ಮರಳಿ ಬರಲಾರದ ಲೋಕಕ್ಕೆ ಮೌನವಾಗಿ ನಡೆದರಂತೆ ನಮ್ಮೂರಿನ ಡಾಕ್ಟರ್ ಪಿ ಜಿ ಎಸ್ ಪ್ರಕಾಶ್, ಅವರೊಂದಿಗೇ ಊರೂ ಮೌನವಾಯಿತು, ಮೌನವಾಗಿ ರೋಧಿಸಿತು…..
ಯಾಕೆಂದರೆ ಈ ಪ್ರಕಾಶಣ್ಣ “ವೈದ್ಯಕೀಯ ಸೇವೆ” ಎಂಬ ಯಜ್ಞದಲ್ಲಿ ಸಮಿಧೆಯಾಗಿ ಉರಿದವರು,ಮನೆ ಮನಗಳ ಬೆಳಗಿದವರು. …..ಹೌದು ನಂಬೋದಕ್ಕೇ ಅಸಾಧ್ಯ. ಸುಳ್ಯ ತಾಲೂಕಿನಾದ್ಯಂತ, ಅದರಲ್ಲೂ ಬೆಳ್ಳಾರೆ, ಬಾಳಿಲ, ಚೊಕ್ಕಾಡಿ, ಕಲ್ಮಡ್ಕ ಪರಿಸರದ ಸಾಮಾನ್ಯರೊಳಗೊಬ್ಬ ಅಸಾಮಾನ್ಯ ವೈದ್ಯರಾಗಿದ್ದರು. ಪರಂಪರೆಯಿಂದಲೇ ವೈದ್ಯ ಮನೆತನದ , ಸಾತ್ವಿಕ,ಸರಳ ಸಜ್ಜನ,ಮಿತಭಾಷಿಯಾಗಿದ್ದ ಪ್ರಕಾಶಣ್ಣ ತನ್ನ ನೋಟದಲ್ಲೇ ರೋಗಿಯಲ್ಲಿ ಚೈತನ್ಯ ತುಂಬುತಿದ್ದರು. ಯಾವುದೇ ಕಾರಣಕ್ಕೂ ಮಿತಿ ಮೀರಿದ ಔಷಧ ಪ್ರಯೋಗಿಸಿರದಂತಹವರು. ವೈದ್ಯತೋ ನಾರಾಯಣೋ ಹರಿಃ ಎಂಬ ಮಾತು ಇವರನ್ನು ಅನುಸರಿಸಿತ್ತು. ಅಂತೆಯೇ ಅವರನ್ನು ಅರಸಿ ಬರುತ್ತಿದ್ದವರ ಪಾಲಿನ ನಿಜ ದೇವರಾಗಿದ್ದರು. ತಾನು ಶುಶ್ರೂಷೆ ಮಾಡಿದ್ದ ಪ್ರತಿಯೊಬ್ಬನ ದಾಖಲಾತಿ ಇವರ ಪುಸ್ತಕ/ಕಂಪ್ಯೂಟರ್‌ನಲ್ಲಿ ಭದ್ರ. ಅಚ್ಚುಕಟ್ಟು ಜೀವನ ಶೈಲಿ. ಭೌತಿಕವಾಗಿ ಎಷ್ಟು ನೀಟ್ ಏಂಡ್ ಪರ್ಫೆಕ್ಟ್ ಆಗಿದ್ದರೋ ಅಂತರ್ಯದಲ್ಲೂ ಅಷ್ಟೇ ಪರ್ಫೆಕ್ಟ್ .ಇದು ಅವರ ಮನೆತನದ ಗುಣ. ವಿದ್ಯಾರ್ಥಿ ಜೀವನದಲ್ಲಿ ಎಬಿವಿಪಿ ಚಳವಳಿಗಳಲ್ಲಿ ಬೌದ್ಧಿಕವಾಗಿ ತೊಡಗಿಸಿಕೊಂಡ ಪ್ರಕಾಶಣ್ಣನವರೀಗೆ ಉನ್ನತ ನಾಯಕರ ಸಂಪರ್ಕವಿದ್ದರೂ ಎಲ್ಲೂ ತೋರಿಸಿಕೊಂಡವರಲ್ಲ. ಸೇವೆಯ ಹೊರತಾಗಿ ಬೇರೆಲ್ಲೂ ಗುರುತಿಸಿಕೊಂಡವರಲ್ಲ.ಅಂದರೆ ಮೌನ ನಡೆಯೇ ಅವರ ಆಂತರ್ಯವಾಗಿತ್ತು.
ಆದರೆ ವಿಧಿ ನಿರ್ಣಯ ಅಂತ ಒಂದಿದೆಯಲ್ಲಾ…. ಅದು ಯಾರನ್ನೂ ಬಿಡದು…. ಅವನ ಆಲಯದೆದುರು ಎಲ್ಲವೂ ಮೌನವೇ…. ಆಯ್ಕೆಗಳೇ ಇಲ್ಲ… ಒಪ್ಪಲೇ ಬೇಕು….. ಅಂತೆಯೇ ನಮಗಿರುವ ದಾರಿ ಒಂದೇ….ಅವರ ಆದರ್ಶಯುತ ಜೀವನದ ನಡೆಗಳನ್ನು ಅನುಸರಿಸುವುದು ಈ ಮೂಲಕ ಅವರನ್ನು ನಮ್ಮಲ್ಲಿ ತುಂಬಿಕೊಂಡು ಅವರನ್ನು ಅಜರಾಮರರನ್ನಾಗಿಸುವುದು , ಅಷ್ಟೇ.
ಜನ್ಮ ಸಾವಿರ ಬರಲಿ, ನಷ್ಟವದರಿಂದೇನು
ಕರ್ಮ ಸಾವಿರವಿರಲಿ, ಕಷ್ಟ ನಿನಗೇನು
ಬ್ರಹ್ಮ ಹೃದಯದಿ ನಿಲ್ಲೆ, ಮಾಯೆಯೇಗೈದೊಡೇಂ
ಇಮ್ಮಿದಳ ಸರಸವದು..ಮಂಕುತಿಮ್ಮ……
ಎಂದಂತೆ ಪ್ರಕಾಶಣ್ಣ ಸಾವಿರ ಸಾವಿರ ಹೃದಯಗಳಲ್ಲಿ ಸ್ಥಾಪಿತರು.. ಮಾಯೆಯಾಟಕ್ಕೆ ನಿಲುಕದವರು…..
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…