ಸುಳ್ಯ: ಈದುಲ್ ಫಿತರ್ ಮತ್ತು ವಿಶ್ವ ಪರಿಸರ ದಿನಾಚರಣೆ ಒಂದೇ ದಿನ ಬಂದಿರುವುದು ಈ ವರ್ಷದ ವಿಶೇಷತೆ. ಗಾಂಧಿನಗರ ಎಸ್ ಎಸ್ ಎಫ್ ಶಾಖೆ ವತಿಯಿಂದ ಈದುಲ್ ಫಿತರ್ ಮತ್ತು ಪರಿಸರ ದಿನಾಚರಣೆ ಒಟ್ಟಿಗೆ ಆಚರಿಸಿದರು.ಈದುಲ್ ಫಿತರ್ ನಮಾಜ್ ಬಳಿಕ ಎಸ್ ಎಸ್ ಎಫ್ ಪದಾಧಿಕಾರಿಗಳು
ಪರಿಸರ ದಿನ ಆಚರಿಸಿದರು. ನಗರ ಪಂಚಾಯತ್ ಸದಸ್ಯರಾದ ಷರೀಫ್ ಕಂಠಿ ಗಿಡ ನೆಡುವುದರ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶೈಕುನ ಅಬು ತ್ವಹೀರ್ ತಂಙಳ್, ಗುರುಗಳಾದ ಸ್ವಬಾಹ್, ಸಿದ್ದಿಕ್ ಸುಳ್ಯ ಎಸ್ ಎಸ್ ಎಫ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel