ಇನ್ನರ್ ವೀಲ್ ಕ್ಲಬ್ ಸುಳ್ಯ : ಜಿಲ್ಲಾಧ್ಯಕ್ಷರ ಭೇಟಿ

August 24, 2019
11:00 AM

ಸುಳ್ಯ: ಇನ್ನರ್‍ವ್ಹೀಲ್ ಕ್ಲಬ್ ಸುಳ್ಯ ಇದರ ಜಿಲ್ಲಾಧ್ಯಕ್ಷರ ಭೇಟಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಹರ್ಷಿತಾ ಪುರುಷೋತ್ತಮ್ ವಹಿಸಿದ್ದರು.

ಜಿಲ್ಲಾ 318ರ ಜಿಲ್ಲಾಧ್ಯಕ್ಷೆ  ಅನುರಾಧ ನಂದಕುಮಾರ್ ಮಾತನಾಡಿ ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಚಿತ್ರಕಲೆಯಲ್ಲಿ ಸಾಧನೆ ಮಾಡಿದ ಕು. ಚಂದನಾ ಗೌಡರವರನ್ನು ಸನ್ಮಾನಿಸಿ, ವಿವಿಧ ಶಾಲೆಗಳಗೆ ಕೊಡುಗೆಗಳನ್ನು ನೀಡಲಾಯಿತು. ಈ ಸಂಧರ್ಭದಲ್ಲಿ ನೂತನ ಸದಸ್ಯರಾಗಿ ಡಾ. ತಾರಾ ನಂದನ್, ಡಾ. ಶ್ರಮಿಕಾ ಸೂಂತೋಡು, ಸವಿತಾ ನಾರ್ಕೋಡು, ಮಮತಾ ನಾರ್ಕೋಡು, ಸೌಮ್ಯಾ ಮಾಣಿಬೆಟ್ಟು ಮತ್ತು ಕೃಪಾ ದಿನೇಶ್ ರವರು ಕ್ಲಬ್‍ಗೆ ಸೇರ್ಪಡೆಗೊಂಡರು.

ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷೆ ಮಮತಾ ಸತೀಶ್, ಕಾರ್ಯದರ್ಶಿ ಜಯಮಣಿ ಮಾಧವ, ಖಜಾಂಜಿ ಪೂಜಾ ಸಂತೋಷ್, ಉಪಾಧ್ಯಕ್ಷೆ ವಿನುತಾ ಶೇಟ್, ಲಿಟ್ರೆಸಿ ಸಂಯೋಜಕಿ ಜಯಲಕ್ಷ್ಮೀ ಜೆ.ಕೆ. ರೈ, ಐ.ಎಸ್.ಒ. ಪ್ರಜ್ಞಾ ಮನುಜೇಶ್, ಜತೆ ಕಾರ್ಯದರ್ಶಿ ಸವಿತಾ ಸಿ.ಕೆ., ಸಂಪಾದಕಿ ಮಧುರಾ ಜಗದೀಶ್ ಉಪಸ್ಥಿತರಿದ್ದರು.

ಡಾ. ಹರ್ಷಿತಾ ಪುರುಷೋತ್ತಮ್ ಸ್ವಾಗತಿಸಿ, ಜಯಮಣಿ ಮಾಧವ್ ವರದಿ ವಾಚಿಸಿದರು. ವಿನುತಾ ಶೇಟ್ ವಂದಿಸಿ, ಶ್ರೀದೇವಿ ನಾಗರಾಜ್ ಹಾಗೂ ಆಶಿತಾ ಕೇಶವ್ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸುರುಳಿ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಭಜನಾ ಮಂಡಳಿ ಉದ್ಘಾಟನೆ
February 24, 2026
6:51 AM
by: ಮಿರರ್‌ ಡೆಸ್ಕ್
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
January 28, 2026
3:48 PM
by: ಮಿರರ್‌ ಡೆಸ್ಕ್
ಸುಳ್ಯದಲ್ಲಿ 265 ಅರ್ಹ ರೈತರಿಗೆ ಕೃಷಿ ಸವಲತ್ತುಗಳ ವಿತರಣೆ
January 20, 2026
6:24 AM
by: ದ ರೂರಲ್ ಮಿರರ್.ಕಾಂ
ಜನವರಿ 23 ರಿಂದ ಕದ್ರಿ ಫಲಪುಷ್ಪ ಪ್ರದರ್ಶನ
January 3, 2026
9:25 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror