ಪೆರ್ನಾಜೆ: ಈಶ್ವರಮಂಗಲದ ಶ್ರೀಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಉತ್ಸವ ಬಲಿಯಂದು ಸ್ವರ ಸಿಂಚನ ಕಾಲ ಬಳಗದಿಂದ ನವದುರ್ಗೆಯರ ಗೀತಗಾಯನದಲ್ಲಿ ನವಮಾತೆಯಾರು- ನವಕುವರಿಯರು ಎಂಬ ವಿನೂತನ ಗಾನ ವೈಭವ ಮಿಮಿಕ್ರಿ ನಗೆಹಬ್ಬ ಫೆ. 22 ರಂದು ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುಮಾರ ಪೆರ್ನಾಜೆ ಬಹುಮುಖ ಪ್ರತಿಭೆ ಪಟ್ಟಾಭಿರಾಮ ಸುಳ್ಯ, ಯಕ್ಷ ಪ್ರಭೆ ಶ್ರೀಕೃಷ್ಣ ಜೆಡ್ಡು ಅವರಿಗೆ ಪೆರ್ನಾಜೆ ಪ್ರಶಸ್ತಿ ಪ್ರದಾನ ಮಾಡಿದರು.
ಉತ್ಸವ ಸಮಿತಿಯ ಗೌರವಾಧ್ಯಕ್ಷರಾದ ಗೋಪಾಲಕೃಷ್ಣ ಕುಂಜತಾಯರವರು ಪಟ್ಟಾಭಿರಾಮ ಸುಳ್ಯರವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಕುಮಾರ ಪೆರ್ನಾಜೆ ಈಗಾಗಲೇ ರಾಷ್ಟ್ರೀಯ ಪುರಸ್ಕಾರ ಪಡೆದಿದ್ದು ರಾಜ್ಯ ಜಿಲ್ಲಾ ಮಟ್ಟಗಳಲ್ಲಿ ಕೃಷಿಯಲ್ಲಿ ಸಾಧನೆ ಮಾಡುವುದರ ಜೊತೆ ಗ್ರಾಮೀಣ ಕಲಾ ತಂಡದ ಮೂಲಕ ವೈವಿಧ್ಯಮಯ ಕಾರ್ಯಕ್ರಮಗಳನ್ನು ನೀಡುವುದರ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಇವರಿಂದ ಇನ್ನಷ್ಟು ಕಾಲ ಮಾಡುವಂತಾಗಲಿ ಎಂದು ನುಡಿದರು. ಸ್ವರ ಸಿಂಚನ ಕಲಾ ಬಳಗವನ್ನು ಶ್ಲಾಘಿಸಿ ಕಾರ್ಯಕ್ರಮಕ್ಕೆ ಸೇವಾದಾರರ 5 ವರ್ಷಗಳಿಂದ ಪ್ರಗತಿಪರ ಕೃಷಿಕ ಸತೀಶ್ ರೈ ಕರ್ನೂರು ಕೈಜೋಡಿಸುತ್ತಿರುವ ಬಗ್ಗೆ ಮೆಚ್ಚುಗೆ ನೋಡಿದರು.
ಪ್ರಕಾಶ ನಾರಾಯಣ ಜೆಡ್ಡು ಸನ್ಮಾನಿತ ಶ್ರೀಕೃಷ್ಣ ಜಡ್ಡುರವರ ತಂದೆ ಮಾತನಾಡುತ್ತಾ ತನ್ನ ಮಗನನ್ನು ಇಲ್ಲಿ ಗುರುತಿಸಿ ಸನ್ಮಾನಿಸಿದ್ದು ತನ್ನ ಮಗನನ್ನು ತನ್ನ ಮಗನ ಕಾರ್ಯ ನಡೆಯನ್ನು ಇನ್ನಷ್ಟು ಹೆಚ್ಚಿಸುವಂತೆ ಮಾಡಿದೆ. ಇಂತಹ ಕಾರ್ಯಕ್ರಮಗಳಿಂದ ನಮ್ಮನ್ನು ಜಾಗೃತಗೊಳಿಸುತ್ತದೆ ಎಂದು ಶುಭ ನುಡಿದರು. ಸೌಮ್ಯ ಪೆರ್ನಾಜೆ ಶ್ರೀಕೃಷ್ಣ ಜೆಡ್ಡು ರವರನ್ನು ಶಾಲು ಹೊದಿಸಿ ಸನ್ಮಾನಿಸಿದರು. ಉತ್ಸವ ಸಮಿತಿ ಅಧ್ಯಕ್ಷರಾದ ಸದಾಶಿವ ರೈ ನಡುಬೈಲು, ಸತೀಶ್ ರೈ ಕರ್ನೂರ್, ಭವಾನಿ ರೈ ಕರ್ನೂರು, ಜಯಂತಿ ರೈ ಕರ್ನೂರು, ಆನಂದ ರೈ ಸಂತ್ಯ, ಸ್ವರ ಸಿಂಚನ ಸಂಗೀತ ಶಾಲಾ ಮುಖ್ಯಶಿಕ್ಷಕಿ ಸವಿತಾ ಕೊಡಂದೂರು, ರಾಘು ರಾಮಶಾಸ್ತ್ರಿ ಕೊಡಂದೂರು, ಸಿಂಚನ ಲಕ್ಷ್ಮಿ ಕೊಡಂದೂರು, ಗೌರಿ ಜೆಡ್ಡು, ಶ್ರೀವಿದ್ಯಾ, ರಮ್ಯಾ ಜೆಡ್ಡು, ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು, ಪದ್ಮರಾಜ್ ಚಾರ್ವಾಕ ಸ್ವಾಗತಿಸಿ, ಸನ್ಮಾನಿತರ ಪರಿಚಯ, ವಂದಿಸಿದರು ಕುಮಾರ ಪೆರ್ನಾಜೆ ಕಾರ್ಯಕ್ರಮ ನಿರೂಪಿಸಿದರು.
ಕಳೆದ ಮೂರು ವರ್ಷಗಳಿಂದ ಕಾಡಾನೆ ದಾಳಿಗೆ ಒಟ್ಟು 129 ಮಂದಿ ರೈತರು ಬಲಿಯಾಗಿದ್ದಾರೆ.…
ಬಂಗಾಳಕೊಲ್ಲಿಯ ಉತ್ತರ ಭಾಗದಲ್ಲಿ ಆಗಸ್ಟ್ 15ರಂದು ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿದ್ದು, ಈಗಿನಂತೆ…
ವೈಜ್ಞಾನಿಕ ಶಿಫಾರಸ್ಸಿನಂತೆ ರಾಸಾಯನಿಕ ಗೊಬ್ಬರ ಬಳಕೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ…
ಕರಾವಳಿ ಸೇರಿದಂತೆ ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಧಾರಾಕಾರ ಮಳೆಯಾಗಿದೆ. ರಾಜ್ಯದ…
ತ್ಯಾಗಕ್ಕೊಂದು ಸ್ವ-ಸ್ವರೂಪ ಇದ್ದರೆ ಅದು ‘ಭೀಷ್ಮಾಚಾರ್ಯ’ರಿಗೆ ಹೊಂದುತ್ತದೆ. ತ್ಯಾಗವೆಂದರೆ ದೇಹವನ್ನು ಕಳೆದುಕೊಳ್ಳುವುದಲ್ಲ! ದೇಹವಿದ್ದೂ…
ವಿಜಯಪುರ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಗ್ರಾಮೀಣ ರಸ್ತೆ, ಕೃಷಿ, ತೋಟಗಾರಿಕೆ ಬೆಳೆಗಳು, ಜನ-ಜಾನುವಾರುಗಳ…