ನಮ್ಮ ಹೆಮ್ಮೆಯ ವೀರಯೋಧ ಚೇತರಿಸಿಕೊಳ್ಳುತ್ತಿದ್ದಾರೆ

July 2, 2019
8:00 AM

ಮಡಿಕೇರಿ  : ತಲೆಗೆ ಗುಂಡು ಬಿದ್ದರೂ ಉಗ್ರರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ಬದುಕಿ ಬಂದ ಕೊಡಗಿನ ವೀರಯೋಧ ಎಚ್.ಎನ್.ಮಹೇಶ್. ಕಿರಿಯ ವಯಸ್ಸಿನಲ್ಲೇ ಶೌರ್ಯ ಚಕ್ರ ಪ್ರಶಸ್ತಿ ಪಡೆದ,  ಸಾಧನೆ ಮಾಡಿರುವ ಕೊಡಗಿನ ವೀರಯೋಧ ಎಚ್.ಎನ್.ಮಹೇಶ್ ಅವರು ಉಗ್ರರ ವಿರುದ್ಧ ನಡೆದ ಮತ್ತೊಂದು ಸಮರದಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಗೆದ್ದು ಬಂದಿದ್ದಾರೆ. ಉಗ್ರರ ಗುಂಡೇಟಿನಿಂದ ಗಾಯಗೊಂಡಿದ್ದ ಅವರು ಇದೀಗ ಚೇತರಿಸಿಕೊಂಡಿದ್ದಾರೆ.

Advertisement

ರಜೆಯ ನಿಮಿತ್ತ  ಊರಿಗೆ ಬಂದಿದ್ದ ಮಹೇಶ್ ಮೇ 15 ರಂದು ಕರ್ತವ್ಯಕ್ಕೆ ಮರಳಿದ್ದರು. ಮೇ 29 ರಂದು ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‍ನಲ್ಲಿ ಉಗ್ರರು ಅಡಗಿರುವ ಮಾಹಿತಿ ಆಧರಿಸಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಉಗ್ರರು ಹಾರಿಸಿದ ಗುಂಡು ಮಹೇಶ್ ಅವರ ತಲೆಗೆ ಬಿದ್ದಿತ್ತು. ತಲೆಗೆ ಗುಂಟೇಟು ಬಿದ್ದರೂ ಹಿಂಜರಿಯದ ಮಹೇಶ್ ಉಗ್ರರತ್ತ ನಿರಂತರವಾಗಿ ಗುಂಡು ಹಾರಿಸಿದ್ದರು. ಇವರೊಂದಿಗಿದ್ದ ಇತರ ಸೈನಿಕರು ಗಾಯಗೊಂಡಿದ್ದ ಮಹೇಶ್‍ರನ್ನು ಹಿಂದಕ್ಕೆ ಎಳೆದುಕೊಂಡು ಉಗ್ರರನ್ನು ಕೊಂದಿದ್ದರು. ಬಳಿಕ ಜೈ ಹಿಂದ್ ಎಂದಿದ್ದರು.

ಗುಂಡಿನ ದಾಳಿಯ ಸಂದರ್ಭ ಉಗ್ರರು ಹಾರಿಸಿದ್ದ ಗುಂಡು ಬಲಭಾಗದ ಕಿವಿಯ ಹತ್ತಿರ ಒಳಹೊಕ್ಕು ದವಡೆಯ ಮೂಳೆಯನ್ನು ಸೀಳಿಕೊಂಡು ಮೂಗಿನ ಭಾಗದಿಂದ ಹೊರಬಂದಿತ್ತು. ಗುಂಡೇಟಿನಿಂಗ ಗಾಯವಾಗಿರುವ ಮುಖದ ಭಾಗಕ್ಕೆ 50 ಹೊಲಿಗೆ ಹಾಕಲಾಗಿದೆ. ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಮಹೇಶ್ ಅವರನ್ನು ಚಂಡೀಗಢದ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯಗೊಂಡಿದ್ದ ಮಹೇಶ್ ಕೋಮಾಗೆ ಜಾರಿದ್ದರು. ಹಲವು ದಿನಗಳ ಚಿಕಿತ್ಸೆಯ ನಂತರ ಅವರು ಈಗ ಚೇತರಿಸಿಕೊಂಡಿದ್ದಾರೆ.

ಈ ಹಿಂದೆಯೂ ಉಗ್ರರ ವಿರುದ್ದ ನಡೆದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವ ಹೆಚ್.ಎನ್.ಮಹೇಶ್ ಇಲ್ಲಿಯವರೆಗೆ ಒಟ್ಟು 8 ಮಂದಿ ಉಗ್ರರನ್ನು ಕೊಂದು ಹಾಕಿದ್ದಾರೆ. 2018ರ ಆಗಸ್ಟ್ ತಿಂಗಳಲ್ಲಿ ಶೋಫಿಯಾನ್ ಜಿಲ್ಲೆಯಲ್ಲಿ ಭಯೋತ್ಪಾದಕರ ವಿರುದ್ದ ನಡೆಸಿದ ಕಾರ್ಯಾಚರಣೆಯಲ್ಲಿ ಲಷ್ಕರ್-ಎ-ತೋಯ್ಬದ ಇಬ್ಬರು ಉಗ್ರವಾದಿಗಳನ್ನು ಕೊಂದು ಹಾಕಿದ್ದಲ್ಲದೇ, ಮತ್ತೋರ್ವನನ್ನು ಗಂಭೀರವಾಗಿ ಗಾಯಗೊಳಿಸಿದ್ದರು. ಭಯೋತ್ಪಾದಕರ ವಿರುದ್ದ ನಡೆಸಲಾದ ಎನ್‍ಕೌಂಟರ್ ಗಳಲ್ಲಿ ದೇಶಭಕ್ತಿ ಮತ್ತು ಅಪ್ರತಿಮ ಸಾಹಸ ಪ್ರದರ್ಶಿಸಿರುವ ಮಹೇಶ್ ಅವರಿಗೆ ರಾಷ್ಟ್ರಪತಿಗಳು ಶೌರ್ಯಚಕ್ರ ನೀಡಿ ಗೌರವಿಸಿದ್ದರು.

ಅವರಿಗೆ ನಮ್ಮದೊಂದು ಸಲಾಂ …..  ಜೈ ಹಿಂದ್……

Advertisement

 

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೇರಳದಲ್ಲಿ ನಿಫಾ ಎಚ್ಚರಿಕೆ | ತಡೆಗಟ್ಟುವ ಕ್ರಮಗಳ ಬಗ್ಗೆ ನಿಗಾ
July 10, 2025
8:51 PM
by: The Rural Mirror ಸುದ್ದಿಜಾಲ
ದಾವಣಗೆರೆ ನಗರ ಸೇರಿದಂತೆ ಜಿಲ್ಲೆಯಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆ ನಿಷೇಧ
July 9, 2025
9:16 PM
by: The Rural Mirror ಸುದ್ದಿಜಾಲ
ಹೃದಯಾಘಾತದ ಬಗ್ಗೆ ಅನಗತ್ಯ ಆತಂಕ ಪಡುವ ಅಗತ್ಯ ಇಲ್ಲ
July 9, 2025
9:07 PM
by: The Rural Mirror ಸುದ್ದಿಜಾಲ
ಸುಳ್ಳು ಸುದ್ದಿ ಹರಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ – ಗೃಹಸಚಿವ ಡಾ.ಜಿ.ಪರಮೇಶ್ವರ್
July 9, 2025
8:50 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group