ಈ ಬಾರಿಯೂ ಅಡಿಕೆ ಬೆಳೆಗಾರರನ್ನು ಕಾಡಿತು ಕೊಳೆರೋಗ

September 17, 2019
9:48 AM

ಅಡಿಕೆಗೆ ಕೊಳೆರೋಗ ಬಾಧಿಸಿದೆ. ಕೆಲವು ಕಡೆಗಳಲ್ಲಿ ವಿಪರೀತವಾದ ಕೊಳೆರೋಗ ಕಂಡುಬಂದಿದೆ. ಸುಳ್ಯ , ಪುತ್ತೂರು, ಬೆಳ್ತಂಗಡಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ  ಕೊಳೆರೋಗ ಈಗ ಸದ್ದು ಮಾಡುತ್ತಿದೆ. ಎರಡು ಬಾರಿ ಔಷಧಿ ಸಿಂಪಡಣೆ ನಂತರವೂ ಕೊಳೆರೋಗ ಕಂಡುಬಂದಿರುವುದು ಬೆಳೆಗಾರಿಗೆ ಆತಂಕ ಮೂಡಿಸಿದೆ. 

Advertisement

ಅಡಿಕೆಗೆ ಈ ಬಾರಿಯೂ ಕೊಳೆರೋಗ ಬಾಧಿಸಿದೆ. ಕಳೆದ ವರ್ಷ ಭಾರೀ ಮಳೆಯ ಕಾರಣದಿಂದ ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರು ಕಂಗಾಲಾಗಿದ್ದರು. ಶೇ.70 ರಷ್ಟು ಅಡಿಕೆ ನಾಶವಾಗಿತ್ತು. ಅದರ ಹೊಡೆತದಿಂದ ಹೊರಬರುವ ಹೊತ್ತಿಗೆ ಈ ಬಾರಿಯೂ ಭಾರೀ ಮಳೆಯ ಕಾರಣದಿಂದ ಮತ್ತೆ ಕೊಳೆರೋಗ ವಕ್ಕರಿಸಿದೆ. ಹಲವು ತೋಟಗಳಲ್ಲಿ ಅಡಿಕೆ ಉದುರುತ್ತಿದೆ. ಬೆಳೆಗಾರರಿಗೆ ಹೊಡೆತದ ಮೇಲೆ ಹೊಡೆತ ಬಿದ್ದಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆ ಇದೆ. ಹಾಗಿದ್ದರೂ ಒಮ್ಮೆಲೇ ಸುರಿದ ಭಾರೀ ಮಳೆ ಅಡಿಕೆಗೆ ಸಂಕಷ್ಟ ತಂದಿದೆ. ಕಳೆದ ಬಾರಿಯ ರೋಗ ಬಾಧೆಗೆ ತತ್ತರಿಸಿದ್ದ ಅಡಿಕೆ ಮರಕ್ಕೆ ಈ ಬಾರಿಯ ಮಳೆಗೆ ತಕ್ಷಣವೇ ಶೀಲೀಂದ್ರವು ಚುರುಕಾಗಿ ಕೊಳೆರೋಗಕ್ಕೆ ಕಾರಣವಾಗಿದೆ. ಪುತ್ತೂರು ತಾಲೂಕಿನ ಹಲವು ಕಡೆಗಳಲ್ಲಿ  ಕೊಳೆರೋಗ ಕಂಡುಬಂದರೆ ಸುಳ್ಯ ತಾಲೂಕಿನ ಬೆಳ್ಳಾರೆ, ಪಂಜ ಸೇರಿದಂತೆ ವಿವಿಧ ಕಡೆಯ ಬೆಳೆಗಾರರು ಕೊಳೆರೋಗ ಇರುವ ಬಗ್ಗೆ ಹೇಳುತ್ತಾರೆ. ಎರಡು ಬಾರಿ ಔಷಧಿ ಸಿಂಪಡನೆ ನಂತರವೂ ಕೊಳೆರೋಗ ಬಾಧಿಸಿಸುತ್ತಿದೆ ಎಂದು ಬೆಳೆಗಾರರು ಅಳಲು ತೋಡುತ್ತಾರೆ. ಹೀಗಾಗಿ ಏನೂ ಮಾಡಲಾಗದೆ ಕೈಚೆಲ್ಲಿ ಕುಳಿತುಕಜೊಳ್ಳಬೇಕಾದ ಸ್ಥಿತಿ ಇದೆ. ಸಪ್ಟಂಬರ್ ವರೆಗೆ ಕೊಳೆರೋಗದ ಲಕ್ಷಣ ಇರಲಿಲ್ಲ. ನಂತರ ಕಾಣಿಸಿದೆ ಎಂದು ಕೃಷಿಕ ಜಯಗೋವಿಂದ ಹೇಳಿದರೆ  ಪುತ್ತೂರು ತಾಲೂಕಿನ ಕರ್ನೂರಿನ ಸತೀಶ್ ಅವರು ಹೇಳುವಂತೆ ಕಳೆದ ವರ್ಷದಷ್ಟೇ ಈ ಬಾರಿ ಕೊಳೆರೋಗ ಬಾಧಿಸಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಾಗಿದೆ ಎನ್ನುತ್ತಾರೆ.

ಪುತ್ತೂರು ತಾಲೂಕಿನ ಕರ್ನೂರಿನ ಸತೀಶ್ ಅವರ ತೋಟದಲ್ಲಿ

ಹಾಗೆ ನೋಡಿದರೆ ಕೊನೆಯ ಈ ಅವಧಿಯಲ್ಲಿ ಮಳೆ ಹೆಚ್ಚಾಗಿದೆ. ಬಾಳಿಲದ ಪಿ ಜಿ ಎಸ್ ಎನ್ ಪ್ರಸಾದ್ ಅವರ ಮಾಹಿತಿ ಪ್ರಕಾರ ಪೂರ್ವಫಲ್ಗುಣಿ ಅಥವಾ ಹುಬ್ಬಾ ನಕ್ಷತ್ರ (ಆಗಸ್ಟ್ 31 – ಸೆಪ್ಟೆಂಬರ್ 12) ದ ಅವಧಿಯಲ್ಲಿ ದಾಖಲಾದ ಮಳೆ = 813 ಮಿ.ಮೀ. ಕಳೆದ ವರ್ಷ ಕೇವಲ 52 ಮಿ.ಮೀ.

ಸರಾಸರಿ (ಮಿ.ಮೀ.ಗಳಲ್ಲಿ)
1976 – 2000 = 196
2001 – 2019 = 269
1976 – 2019 = 228
ಗರಿಷ್ಟ = 813 ( 2019 )
ದ್ವಿತೀಯ ಗರಿಷ್ಟ=613 ( 2007 )
ಕನಿಷ್ಟ =028 (1991 )

ದಿನವೊಂದರಲ್ಲಿ ದಾಖಲಾದ ಗರಿಷ್ಟ ಮಳೆ 158 ಮಿ.ಮೀ (8/9/2019)

ತಕ್ಷಣವೇ ಗಮನಹರಿಸುವುದು  ಸೂಕ್ತ:

ಆಡಳಿತವು ತಕ್ಷಣವೇ ಬೆಳೆಗಾರರ ಸಂಕಷ್ಟದ ಕಡೆಗೆ ಗಮನಹರಿಸಬೇಕಿದೆ. ಏಕೆಂದರೆ ಸತತ ಎರಡು ವರ್ಷ ಕೊಳೆರೋಗದಿಂದ ಅಡಿಕೆ ನಾಶವಾಗಿದೆ. ಅಡಿಕೆ ಬೆಳೆಗಾರರಿಗೆ ಇಡೀ ವರ್ಷದ ಆದಾಯವೂ ಇದೇ ಆಗಿದೆ. ಹೀಗಾಗಿ ಸರಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ತಕ್ಷಣವೇ ಸ್ಪಂದಿಸಿ ಏನು ಮಾಡಬಹುದು  ಎಂಬುದರ ಬಗ್ಗೆ ಚಿಂತನೆ ನಡೆಸಬೇಕಿದೆ. ಏಕೆಂದರೆ ಸತತ ಎರಡು ವರ್ಷಗಳಿಂದ ಅಡಿಕೆಗೆ ವ್ಯಾಪಕವಾಗಿ ಕೊಳೆರೊಗ ಬಾಧಿಸಿದೆ.

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹರಿಯಾಣ | 800 ಮೆ.ವ್ಯಾ.ವಿದ್ಯುತ್ ಉತ್ಪಾದನಾ ಘಟಕಕ್ಕೆ ಪ್ರಧಾನಿ ಮೋದಿ ಚಾಲನೆ
April 14, 2025
7:40 PM
by: The Rural Mirror ಸುದ್ದಿಜಾಲ
ಚಾಮರಾಜನಗರ ಜಿಲ್ಲೆ ಸಿದ್ದಾಪುರ ಜಮೀನು ವಿವಾದ | ರೈತರು ಆತಂಕಪಡುವ ಅಗತ್ಯವಿಲ್ಲ
April 14, 2025
7:28 PM
by: The Rural Mirror ಸುದ್ದಿಜಾಲ
ಜೂ.30 ರಿಂದ ಮಂಡ್ಯ ಮೈಶುಗರ್ ಕಾರ್ಖಾನೆಯಲ್ಲಿ  ಕಬ್ಬು ಅರೆಯುವ ಪ್ರಕ್ರಿಯೆ ಆರಂಭ
April 14, 2025
6:20 AM
by: The Rural Mirror ಸುದ್ದಿಜಾಲ
ಸಹಕಾರ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿ | ಸಚಿವ ಅಮಿತ್‌ ಶಾ ಹೇಳಿಕೆ
April 14, 2025
6:16 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group