ಈ ವೃದ್ದರಿಗೆ ಬೇಕಿದೆ “ಆಸರೆ”ಯ ಊರುಗೋಲು…

August 22, 2019
6:59 PM

ಬೆಳ್ಳಾರೆ: 70 ವರ್ಷದ ಈ ವೃದ್ಧ ದಂಪತಿಗಳಿಗೆ ಬೇಕಿದೆ ಆಸರೆ. ಅಮರಪಡ್ನೂರು ಗ್ರಾಮದ ಶೇಣಿ ಸಮೀಪ ಕುಳ್ಳಾಜೆಯಲ್ಲಿ ವಾಸ್ತವ್ಯವಿರುವ ಮಾಣಿಕ(78) , ಬೊಳ್ಳೆಚ್ಚಿ(70) ದಂಪತಿಗಳು 35 ವರ್ಷದಿಂದ ಈ ಸ್ಥಳದಲ್ಲಿ ಪಕ್ಕಾ ಸೂರಿಲ್ಲದೇ ಬದುಕುತ್ತಿದ್ದಾರೆ. ಈಗಲಾದರೂ ಪಕ್ಕಾ ಸೂರು ದೊರಕಿ ಸರಕಾರದ ಸವಲತ್ತು ವೃದ್ದ  ದಂಪತಿಗೆ ದೊರೆಯುವಂತಾಗಲಿ ಎಂಬ ಆಶಯ ಸ್ಥಳೀಯರದ್ದು.

ಅಮರಪಡ್ನೂರು ಗ್ರಾಮದ ಶೇಣಿ ಸಮೀಪ ಕುಳ್ಳಾಜೆಯಲ್ಲಿ ವಾಸ್ತವ್ಯವಿರುವ ಮಾಣಿಕ ಅವರ ಕುಟುಂಬಕ್ಕೆ  70 ವರ್ಷ ಹಿಂದೆ ಸರಕಾರದಿಂದ ಮಂಜೂರಾದ 4:40 ಎಕ್ರೆ ಸ್ಥಳ ಇತ್ತು. ಅದು ಮಾಣಿಕ ಅವರ ಸಹೋದನ  ಹೆಸರಿನಲ್ಲಿದೆ. ಸಹೋದರ ಈಗಾಗಲೇ ಮೃತಪಟ್ಟಿದ್ದು ಅವರ ಮಕ್ಕಳು ಇದೇ ಸ್ಥಳದ ಇನ್ನೊಂದು ಕಡೆ ಕಚ್ಚಾ ಸೂರಿನಲ್ಲಿದ್ದಾರೆ. ತೀರಾ ಕಡುಬಡವರಾದ ಮಾಣಿಕ ಅವರಿಗೆ ಒಬ್ಬ ಪುತ್ರನಿದ್ದು ಆತ ಉದ್ಯೋಗದ ನಿಮಿತ್ತ  ದೂರದಲ್ಲಿ ವಾಸ್ತವ್ಯ ಹೊಂದಿದ್ದಾರೆ. ಇವರು ಜೀವನೋಪಾಯಕ್ಕೆ ಅಡಕೆ ಸುಲಿಯುವ ಮುಂತಾದ ಸಣ್ಣಪುಟ್ಟ ಕಾಯಕ ಮಾಡಿ ಜೀವನ ಸಾಗಿಸುತ್ತಿದ್ದಾರೆ. ವೃದ್ದಾಪ್ಯದಲ್ಲಿ ಆರೋಗ್ಯದ ಸಮಸ್ಯೆ ಕಾಡುತ್ತಿದ್ದು ಇವರ ಪತ್ನಿಗೆ ಇತ್ತಿಚೆಗೆ ಕಣ್ಣಿನ ಶಸ್ತ್ರ ಚಿಕಿತ್ಸೆಯಾಗಿದೆ. ವೃದ್ಧಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸಲು ಅತ್ತಿತ್ತ ಓಡಾಡಿದ್ದು ಮಾತ್ರ. ಯಾವುದೆ ಫಲ ನೀಡಿಲ್ಲ. ಹೀಗಾಗಿ ಈ ಕುಟುಂಬಕ್ಕೆ ಸೌಲಭ್ಯ ಸಿಗುವಂತಾಗಲಿ ಎಂಬ ಆಶಯ ಸ್ಥಳೀಯರದ್ದು.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಎಲ್‌ ನಿನೋ ಈಗ ಮತ್ತಷ್ಟು ನಿಗೂಢ…! ಹವಾಮಾನ ಬದಲಾವಣೆ ಮಳೆ ಮುನ್ಸೂಚನೆಗಳನ್ನೇ ಗೊಂದಲಗೊಳಿಸುತ್ತಿದೆಯೇ..?
June 19, 2026
7:21 AM
by: ದ ರೂರಲ್ ಮಿರರ್.ಕಾಂ
ಪ್ರತಿ ಜಿಲ್ಲೆಯಲ್ಲಿ ಒಂದು ಗೋಆಧಾರಿತ ಉದ್ಯಮ – ಉತ್ತರ ಪ್ರದೇಶದ ಹೊಸ ಮಾದರಿ ದೇಶದ ಗಮನ ಸೆಳೆಯುತ್ತಿದೆ
June 19, 2026
7:01 AM
by: ದ ರೂರಲ್ ಮಿರರ್.ಕಾಂ
ಅತಿವೃಷ್ಟಿ, ಬರ, ಹೀಟ್‌ ವೇವ್‌ಗಳಿಗೆ ಯಾರು ಕಾರಣ? ಐಐಟಿ ದೆಹಲಿ ಅಧ್ಯಯನದಿಂದ ಕುತೂಹಲಕಾರಿ ಮಾಹಿತಿ!
June 18, 2026
10:15 AM
by: ದ ರೂರಲ್ ಮಿರರ್.ಕಾಂ
ದಕ್ಷಿಣ ಕನ್ನಡಕ್ಕೆ ಕೈಗಾರಿಕಾ ಬಲ : ಗಂಜಿಮಠ ಪ್ಲಾಸ್ಟಿಕ್ ಪಾರ್ಕ್ ಕಾಮಗಾರಿ ಪರಿಶೀಲಿಸಿದ ಸಂಸದ ಬ್ರಿಜೇಶ್ ಚೌಟ
June 17, 2026
8:43 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror