ಇದು ಹಣ್ಣುಗಳ ರಾಜ ಮಾವಿನ ಹಣ್ಣಿನ ಸೀಸನ್. ಮಾವು ಎಂದರೆ ಎಲ್ಲರ ಬಾಯಲ್ಲೂ ನೀರೂರದೆ ಇರದು. ಅದರಲ್ಲೂ ಕಾಡು ಮಾವಿನ ಹಣ್ಣು(ಚಿಕ್ಕ) ಗಳನ್ನು ಬಳಸಿ ಮಂಗಳೂರು ಸ್ಟೈಲ್‍ನಲ್ಲಿ ಮಾಡಬಹುದಾದಂತಹ ಕೆಲವೊಂದು ರೆಸಿಪಿಗಳು ಇಲ್ಲಿವೆ….. ನೀವೂ ಸವಿಯಿರಿ….
1) ಮಾವಿನ ಹಣ್ಣಿನಗೊಜ್ಜು:
ಬೇಕಾಗುವ ಸಾಮಾಗ್ರಿಗಳು: ಕಾಟು ಮಾವಿನ ಹಣ್ಣು10, ಅಚ್ಚಕಾರದ ಪುಡಿ, ಬೆಲ್ಲ, ಉಪ್ಪು. ಸಾಸಿವೆ, ಎಣ್ಣೆ.
ಮಾಡುವ ವಿಧಾನ : ಮೊದಲಿಗೆ ಮಾವಿನ ಹಣ್ಣುಗಳನ್ನು ಚೆನ್ನಾಗಿ ತೊಳೆದು ಸಿಪ್ಪೆಯನ್ನು ತೆಗೆಯಬೇಕು. ನಂತರ ಮಾವಿನ ಹಣ್ಣಿನ ಸಿಪ್ಪೆಯನ್ನು ಎರಡು ಲೋಟ ನೀರಿನಲ್ಲಿ ಹಿಚುಕಿ ರಸತೆಗೆಯಬೇಕು.
ಈ ರಸವನ್ನು ಮಾವಿನ ಹಣ್ಣಿರುವ ಪಾತ್ರಕ್ಕೆ ಹಾಕಿ. ನಂತರಇದಕ್ಕೆಎರಡರಿಂದ ಮೂರು ಸ್ಪೂನ್‍ಅಚ್ಚಕಾರದ ಪುಡಿ, ರುಚಿಕೆತಕ್ಕಷ್ಟುಉಪ್ಪು, ಒಂದು ಅಚ್ಚು ಬೆಲ್ಲ (ಮಾವಿನ ಹಣ್ಣು ಸಿಹಿಯಾಗಿದ್ದರೆ ಬೆಲ್ಲ ಹಾಕುವ ಪ್ರಮಾಣಕಮ್ಮಿ ಮಾಡಬೇಕು)ವನ್ನು ಹಾಕಿ ಚೆನ್ನಾಗಿ ಕುದಿಸಿದರೆ ಅನ್ನದೊಡನೆ ಸೇರಿಸಿ ಊಟ ಮಾಡಲುರುಚಿಕರವಾದ ಮಾವಿನ ಹಣ್ಣಿನಗೊಜ್ಜುತಯಾರಾಗುತ್ತದೆ. ಒಗ್ಗರಣೆ ಹಾಕುವಾಗ ಸಾಸಿವೆ ಸಿಡಿದ ನಂತರಒಂದುಚಿಟಿಕೆ ಮೆಣಸಿನ ಪುಡಿ ಹಾಕಿದರೆರುಚಿಇನ್ನೂ ಹೆಚ್ಚುತ್ತದೆ.
2) ಮಾವಿನ ಹಣ್ಣಿನ ಸಾಸಿವೆ:
ಬೇಕಾಗುವ ಸಾಮಾಗ್ರಿಗಳು :ಕಾಡು ಮಾವಿನ ಹಣ್ಣು10, ತೆಂಗಿನತುರಿಒಂದುಕಪ್, ಕುಮಟೆ(ಕೆಂಪು) ಮೆಣಸು1, ಹಸಿ ಮೆಣಸು1 , ಸಾಸಿವೆ 2 ಸ್ಪೂನ್, ಬೆಲ್ಲ.
ಮಾಡುವ ವಿಧಾನ : ಮಾವಿನ ಹಣ್ಣುಗಳನ್ನು ಚೆನ್ನಾಗಿ ತೊಳೆದು ಸಿಪ್ಪೆಯನ್ನು ಬೇರ್ಪಡಿಸಬೇಕು. ನಂತರ ಸ್ವಲ್ಪ ನೀರಿನೊಡನೆ ಸಿಪ್ಪೆಯನ್ನು ಹಿಚುಕಿ ರಸವನ್ನು ತೆಗೆದು ಮಾವಿನಹಣ್ಣಿನೊಂದಿಗೆ ಮಿಕ್ಸ್ ಮಾಡಿ. ಇದಕ್ಕೆ ಬೆಲ್ಲ, ರುಚಿಕೆತಕ್ಕಷ್ಟುಉಪ್ಪು ಹಾಕ ಬೇಕು.ಹೀಗೆ ಬೆರೆಸಿಟ್ಟ ಮಾವಿನ ಹಣ್ಣಿನರಸದಪ್ಪವಾಗಿರಬೇಕು. ಹೆಚ್ಚು ನೀರು ಹಾಕಬಾರದು.
ನಂತರ ಮಿಕ್ಸಿಜಾರ್‍ಗೆ ಒಂದು ಕಪ್ ತೆಂಗಿನತುರಿ, ಒಂದು ಕುಮಟೆ ಮೆಣಸು, ಖಾರ ಜಾಸ್ತಿ ಬೇಕಾದಲ್ಲಿಒಂದು ಹಸಿಮೆಣಸು, ಎರಡು ಸ್ಪೂನ್ ಸಾಸಿವೆ ಹಾಕಿ ನುಣ್ಣಗೆ ರುಬ್ಬಬೇಕು. ಈ ರುಬ್ಬಿದ ಪದಾರ್ಥವನ್ನು ಮೊದಲೇ ಸಿದ್ದಪಡಿಸಿದ ಮಾವಿನ ಹಣ್ಣಿನ ರಸದೊಡನೆ ಸೇರಿಸಿದರೆ ಸಿಹಿ ಖಾರದಿಂದ ಕೂಡಿದ ಮಾವಿನ ಹಣ್ಣಿನ ಸಾಸಿಮೆ ತಯಾರಾಗುತ್ತದೆ.
3) ಮ್ಯಾಂಗೋಜ್ಯೂಸ್
ಬೇಕಾಗುವ ಸಾಮಾಗ್ರಿಗಳು :ಕಾಡು ಮಾವಿನ ಹಣ್ಣು4, ಸಕ್ಕರೆ, ನೀರು, ಹಸಿಶುಂಠಿ.
ಮಾಡುವ ವಿಧಾನ : ಮಾವಿನ ಹಣ್ಣುಗಳನ್ನು ಚೆನ್ನಾಗಿ ತೊಳೆದು ರಸವನ್ನು ಹಿಚುಕಿ ತೆಗೆದು ಸೋಸ ಬೇಕು. ನೀರಿಗೆ ಸಕ್ಕರೆ ಹಾಕಿ ಕರಗಿಸಿ.ಇದಕ್ಕೆ ಮಾವಿನ ಹಣ್ಣಿನರಸ, ಶುಂಠಿರಸ, ರುಚಿ ಹೆಚ್ಚಿಸಲು ಒಂದು ಚಿಟಿಕೆ ಉಪ್ಪು ಸೇರಿಸಿದರೆ ದಾಹ ತಣಿಸಲು ದಿಡೀರ್ ಮ್ಯಾಂಗೋ ಜ್ಯೂಸ್‍ರೆಡಿ. ಐಸ್‍ಕ್ಯೂಬ್‍ಅಥವಾ ಫ್ರಿಜ್‍ನಲ್ಲಿಟ್ಟುಕೋಲ್ಡ್ ಮಾಡಿದರೆದೇಹಕ್ಕೆಇನ್ನೂತಂಪು ನೀಡುತ್ತದೆ.
4) ಮ್ಯಾಂಗೋಕುಲ್ಫೀ
ಬೇಕಾಗುವ ಸಾಮಾಗ್ರಿಗಳು : ಸಿಹಿಯಾದ ಕಷಿ ಮಾವಿನ ಹಣ್ಣು1, ದಪ್ಪನೆಯ ಹಾಲು 1ಕಪ್, ಸಕ್ಕರೆ, ಐಸ್ಕ್ಯಾಂಡಿ ಸೋಕೆಟ್/ ಲೋಟ
ಮಾಡುವ ವಿಧಾನ : ಮಾವಿನ ಹಣ್ಣಿನ ಸಿಪ್ಪೆ ತೆಗೆದು ಸಣ್ಣಗೆ ತುಂಡರಿಸಿ ಮಿಕ್ಸಿಜಾರ್‍ಗೆ ಹಾಕಿ. ಇದಕ್ಕೆಒಂದುಕಪ್ ಹಾಲು ,4 ರಿಂದ 5ಸ್ಪೂನ್ ಸಕ್ಕರೆ ಹಾಕಿ ನುಣ್ಣಗೆರುಬ್ಬಿ. ಇಡ್ಲಿ ಹಿಟ್ಟಿನಂತೆ ದಪ್ಪಗೆ ಇರಲಿ. ನಂತರ ಐಸ್ಕ್ಯಾಂಡಿ ಸಾಕೆಟ್ ಗೆ ಹಾಕಿ ಡೀಪ್ ಫ್ರೀಜ್ ನಲ್ಲಿ5 ರಿಂದ 6 ಗಂಟೆ ಇಟ್ಟರೆ ಮನೆಯಲ್ಲೇತಯಾರಿಸಬಹುದಾದ ಮ್ಯಾಂಗೋಕುಲ್ಫೀತಯಾರಾಗುತ್ತದೆ. ಐಸ್‍ಕ್ಯಾಂಡಿ ಸಾಕೆಟ್ ಇಲ್ಲದೇ ಇದ್ದರೆ ಲೋಟದಲ್ಲಿ ಹಾಕಿ ಅದು ಸ್ವಲ್ಪ ಫ್ರೀಜ್ ಆದಾಗ ಒಂದು ಸ್ಟಿಕ್ ಹಾಕಿ ಐಸ್‍ಕ್ಯಾಂಡಿ ತಯಾರಿಸಬಹುದು. ಹಲಸಿನ ಹಣ್ಣು ಬಳಸಿ ಜಾಕ್‍ಫ್ರೂಟ್ ಕ್ಯಾಂಡಿ, ಬಾದಾಮ್ ಮಾಲ್ಟ್ ಕ್ಯಾಂಡಿ ಕೂಡಾ ಇದೇ ವಿಧಾನದಲ್ಲಿ ತಯಾರಿಸಿ ಮಕ್ಕಳನ್ನು ಖುಷಿ ಪಡಿಸಬಹುದು.
# ವಂದನಾರವಿ ಕೆ.ವೈ.ವೇಣೂರು.