ಇಂದು ಗೆಳೆಯರ ದಿನ | ಗೆಳೆಯರೇ ನಿಮಗೆ ಶುಭಾಶಯ…….

July 30, 2020
9:04 AM

ಮಾತಿಗೆ ಕಿವಿಯಾಗುವ, ದುಃಖಕ್ಕೆ ಮರುಗುವ, ನಗುವಾಗ ನಗುವ ,ಅಳುವಾಗ ಕಣ್ಣೊರೆಸುವ, ಬಿದ್ದಾಗ ಎಬ್ಬಿಸುವ, ನೋವಿನಲ್ಲಿರುವಾಗ ಬೆನ್ನು ತಟ್ಟಿ ಸಮಾಧಾನಿಸುವ ಮನಸಿರುವುದು‌ ಗೆಳೆಯರಿಗೆ ಮಾತ್ರ.

Advertisement
Advertisement
Advertisement

ಯಾವುದೇ ಸ್ವಾರ್ಥವಿಲ್ಲದ , ಪ್ರೀತಿ ಸಿಗುವುದು ಗೆಳೆತನದಲ್ಲಿ. ಜಗತ್ತಿನಲ್ಲಿ ಉದಾಹರಣೆ ಯಾಗಬಲ್ಲ ಹಲವು ಮಿತ್ರ ಜೋಡಿಗಳಿವೆ. ಅವುಗಳಲ್ಲೆಲ್ಲ ನನ್ನ ಮಟ್ಟಿಗೆ ಶ್ರೇಷ್ಠವಾದ , ಇಷ್ಟವಾದ ಜೀವದ ಗೆಳೆಯರೆಂದರೆ  ಕೃಷ್ಣ, ಸುಧಾಮರು. ನಿಸ್ವಾರ್ಥ ಸ್ನೇಹಕ್ಕೆ ಯಾವಾಗಲು ಸೂಕ್ತ ಉದಾಹರಣೆ. ಗುರುಕುಲದಲ್ಲಿ ವಿದ್ಯಾರ್ಥಿ ಗಳೆಲ್ಲರೂ ಸಮಾನರು. ಅಂತಸ್ತಿನ ಹಂಗು ಅಲ್ಲಿರಲಿಲ್ಲ. ಗುರುಗಳ ಮುಂದೆ ಎಲ್ಲರೂ ಸಮಾನರು. ಬದುಕಿನ ಕ್ಷಣಗಳು ದುರ್ಬರವಾದಾಗ ಸುಧಾಮನ ಪತ್ನಿ ಗೆಳೆಯನ ಸಹಾಯ ಕೇಳಬಹುದಲ್ಲವೆಂದರೂ ಮನಸಿಲ್ಲದ ಮನಸಿನಿಂದ ಕೃಷ್ಣ ನ ಬಳಿಗೆ ಹೊರಟನು. ಅವಲಕ್ಕಿ ಕೃಷ್ಣ ನಿಗೆ ಪ್ರೀತಿಯೆಂದು ಆತನಿಗಾಗಿ ಮರೆಯದೆ ಕಟ್ಟಿಕೊಂಡನು. ಕೃಷ್ಣ ಎದುರಾದಾಗ ತನ್ನೆಲ್ಲಾ ಕಷ್ಟಗಳನ್ನು ಮರೆತು ಆತನ ಆನಂದದಲ್ಲಿ ತಾನು ಒಂದಾದ ಸುಧಾಮ. ಕೃಷ್ಣನೋ ಬಹು ಜಾಣ. ಸುಧಾಮನ ಮನೆವಾರ್ತೆಯ ಕುರಿತು ಏನೇನೂ ವಿಚಾರಿಸದೆ ಗುರುಕುಲದ ಸಮಯವನ್ನು ಮೆಲುಕು ಹಾಕುವುದರಲ್ಲೇ ಕಳೆದ. ಜೊತೆಗಿದ್ದ ನಾಲ್ಲು ದಿನಗಳು ಸಂತೋಷವಾಗಿ ಕಳೆದವು. ಕೃಷ್ಣ ನಿಂದ ಬೀಳ್ಗೊಂಡು ತನ್ನೂರಿಗೆ ಬಂದಾಗಲೇ ಸುಧಾಮನರಿವಿಗೆ ಬಂದದ್ದು ಕೃಷ್ಣನ ಮಹಿಮೆಯೇನೆಂದು.

Advertisement

ಗೆಳೆತನವೆಂದರೆ ಹಾಗೇ ಹೇಳದೇ ಅರಿಯಬೇಕು ನೋವ, ಕೇಳದೇ ಕೊಡಬೇಕು‌‌ ಅಕ್ಕರೆಯ, ಅಲ್ಲಿ ಕೊಡು ಕೊಳ್ಳುವ ವ್ಯವಹಾರಕ್ಕಿರಬಾರದು ಜಾಗ. ಗೆಳೆತನದ ಪ್ರೀತಿಯ ಮುಂದೆ ಬೇರೆಲ್ಲಾ ಗೌಣ. ಜೀವನದ ಎಲ್ಲಾ ಕ್ಷಣಗಳಲ್ಲಿ ಒಟ್ಟಿಗೇ ಇರ ಬೇಕೆಂದಿಲ್ಲ. ಶಾಲಾ ದಿನಗಳಲ್ಲಿ ಇದ್ದಂತೆ ಅವಾಗಾವಗ ಬೇಟಿಯಾಗುವುದು ಕಷ್ಟವೇ . ವಿವಿಧ ಕಾರಣಗಳಿಂದ ದೂರವಾಗಿರುವ ಗೆಳೆಯರು ಮಾನಸಿಕವಾಗಿ ಒಟ್ಟಿಗೇ ಇರುತ್ತಾರೆ. ಹೇಗೆಂದು ಅರ್ಥವಾಗದು. ತುಂಬಾ ಬೇಜಾರಾದಾಗ, ಮನಸಿಗೆ ಹಿಂಸೆಯೆನಿಸಿದಾಗ, ಒಂಟಿತನ ಕಾಡಿದಾಗ , ಇಂದು ಮಾತನಾಡಲೇ ಬೇಕು ಎನಿಸಿದಾಗ ನನ್ನ ಸ್ನೇಹಿತೆಯರು ಯಾವಾಗಲೂ ಸ್ಪಂಧಿಸುತ್ತಾರೆ ಎಂಬುದು ನನ್ನ ಭಾಗ್ಯವೇ ಸರಿ. ನಾನು ಹೆಮ್ಮೆಯಿಂದ ಹೇಳುವೆ ನನಗೂ ಭಾವನೆಗಳನ್ನು ಹಂಚಿಕೊಳ್ಳಲು ಮಿತ್ರರಿದ್ದಾರೆ ಎಂದು. ಎಲ್ಲರಿಗೂ   Happy friendship day.

# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಮನೆಯು ಮತ್ತೊಮ್ಮೆ ಮೊದಲ ಪಾಠಶಾಲೆಯಾಗಲಿ
November 20, 2024
8:49 PM
by: ಡಾ.ಚಂದ್ರಶೇಖರ ದಾಮ್ಲೆ
ಭತ್ತ ಬೆಳೆಸುವ ಪ್ರಯೋಗ, ಅಕ್ಕಿ ತಯಾರಿಸುವ ಪ್ರಕ್ರಿಯೆ
November 13, 2024
9:43 PM
by: ಡಾ.ಚಂದ್ರಶೇಖರ ದಾಮ್ಲೆ
ಆಧುನಿಕ ಯುಗದಲ್ಲಿ ಭಾರತೀಯ ಪ್ರಜೆ
November 6, 2024
6:42 AM
by: ಡಾ.ಚಂದ್ರಶೇಖರ ದಾಮ್ಲೆ
ವಕ್ಫ್ ಆಸ್ತಿ ವಿವಾದ | ಕಾಂಗ್ರೇಸ್ಸಿನ ತುಷ್ಟೀಕರಣದ, ಬಿಜೆಪಿಯ ದ್ವೇಷ ರಾಜಕಾರಣದ ಮತ್ತು ಮಾಧ್ಯಮಗಳ ವಿವೇಚನಾ ರಹಿತ ಚರ್ಚೆಗಳ ಭಾವನಾತ್ಮಕ ಪ್ರನಾಳ ಶಿಶು……..
November 5, 2024
7:22 AM
by: ವಿವೇಕಾನಂದ ಎಚ್‌ ಕೆ

You cannot copy content of this page - Copyright -The Rural Mirror