ಇದು ಸಮರವಲ್ಲ – ಸಮರಸ ಜೀವನ | ಕೌಶಲ್ಯ ಭರಿತ ಉದ್ಯೋಗವೇ ಯಶಸ್ಸು | ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ಯಶಸ್ವೀ ತರಬೇತಿ ಶಿಬಿರ |

August 15, 2020
10:17 AM

ಕೊರೋನಾ ಇಡೀ ಜಗತ್ತನ್ನು  ನೆಗೆಟಿವ್‌ ಕಡೆಗೆ ಕೊಂಡೊಯ್ದಿತು. ಎಲ್ಲೆಡೆಯೂ ಯಶಸ್ವೀ ಯೋಚನೆ-ಯೋಜನೆಗಳು ಕಾಣದಾದವು. ಯಾವುದೇ ಕಾರ್ಯಕ್ಕೂ ಕೊರೋನಾವೇ ಅಡ್ಡಿಯಾಯಿತು. ಮುಂದೆ ಕೊರೋನಾ ಜೊತೆ  ಬದುಕು ಅನಿವಾರ್ಯ. ಈಗಾಗಲೇ ಸವಾಲು ಎದುರಿಸಲು ವಿವಿಧ ತಯಾರಿ ನಡೆದಿದೆ. ಇದರ ಭಾಗವಾಗಿ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘ,  ಗ್ರಾಮವಿಕಾಸ ಸಮಿತಿ ಮತ್ತು ಸಹಕಾರ ಭಾರತಿಯ ವತಿಯಿಂದ ಉದ್ಯೋಗ ನೈಪುಣ್ಯ ಶಿಬಿರ ನಡೆಯಿತು. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 3 ವಾರಗಳ ತರಬೇತಿ ಶಿಬಿರ ನಡೆದಿದೆ. ಈಗ ಬದುಕು ಕಟ್ಟುವ ಸ್ವಾತಂತ್ರ್ಯವೂ ಆರಂಭವಾಗಿದೆ.

Advertisement

ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘ,  ಗ್ರಾಮವಿಕಾಸ ಸಮಿತಿ ಮತ್ತು ಸಹಕಾರ ಭಾರತಿಯ ವತಿಯಿಂದ ನಡೆದ ಉದ್ಯೋಗ ನೈಪುಣ್ಯ ಶಿಬಿರದಲ್ಲಿ  835 ಜನರಿಗೆ ಮೂರು ವಾರಗಳಲ್ಲಿ 13 ವಿವಿದ ವಿಷಯಗಳ 30 ಗಂಟೆಗಳ ತರಬೇತಿ ಆಯೋಜಿಸಲಾಗಿತ್ತು. ಸ್ವಯಂಉದ್ಯೋಗ, ಉದ್ಯಮಕ್ಕೆ ಪ್ರೇರಣೆ ನೀಡುವ ಶಿಬಿರ ಇದಾಗಿತ್ತು. 3 ತಾಲೂಕಿನ 833 ಜನರಿಗೆ 3 ವಾರಗಳಲ್ಲಿ 13 ವಿವಿಧ ವಿಷಯಗಳಲ್ಲಿ 30 ಗಂಟೆಗಳ ತರಬೇತಿ  ನೀಡಲಾಗಿದೆ.

ಜೀವನದ ಹೊಸ ತಿರುವಿಗಾಗಿ ತರಬೇತಿ: ಕೊರೋನಾದ  ಸಂಕಷ್ಟದ ಪರಿಸ್ಥಿತಿಯನ್ನು ಅವಲೋಕಿಸಿದ ಗ್ರಾಮವಿಕಾಸ ಸಮಿತಿ ಮಂಗಳೂರು ವಿಭಾಗ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ) ಮತ್ತು ಸಹಕಾರ ಭಾರತಿ ಜೊತೆಯಾಗಿ  ಪ್ರಯತ್ನ ಮಾಡಿದೆ. ಹೊಸದಾಗಿ ಸ್ವಯಂ ಉದ್ಯೋಗ, ಗೃಹೋದ್ಯಮ ನಡೆಸುವವರಿಗೆ ತರಬೇತಿ ನೀಡಿ, ಪ್ರೋತ್ಸಾಹಿಸುವ ಪ್ರಯತ್ನ ಮಾಡಿದೆ. ಕೋವಿಡ್-19 ನಂತರದ ಪರಿಸ್ಥಿತಿಯ ಅವಲೋಕನಕ್ಕಾಗಿ 2020ರ ಎಪ್ರಿಲ್ ತಿಂಗಳಲ್ಲಿ ಸಭೆ ಸೇರಿದ ಮೇಲಿನ ಮೂರು ಸಂಸ್ಥೆಗಳ ಪ್ರಮುಖರುಗಳು ಜೂನ್-ಜುಲೈ ತಿಂಗಳಲ್ಲಿ ತರಬೇತಿ ನಡೆಸುವ ಯೋಚನೆ ಮಾಡಿದರು. ಆರಂಭದಲ್ಲಿ 150 ರಿಂದ 200 ಸಂಖ್ಯೆ ನಿರೀಕ್ಷೆಯಲ್ಲಿದ್ದ ಸಂಘಟಕರಿಗೆ 750ಕ್ಕೂ ಹೆಚ್ಚು ಜನ ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಕೊಂಡರು. ಸರ್ಕಾರದ ನಿಯಮಾವಳಿಗಳು, ಕೋವಿಡ್ – 19ರ ಪರಿಣಾಮಗಳ ನಡುವೆ ವ್ಯವಸ್ಥಿತವಾಗಿ ನಡೆಸುವುದು ಅಷ್ಟು ಸುಲಭವಾಗಿರಲಿಲ್ಲ. ಆ ಕಾರಣಕ್ಕೆ ಮೂರು ಕೇಂದ್ರಗಳನ್ನು ಆಯ್ಕೆ ಮಾಡಿಕೊಂಡು, ಮೂರು ವಾರಗಳಲ್ಲಿ 13 ವಿಷಯಗಳಲ್ಲಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ತರಬೇತಿ ನೀಡುವ ತೀರ್ಮಾನ ಮಾಡಲಾಯಿತು. ಪುತ್ತೂರಿನ ವಿವೇಕಾನಂದ ಪಾಲಿಟೆಕ್ನಿಕ್, ಕಲ್ಲಡ್ಕದ ಶ್ರೀರಾಮ ಸಭಾಭವನ ಮತ್ತು ಸುಳ್ಯದ ಎಪಿಎಂಸಿ ಸಭಾಂಗಣದಲ್ಲಿ ಜುಲೈ 27 ರಿಂದ ಪ್ರಾರಂಭವಾಗಿ ಆಗಷ್ಟ್ 15ವರೆಗೆ ಮೂರು ವಾರಗಳ ತರಬೇತಿ ನಡೆದಿದೆ.

 

ಪಠ್ಯಕ್ರಮ: 1986ರಿಂದ ಪುತ್ತೂರು ಆಸುಪಾಸಿನ ಜನರಿಗೆ ತಾಂತ್ರಿಕ ಶಿಕ್ಷಣ ನೀಡುತ್ತಾ ಮನೆ ಮಾತಾಗಿರುವ ವಿವೇಕಾನಂದ ಪಾಲಿಟೆಕ್ನಿಕ್ ವತಿಯಿಂದ ಪ್ರತಿ ವಿಷಯಕ್ಕೂ 30 ಗಂಟೆಗಳ ಫಠ್ಯ ಕ್ರಮ ತಯಾರಿ ಮಾಡಲಾಯಿತು. ಪಠ್ಯಕ್ರಮವೂ ಸಂಕ್ಷಿಪ್ತ ಮತ್ತು ಸರಳವಾಗಿ ರಚಿಸಲಾಗಿದ್ದೂ, ಪ್ರತಿ ವಿಷಯದಲ್ಲಿ ಉದ್ಯೋಗ ನಡೆಸಲು ಬೇಕಾಗುವ ಸಂಕ್ಷಿಪ್ತ ಜ್ಞಾನವನ್ನು ಪರಿಣಾಮಕಾರಿಯಾಗಿ ಒದಗಿಸುವ ಪ್ರಯತ್ನ ಮಾಡಲಾಗಿದೆ. ತರಬೇತಿ ಪಡೆದವರಿಗೆ ವಿವೇಕಾನಂದ ಪಾಲಿಟೆಕ್ನಿಕ್ ಪುತ್ತೂರು ವತಿಯಿಂದ ಪ್ರಮಾಣ ಪತ್ರ ನೀಡಲಾಗುತ್ತಿದೆ.

ಪರಿಣಿತ ತರಬೇತುದಾರರು: ಪ್ರತಿ ವಿಷಯದಲ್ಲೂ ಪರಿಣಿತಿ ಪಡೆದವರೇ ತರಬೇತಿ ನೀಡಿದರು. ಈಗಾಗಲೇ ಸ್ವಯಂಉದ್ಯೋಗದಲ್ಲಿ ತೊಡಗಿಕೊಂಡವರು ಕೂಡ ತರಬೇತುದಾರರನ್ನಾಗಿ ಆಯ್ಕೆ ಮಾಡಿಲಾಗಿತ್ತು. ತರಬೇತಿಯು ಬಹುತೇಕ ಪ್ರಾಯೋಗಿಕ ತರಗತಿಗಳನ್ನೇ ಹೊಂದಿತ್ತು. ಇಲಾಖೆಯ ಮಾಹಿತಿ ಅವಧಿಗಳಲ್ಲಿ ಪುತ್ತೂರಿನ ತಹಶೀಲ್ದಾರಾದ  ರಮೇಶ್ ಬಾಬು, ಪಶುಸಂಗೋಪನೆ ಇಲಾಖೆಯ ತಾಲೂಕು ಅಧಿಕಾರಿಗಳಾದ ಡಾ. ಧರ್ಮಪಾಲ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ  ಹೇಮಚಂದ್ರ, ಸುಳ್ಯ ತಾಲೂಕು ಕೃಷಿ ಅಧಿಕಾರಿ  ಮೋಹನ್ ನಂಗಾರು, ತೋಟಗಾರಿಕಾ ಇಲಖೆಯ ಸಹಾಯಕ ನಿರ್ಧೇಶಕರಾದ  ಸಹನಾ,  ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಶಾಮಪ್ರಸಾದ್,  ಚಂದ್ರಾವತಿ, ಶಿವಾನಂದ ನಿವೃತ್ತ ಕೈಗಾರಿಕ ವಿಸ್ತರಣಾಧಿಕಾರಿಗಳಾದ ವೀರಪ್ಪ ಗೌಡ, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ  ಜ್ಞಾನೇಶ್ ಸೇರಿದಂತೆ ಅನೇಕ ಸರ್ಕಾರಿ ಅಧಿಕಾರಿಗಳು ಭಾಗವಹಿಸಿದ್ದರು.ತರಬೇತುದಾರರುಗಳಾಗಿ ಹೈನುಗಾರಿಕೆ ವಿಷಯದಲ್ಲಿ ಮಂಗಳೂರು ಹಾಲು ಉತ್ಪಾದಕರ ಸಹಕಾರಿ ಸಂಘ ಮತ್ತು ಪಶು ಇಲಾಖೆಯ ವೈದ್ಯಾಧಿಕಾರಿಗಳು ಮತ್ತು ಪ್ರಗತಿಪರ ಕೃಷಿಕರು ಭಾಗವಹಿಸಿದ್ದರು.

 

ಗ್ರಾಹಕ ಸೇವಾ ಮಾಹಿತಿ ವಿಭಾಗದಲ್ಲಿ ಶ್ರೀಮಾತಾ ಎಂಟರ್ ಪ್ರೈಸೆಸ್‍ನ  ಅವಿನಾಶ್, ನೋಟರಿಯವರು, ಮಾನವ ಸಂಪನ್ಮೂಲ ತರಬೇತುದಾರರು, ಸರ್ಕಾರದ ವಿವಿದ ಇಲಾಖೆಯ ಪ್ರಮುಖರು ಭಾಗವಹಿಸಿದ್ದರು. ಫ್ಯಾಶನ್ ಡಿಸೈನ್ ವಿಭಾಗದಲ್ಲಿ ಪುತ್ತೂರಿನ ಫ್ಯಾಶನ್ ಡಿಸೈನ್ ಕಾಲೇಜಿನ ಉಪನ್ಯಾಸಕರು, ಪ್ರಾಂಶುಪಾಲರು ಭಾಗವಹಿಸಿದ್ದರು. ಹೋಮ್ ನರ್ಸಿಂಗ್ ತರಬೇತಿಯನ್ನು ಪ್ರಗತಿ ಆಸ್ಪತ್ರೆ ಸಹಯೋಗದೊಂದಿಗೆ ಆಸ್ಪತ್ರೆ ಆವರಣದಲ್ಲೆ ಮಾಡಲಾಗಿತ್ತು. ಫುಡ್ ಟೆಕ್ನಾಲಜಿ ವಿಷಯದಲ್ಲಿ ಬೆಂಗಳೂರು ಮತ್ತು ಪುತ್ತೂರಿನಲ್ಲಿ ಈಗಾಗಲೇ ಗೃಹ ಉದ್ಯಮ ನಡೆಸುತ್ತಿರುವವರಿಂದಲೇ ತರಬೇತಿ ನೀಡಲಾಗಿತ್ತು. ಕಸಿ ಕಟ್ಟುವ ತರಬೇತಿಯಲ್ಲಿ ಕೆಲವು ಔಷಧಿಗಳ ಪರಿಚಯ, ಸರಳ ಕೃಷಿ ಇತ್ಯಾದಿ ಅವಧಿಗಳನ್ನು ಜೋಡಿಸಲಾಗಿತ್ತು.

ಬ್ಯಾಂಕ್ ಸಾಲದ ಬಗ್ಗೆ ಮಾಹಿತಿ: ತರಬೇತಿಯ ಉದ್ಧೇಶ ತರಬೇತಿ ಪಡೆದವರು ಸ್ವಯಂ ಉದ್ಯೋಗ ಪ್ರಾರಂಭ ಮಾಡುವುದು. ಅವರು ಇನ್ನೂ ಅನೇಕ ಜನರಿಗೆ ಉದ್ಯೋಗ ನೀಡುವಷ್ಟು ಸಶಕ್ತರಾಗಬೇಕೆನ್ನುವುದೇ ಆಗಿತ್ತು. ಹಾಗಾಗಿ ತರಬೇತಿ ಪಡೆದವರಿಗೆ ಮುಂದೆ ಸ್ವಯಂಉದ್ಯೋಗ ಮಾಡವಲ್ಲಿ ಹಣಕಾಸಿನ ಅವಕಾಶಗಳ ಬಗ್ಗೆಯೂ ಅರಿವೂ ಮೂಡಿಸಲಾಯಿತು. ಎಲ್ಲಾ ವಿಷಯದಲ್ಲೂ ಒಂದು ಗಂಟೆಯ ಅವಧಿಯನ್ನು ಬ್ಯಾಂಕ ಸಾಲಗಳ ಮಾಹಿತಿಗಾಗಿ ಮೀಸಲಿಡಾಗಿತ್ತು. ಪುತ್ತೂರಿನಲ್ಲಿ ಕೆನರಾ ಬ್ಯಾಂಕ್ ಪುತ್ತೂರಿನ ಮುಖ್ಯ ಪ್ರಭಂದಕರಾದ  ಹೃದಾಯಾದಿತ್ಯ ಕಲ್ಕೂರಾ, ಸುಳ್ಯದಲ್ಲಿ ಕಾರ್ಪೋರೇಶನ್ ಬ್ಯಾಂಕ್ ಸುಳ್ಯದ ಮುಖ್ಯ ಪ್ರಭಂದಕರು ಹಾಗೂ ಕಲ್ಲಡ್ಕದಲ್ಲಿ ನಿವೃತ್ತ ಬ್ಯಾಂಕ್ ಅಧಿಕಾರಿ  ಜಿ.ಕೆ ಭಟ್ ಬ್ಯಾಂಕ್ ಮಾಹಿತಿಯ ನೇತೃತ್ವ ವಹಿಸಿದ್ದರು.

ಏನು ಹೇಳುತ್ತಾರೆ ?

# ಅಗತ್ಯವಿರುವವರಿಗೆ ಉದ್ಯೋಗ ಒದಗಿಸಬೇಕೆಂಬುವುದು ನಮ್ಮ ಉದ್ಧೇಶವಾಗಿದೆ. ಈ ಶಿಬಿರದಿಂದ ಒಂದಷ್ಟು ಯಶಸ್ಸು ಸಿಕ್ಕಿದೆ. ನಮ್ಮ ಪ್ರಯತ್ನ ನಿರಂತರವಾಗಿರುತ್ತದೆ. –  ನ.ಸೀತರಾಮ, ನಿರ್ದೇಶಕರು, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ)

# ತರಬೇತಿಗೆ ಹಾಜರಾಗಿರುವ 800 ರಷ್ಟು ಶಿಕ್ಷಣಾರ್ಥಿಗಳು ವ್ಯಕ್ತಪಡಿಸಿರುವ ಮೆಚ್ಚುಗೆ, ಪ್ರಶಂಸೆ ಹಿನ್ನೆಲೆಯಲ್ಲಿ ಕೆಲಸ ಮಾಡಿದ ನೂರಾರು ಕಾರ್ಯಕರ್ತರಿಗೆ ಪ್ರಶಂಸಾ ಪತ್ರದ ರೀತಿಯಲ್ಲಿ ಉತ್ತೇಜನ ನೀಡಿದೆ. ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಕೇಂದ್ರಗಳಲ್ಲಿ ಈ ರೀತಿಯ ತರಬೇತಿ ನಡೆಸಲು ಬೇಡಿಕೆ ಬಂದಿದೆ. ಆ ದಿಕ್ಕಿನಲ್ಲಿ ತಯಾರಿ ನಡೆದಿದೆ. –  ಪ್ರವೀಣ್ ಸರಳಾಯ, ಮಂಗಳೂರು ವಿಭಾಗ ಸಂಯೋಜಕರು, ಗ್ರಾಮ ವಿಕಾಸ ಯೋಜನೆ.

# ಈ ರೀತಿಯ ಆತಂಕದ ಪರಿಸ್ಥಿತಿಯಲ್ಲಿ ಜನರಿಗೆ ತರಬೇತಿ ನೀಡಿರುವುದು ನಮಗೊಂದು ಹೊಸ ಅನುಭವ.  ಶಿಬಿರ ಯಶಸ್ವಿಯಾಗಿದೆ. ಇದರ ನಡುವೆಯೇ ಯೋಜನೆ ರೂಪಿಸಿ, ನಡೆಸಿಕೊಟ್ಟಿರುವುದು ನಮಗೆ ಸಂತೋಷ ಮತ್ತು ತೃಪ್ತಿ ತಂದು ಕೊಟ್ಟಿದೆ. –  ಗೋಪಿನಾಥ ಶೆಟ್ಟಿ, ಪ್ರಾಂಶುಪಾಲರು ವಿವೇಕಾನಂದ ಪಾಲಿಟೆಕ್ನಿಕ್

ಶಿಬಿರಾರ್ಥಿಗಳ ಅನಿಸಿಕೆಗಳು :

 ನಮ್ಮ ಬದುಕನ್ನು ರೂಪಿಸಿಕೊಳ್ಳಲು, ಹೊಸ ಕನಸು ಕಟ್ಟಿಕೊಳ್ಳಲು ಅನುವು ಮಾಡಿಕೊಟ್ಟ ಶಿಬಿರ. ಜನರ ದೈನಂದಿನ ಅಗತ್ಯತೆಗಳಿಗೆ ಉದ್ಯಮದ ಸ್ವರೂಪ ಕೊಡುವ ಸಾಧ್ಯತೆಯನ್ನು ಇದು ತಿಳಿಸಿದೆ. ನಾನು ಮುಂದಿನ ಜೀವನವನ್ನು ಶಿಬಿರದ ಆಧಾರದಲ್ಲಿ ರೂಪಿಸಿಕೊಳ್ಳುವ ಭರವಸೆ ಇದೆ –  ಸುಮಿತ್ರಾ, ಫ್ಯಾಶನ್‍ಡಿಸೈನ್ ಶಿಕ್ಷಣಾರ್ಥಿ.

 ಉತ್ತಮ ಸಂಪನ್ಮೂಲ ವ್ಯವಕ್ತಿಗಳನ್ನು ಒದಗಿಸಿಕೊಟ್ಟಿದ್ದಾರೆ. ಸೂಚ್ಯವಾಗಿ ಮತ್ತು ಪರಿಣಾಮಕಾರಿಯಾದ ತರಬೇತಿ ಸಿಕ್ಕಿದೆ – ರಾಜಶೇಖರ್, ಶಿಕ್ಷಣಾರ್ಥಿ

• ಅನುಭವ ಅದ್ಬುತವಾಗಿತ್ತು. ಸರಿಯಾದ ಶಿಕ್ಷಣ ಸಿಕ್ಕಿದೆ, ವ್ವಯವಸ್ಥಿತವಾದ ಅಚ್ಚುಕಟ್ಟಾದ ವ್ಯವಸ್ಥೆ, ಯಾವುದೇ ಗೊಂದವಿಲ್ಲದೆ ತರಬೇತಿ ಸಿಕ್ಕಿದೆ –  ಆಶಾ ಶೆಟ್ಟಿ, ಶಿಕ್ಷಣಾರ್ಥಿ

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 14-05-2025 | ಗುಡುಗು ಸಹಿತ ಮಳೆಯ ಮುನ್ಸೂಚನೆ | ಮೇ.27 ಸುಮಾರಿಗೆ ಕೇರಳ ಹಾಗೂ ರಾಜ್ಯಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆ
May 14, 2025
11:31 AM
by: ಸಾಯಿಶೇಖರ್ ಕರಿಕಳ
ಅರಣ್ಯ ಉಳಿದರಷ್ಟೇ ಮಾನವ ಉಳಿಯಲು ಸಾಧ್ಯ – ಈಶ್ವರ ಖಂಡ್ರೆ
May 14, 2025
11:20 AM
by: The Rural Mirror ಸುದ್ದಿಜಾಲ
ಜೂ.30 ರೊಳಗೆ ಬಾಕಿ ಇರುವ ಕಂದಾಯ ಗ್ರಾಮಗಳ ರಚನೆಗೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆ ಹೊರಡಿಸಲಾಗವುದು | ಕಂದಾಯ ಸಚಿವ ಕೃಷ್ಣಬೈರೇಗೌಡ
May 14, 2025
11:15 AM
by: The Rural Mirror ಸುದ್ದಿಜಾಲ
ಕೇತುವಿನಿಂದ 18 ತಿಂಗಳು ಈ ರಾಶಿಯವರಿಗೆಲ್ಲಾ ಉತ್ತಮವಾಗಲಿದೆ |
May 14, 2025
7:29 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group