ಮಂಗಳೂರು/ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೂ 48 ಗಂಟೆಗಳ ಕಾಲ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮುಂದಿನ 48 ಗಂಟೆಗಳಲ್ಲಿ 150 ರಿಂದ 200 ಮಿಮೀ ಮಳೆಯಾಗಲಿದೆ ಎಂದು ನಿನ್ನೆ ಸಂಜೆ ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು ಮುಂಜಾಗ್ರತಾ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ. ಈಗಾಗಲೇ ಹಾನಿ ಸಂಭವಿಸಿದ ಕಡೆ ವ್ಯವಸ್ಥೆ ಮಾಡುತ್ತಿದೆ.
ಇದೀಗ ಮಳೆ ಕಡಿಮೆಯಾಗುತ್ತಿದೆ. ಗುಜರಾತ್ ಕಡೆಗೆ ಹೆಚ್ಚಿನ ಮಳೆಯಾಗುತ್ತಿದೆ. ನಿನ್ನೆ ಸಂಜೆಯ ಹವಾಮಾನ ಮಾಹಿತಿ ಪ್ರಕಾರ ಮುಂಜಾಗ್ರತಾ ಕ್ರಮವಾಗಿ ರೆಡ್ ಅಲರ್ಟ್ ಘೋಷಣೆಯಾಗಿದೆ.
ನೇತ್ರಾವತಿ ನದಿ ನೀರಿನ ಮಟ್ಟ ಕೊಂಚ ಇಳಿಕೆಯಾಗಿದೆ. ಅಪಾಯಕಾರಿ ಮಟ್ಟದಿಂದ ಕಡಿಮೆಯಾಗಿದೆ. ಈಗಿನ ಉಪಗ್ರಹ ಆಧಾರಿತ ಹವಾಮಾನ ವರದಿ ಪ್ರಕಾರ ಮಳೆ ಕಡಿಮೆಯಾಗುತ್ತಿದೆ. ವಾರದ ನಂತರ ಸಂಪೂರ್ಣ ಕಡಿಮೆಯಾಗಲಿದೆ.

Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement




