ಸುಳ್ಯ: ಇಬ್ಬನಿ ಸುಳ್ಯ ಕನ್ನಡ ರಾಜ್ಯೋತ್ಸವದ ಸಲುವಾಗಿ ಪ್ರಸ್ತುತಪಡಿಸಿದ ಸುಳ್ಯ ತಾಲೂಕು ಮಟ್ಟದ ಪ್ರಬಂಧ ಸ್ಪರ್ದೆಯ ಬಹುಮಾನ ವಿತರಣೆ ಕಾರ್ಯಕ್ರಮ ಖಾದರ್ ಜಟ್ಟಿಪಳ್ಳ ಇವರ ಅಧ್ಯಕ್ಷತೆಯಲ್ಲಿ ಗಾಂಧೀನಗರದಲ್ಲಿ ನಡೆಯಿತು.
‘ಕನ್ನಡ ಬಾಷೆಯ ಬೆಳವಣಿಗೆಯಲ್ಲಿ ಸಂಘಟನೆಗಳ ಪಾತ್ರ’ ಎಂಬ ವಿಷಯದಲ್ಲಿ ಪ್ರಬಂಧಗಳನ್ನು ಆಹ್ವಾನಿಸಲಾಗಿತ್ತು. 51 ಪ್ರಬಂಧಗಳು ಸ್ವೀಕೃತಗೊಂಡು 15 ಪ್ರಬಂಧಗಳು ಬಹುಮಾನಕ್ಕೆ ಆಯ್ಕೆಯಾಗಿತ್ತು.
ಪ್ರಥಮ ಬಹುಮಾನವನ್ನು ಶ್ರೀ ಶಾರದಾ ಮಹಿಳಾ ಪದವಿ ಪೂರ್ವ ಕಾಲೇಜು ವಿಧ್ಯಾರ್ಥಿನಿ ಫಾತಿಮತ್ ಶಮೀರಾ ಪಡೆದುಕೊಂಡಿದ್ದಾರೆ. ದ್ವಿತೀಯ ಬಹುಮಾನವನ್ನು ಕೆ.ಎಸ್.ಎಸ್ ಪ್ರಥಮ ದರ್ಜೆ ಕಾಲೇಜು ಪ್ರಥಮ ವರ್ಷ ಬಿ.ಕಾಂ ವಿಧ್ಯಾರ್ಥಿನಿ ಸಿಂಧು ಬೈರವಿ ದೇರಳ ಪಡೆದರು.
ಉತ್ತಮ ಬರಹ, ಪ್ರೋತ್ಸಾಹಕ ಬಹುಮಾನಕ್ಕೆ 13 ಸ್ಪರ್ಧಾರ್ಥಿಗಳ ಬರಹ ಆಯ್ಕೆಮಾಡಿ ಬಹುಮಾನ ವಿತರಿಸಲಾಯಿತು. ಅರ್ಫಿನಾ ಆಸಿಫ್ ಪನ್ನೆ, ರಮ್ಯ ಎಂ ಮರ್ಕಂಜ ಎಸ್ ಆರ್ ಓಲ್ಡ್ ಗೇಟ್, ಆಶಯ್ ಕೆ.ಎ ಅಮರ ಜ್ಯೋತಿ ಕಾಲೇಜು , ಫಾರಿಸ ಜಿ.ಎಚ್, ಮಹಮ್ಮದ್ ರಿಲ್ವಾನ್ ಜಿ, ಫಾತಿಮತ್ ಝಿಹಾನ ಕೆ.ಎಚ್, ಪರಿಷ್ಮ ಎ.ಪಿ ದ್ವಿತೀಯ ವಿಜ್ಞಾನ ವಿಭಾಗ ನೆ.ಸ್ಮಾ.ಪ.ಪೂ ಕಾಲೇಜು ಅರಂತೋಡು, ಜಾಹಿರ್ ಪೆರಾಜೆ, ಲಿಖಿತ ಎಂ ಸ.ಪ.ಪೂ.ಕಾ ಸುಳ್ಯ, ಹಸೀನ ಎ.ಎಂ ಜಯನಗರ, ಸೌಜನ್ಯ ಎಸ್ ಪ್ರಥಮ ಪಿ.ಯು.ಸಿ ವಾಣಿಜ್ಯ ಬಿಭಾಗ ಶ್ರೀ ಶಾರದಾ ಮಹಿಳಾ ಕಾಲೇಜು ಸುಳ್ಯ, ಹನ್ನತ್ ಸಿದ್ದೀಕ್ ಜಯನಗರ ಪಡೆದಿರುತ್ತಾರೆ.
ಮುಖ್ಯ ಅಥಿತಿಗಳಾಗಿ ಹರೀಶ್ ಬಂಟ್ವಾಳ್, ಬೀಮರಾವ್ ವಾಸ್ಠರ್, ಹರ್ಷಿತ್ ಮಿತ್ತಡ್ಕ, ಶರೀಫ್ ಜಟ್ಟಿಪಳ್ಳ, ರಷೀದ್ ಜಟ್ಟಿಪಳ್ಳ, ಆಸಿಫ್ ಪನ್ನೆ ಹಾಗೂ ನಾಸಿರ್ ಸಿ.ಎ ಉಪಸ್ಥಿತರಿದ್ದರು. ಹಜರತ್ ಖಲೀಲ್ ನಿರೂಪಿಸಿ ಸ್ವಾಗತಿಸಿ ವಂದಿಸಿದರು.
ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ಮೂರು ದಿನಗಳ…
ಈಗಿನಂತೆ ಎಪ್ರಿಲ್ 29 ಹಾಗೂ 30 ರಂದು ಮಳೆ ಸ್ವಲ್ಪ ಕಡಿಮೆ ಇರುವ…
ಬೆಟ್ಟಗುಡ್ಡಗಳಲ್ಲಿ ಬೆಳೆಯಲಾಗುವ ಸೇಬನ್ನು ಕರ್ನಾಟಕದಲ್ಲಿಯೂ ಬೆಳೆಯಲಾಗುತ್ತಿದೆ ಎಂದು ಮನ್ ಕಿ ಬಾತ್‌ನಲ್ಲಿ ಪ್ರಧಾನಿ…
ಅಹಿಂಸೆಯೇ ಭಾರತದ ನೈಜ ಧರ್ಮವಾಗಿದೆ. ಆದರೆ, ಹಿಂಸಾಮಾರ್ಗದಲ್ಲಿ ಸಾಗುವವರ ದಮನ ಮಾಡುವುದೂ ಸಹ…
ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಪಾಕ್ ಪ್ರೇರಿತ ಭಯೋತ್ಪಾದಕರು ದಾಳಿ ನಡೆಸಿರುವ…
ರಾಜ್ಯದ ವಿವಿಧೆಡೆ ಮುಂದಿನ ಒಂದು ವಾರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು…