ಸುಳ್ಯ: ಈದ್ ಮಿಲಾದ್ ಆಚರಣೆ ಮೌಲೀದ್ ಪರಾಯಣ ಅನ್ನದಾನ ಮೀಲಾದ್ ಫೆಸ್ಟ್ ಸುಳ್ಯ ಗಾಂಧಿನಗರ ಮುಹಿಯುದ್ದೀನ್ ಜುಮ್ಮಾ ಮಸ್ಜಿದ್ ,ಮುನವಿರುಲ್ ಇಸ್ಲಾಂ ಮದರಸ ಅಶ್ರಯದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ ಜನ್ಮದಿನಾಚರಣೆಯನ್ನು ಸಂಭ್ರಮ ಸಡಗರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ತಾಲೂಕ್ ಸುನ್ನಿ ಜಮ್ಮಿಯತುಲ್ ಉಲಮಾ ಅಧ್ಯಕ್ಷ ಅಸ್ಸಯ್ಯದ್ ಕುಂಞಿಕೋಯ ತಙಳ್ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯ ಕೆ.ಎಂ.ಮುಸ್ತಫಾ, ಜಿಲ್ಲಾ ಮದರಸ ಅಧ್ಯಾಪಕರ ಸಂಘದ ಆಧ್ಯಕ್ಷ ಇಬ್ರಾಹಿಂ ಸಖಾಫಿ ಪುಂಡೂರ್, ಅನ್ಸಾರ್ ಅಧ್ಯಕ್ಷ ಶುಕೂರ್ ಹಾಜಿ ಅನ್ಸಾರಿಯ ಅಧ್ಯಕ್ಷ ಮಜೀದ್ ಜನತಾ ಜಮಾಅತ್ ಕಮಿಟಿ ಉಪಾದ್ಯಕ್ಷರುಗಳಾದ ಆಧಂ ಹಾಜಿ ಕಮ್ಮಾಡಿ ,ಹಮೀದ್ ಹಾಜಿ ಜನತಾ ,ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಹಾಜಿ ನಿರ್ದೇಶಕರುಗಳಾದ ಹಮೀದ್ ಬೀಜಕೊಚ್ಚಿ ,ಕೆ .ಎಸ್ .ಉಮ್ಮರ್ ಕೆ .ಬಿ .ಮಜೀದ್ ಗಫಾರ್ ಹಾಜಿ ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಬುರ್ದಾ ಆಲಾಪನೆ ದಫ್ ಪ್ರದರ್ಶನ ನಡೆಯಿತು.
ಸಹಾಯಕ ಖತೀಬರಾದ ಶೌಕತ್ ಅಲಿ ಅಮಾನಿಯವರ ನೇತೃತ್ವದಲ್ಲಿ ಮೌಲೀದ್ ಪರಾಯಣ ಸಾಮೂಹಿಕ ಪ್ರಾರ್ಥನೆ ನೆರವೇರಿತು. ಬಳಿಕ ಅನ್ನದಾನದೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಂಡಿತು.
ಹಲಸಿನ ಬೀಜದ ಪರೋಟ : ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಹಲಸಿನ…
ವೈದಿಕ ಜ್ಯೋತಿಷ್ಯದಲ್ಲಿ ಮಂಗಳ ಗ್ರಹವು ಶಕ್ತಿ, ಧೈರ್ಯ, ಮತ್ತು ಆಕ್ರಮಣಕಾರಿ ನಿರ್ಧಾರಗಳ ಸಂಕೇತವಾಗಿದೆ.…
12.07.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…
ಜ್ಯೋತಿಷ್ಯ ಶಾಸ್ತ್ರದಲ್ಲಿ ಕೇತು ಒಂದು ನಿಗೂಢ ಗ್ರಹವಾಗಿದ್ದು, ಆಧ್ಯಾತ್ಮಿಕತೆ, ಕರ್ಮ, ಮತ್ತು ಜೀವನದಲ್ಲಿ…
ಕೋಲಾರ ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಗ್ರಾಮ ಪಂಚಾಯತಿ ಸೇರಿದಂತೆ ಯಾವುದೇ…
ಹಾವೇರಿ ಜಿಲ್ಲೆಯಲ್ಲಿ ಹರಿಯುವ ವರದಾ ಹಾಗೂ ತುಂಗಭದ್ರಾ ನದಿಗಳಲ್ಲಿ ನೀರಿನ ಮಟ್ಟ ಕ್ರಮೇಣ…