ಮಂಗಳೂರು : ಕರ್ನಾಟಕ ಸರಕಾರದ ಕೌಶಲ್ಯಾಭಿವೃದ್ದಿ ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖಾ ಅಧೀನಕ್ಕೆ ಒಳಪಟ್ಟ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ (ಕೆ.ಜಿ.ಟಿ.ಟಿ.ಐ) ಯಲ್ಲಿ ಕೌಶಲ್ಯ ಕರ್ನಾಟಕ ಯೋಜನೆಯಡಿ ಸಿಸ್ಕೊ ಸರ್ಟಿಫೈಡ್ ನೆಟ್‍ವರ್ಕ್ ಅಸೋಸಿಯೇಟ್(ಸಿ.ಸಿ.ಎನ್.ಎ), ಸಿಸ್ಕೊ ಐ.ಟಿ. ಎಸೆನ್ಸಿಯಲ್ಸ್, ಬೇಸಿಕ್ ವೆಲ್ಡಿಂಗ್, ಟಿಗ್ ವೆಲ್ಡಿಂಗ್, ಮಿಗ್ ವೆಲ್ಡಿಂಗ್, ರೆಫ್ರಿಜರೇಶನ್ ಮತ್ತು ಏರ್ ಕಂಡೀಷನಿಂಗ್ ಟೆಕ್ನಿಷಿಯನ್, ಟ್ಯಾಲಿ ಇಖP 9 ಕೋರ್ಸ್‍ಗಳಲ್ಲಿ ಉಚಿತ ಉದ್ಯೋಗಾಧಾರಿತ ಅಲ್ಪಾವಧಿ ಕೌಶಲ್ಯ ತರಬೇತಿ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ಮಂಗಳೂರಿನ ಶರಬತ್‍ಕಟ್ಟೆ ಬಳಿ ಇರುವ ಕೆ.ಜಿ.ಟಿ.ಟಿ.ಐ ಕಛೇರಿಯಿಂದ ಅರ್ಜಿಯನ್ನು ಪಡೆದು ಭರ್ತಿಗೊಳಿಸಿ ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಆಧಾರ್‍ಕಾರ್ಡ್, ಜಾತಿ / ಆದಾಯ ಪ್ರಮಾಣ ಪತ್ರದ ಪ್ರತಿಗಳೊಂದಿಗೆ ಭಾವಚಿತ್ರ ಲಗತ್ತಿಸಿ ಅರ್ಜಿ ಸಲ್ಲಿಸಬಹುದಾಗಿದ್ದು, ಖಾಲಿ ಇರುವ ಸ್ಥಾನಗಳನ್ನು “ಫಸ್ಟ್ ಕಮ್ ಫಸ್ಟ್ ಸರ್ವ್” ಪದ್ಧತಿಯನ್ನು ಅನುಸರಿಸಿ ಸ್ಥಾನ ಹಂಚಿಕೆ ನಡೆಸಲಾಗುವುದು. ಸಿ.ಸಿ.ಎನ್.ಎ ತರಬೇತಿಗೆ ಕಂಪ್ಯೂಟರ್ ಸೈನ್ಸ್ ಅಥವಾ ಇಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಡಿಪ್ಲೋಮಾ ಅಥವಾ ಇಂಜಿನಿಯರಿಂಗ್ ಪದವಿಯನ್ನು ಹೊಂದಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0824-2211477 ಸಂಪರ್ಕಿಸಲು ನಿರ್ದೇಶಕರು, ಕೆ.ಜಿ.ಟಿ.ಟಿ.ಐ. ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.
ಬಂಗಾಳಕೊಲ್ಲಿಯ ಆಂದ್ರಾ, ಒಡಿಶಾ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಆಗಸ್ಟ್ 18,19 ರಂದು…
ಗ್ರಾಮೀಣ ಮಟ್ಟದ ಆರ್ಥಿಕ ಸಹಕಾರ ಸಂಘಗಳ ಪ್ರಮುಖ ಚಟುವಟಿಕೆ ಎಂದರೆ ಸದಸ್ಯರಿಂದ ಠೇವಣಾತಿ…
ಶೀಘ್ರದಲ್ಲೇ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತಿಗಳಿಗೆ ಚುನಾವಣೆ ನಡೆಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ…
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ರೈತರೊಬ್ಬರು ಶೂನ್ಯ ಬಂಡವಾಳದಲ್ಲಿ ಅತ್ಯುತ್ತಮ ಇಳುವರಿ ತೆಗೆಯುವ…
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮ ಪಂಚಾಯತ್ ಆತ್ಮನಿರ್ಭರ ಯೋಜನೆಯಡಿಯಲ್ಲಿ…
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ಅಸ್ತಿ ವಿಸರ್ಜನೆ ಮಾಡಿ ನದಿ…