ ಅರಬ್ಬಿ ಸಮುದ್ರದ ಗಾಳಿ ದುರ್ಬಲಗೊಳ್ಳುವ ಸಾಧ್ಯತೆ ಇರುವುದರಿಂದ ಕರ್ನಾಟಕದಲ್ಲಿ ಮಳೆಯ…
ಪಶ್ಚಿಮ ಘಟ್ಟದ ESA ಪ್ರಸ್ತಾವನೆ ಮತ್ತೆ ಕೇರಳದ ರಬ್ಬರ್ ಹಾಗೂ ಇತರ ತೋಟಗಾರಿಕಾ…
ಕಲ್ಲಡ್ಕದ 2.1 ಕಿ.ಮೀ. ಉದ್ದದ ಫ್ಲೈಓವರ್ ಸಂಚಾರಕ್ಕೆ ಮುಕ್ತವಾದ ಬಳಿಕ ಪೇಟೆಯೊಳಗಿನ ವಾಹನ…