ಉಚಿತ ಕೌಶಲ್ಯ ತರಬೇತಿ ಹಾಗೂ ಉದ್ಯೋಗ ಸಹಾಯ

January 24, 2020
8:37 PM

ಮಂಗಳೂರು : ಕರ್ನಾಟಕ ಸರ್ಕಾರ, ಕೌಶಲ್ಯ ಅಭಿವೃದ್ದಿ ಯೋಜನೆಯಡಿಯಲ್ಲಿ, ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಅರ್ಹ ನಿರುದ್ಯೋಗಿ ಯುವಕ-ಯುವತಿಯರಿಗೆ ಕೌಶಲ್ಯ ಅಭಿವೃದ್ದಿ ತರಬೇತಿಯನ್ನು ಉಚಿತವಾಗಿ ಹೋಟೆಲ್ ಮ್ಯಾನೇಜ್‍ಮೆಂಟ್ ಕ್ಷೇತ್ರದಲ್ಲಿ ಪ್ರಾರಂಭಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

Advertisement

ಹೋಟೆಲ್ ಮ್ಯಾನೇಜ್‍ಮೆಂಟ್  ತರಬೇತಿಯ  ಕ್ಷೇತ್ರಗಳು:

ಫುಡ್ ಪ್ರೊಡಕ್ಷನ್, ತರಬೇತಿ ಅವಧಿ – 18 ವಾರಗಳು, ವಿದ್ಯಾರ್ಹತೆ 8 ನೇ ತರಗತಿ ಉತ್ತೀರ್ಣ, ರೂ. 2000 ಸ್ಟೈಫಂಡ್,

ಬೇಕರಿ ಅಂಡ್ ಕನ್‍ಫೆಕ್ಷನರಿ ತರಬೇತಿ ಅವಧಿ – 6 ವಾರಗಳು, ವಿದ್ಯಾರ್ಹತೆ 8 ನೇ ತರಗತಿ ಉತ್ತೀರ್ಣ, ರೂ. 2000 ಸ್ಟೈಫಂಡ್.

ಫುಡ್ ಅಂಡ್ ಬೆವರೇಜ್ ಸರ್ವೀಸ್, ತರಬೇತಿ ಅವಧಿ – 12 ವಾರಗಳು, ವಿದ್ಯಾರ್ಹತೆ 10 ನೇ ತರಗತಿ ಉತ್ತೀರ್ಣ, ರೂ. 1500 ಸ್ಟೈಫಂಡ್.

ಫ್ರೆಂಟ್ ಆಫೀಸ್, ತರಬೇತಿ ಅವಧಿ- 14 ವಾರಗಳು, ವಿದ್ಯಾರ್ಹತೆ 12ನೇ ತರಗತಿ ಉತ್ತೀರ್ಣ, ರೂ. 1500 ಸ್ಟೈಫಂಡ್.

ಹೌಸ್ ಕೀಪಿಂಗ್, ತರಬೇತಿ ಅವಧಿ – 12 ವಾರಗಳು, ವಿದ್ಯಾರ್ಹತೆ 5ನೇ ತರಗತಿ ಉತ್ತೀರ್ಣ, ರೂ. 1500 ಸ್ಟೈಫಂಡ್.

ತರಬೇತಿ ಪಡೆಯುವ ಅಭ್ಯರ್ಥಿಗಳ ನಿರ್ದಿಷ್ಟ ವಯೋಮಿತಿ 18 ರಿಂದ 35 ವರ್ಷ.

ತರಬೇತಿಯ ಅವಧಿಯಲ್ಲಿ ಮಧ್ಯಾಹ್ನದ ಊಟ, ಸಮವಸ್ತ್ರ ಹಾಗೂ ಕಲಿಕಾ ಸಾಮಗ್ರಿಗಳನ್ನು ಉಚಿತವಾಗಿ  ನೀಡಲಾಗುವುದು.  ಯಶಸ್ವಿಯಾಗಿ ತರಬೇತಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಪ್ರವಾಸೋದ್ಯಮ ಇಲಾಖೆ ಹಾಗೂ ಫುಡ್ ಕ್ರಾಫ್ಟ್ ಸಂಸ್ಥೆಯಿಂದ ಜಂಟಿಯಾಗಿ ಪ್ರಮಾಣ ಪತ್ರ ನೀಡಲಾಗುವುದು  ಮತ್ತು  ಪ್ರತಿಷ್ಠಿತ  ಹೋಟೆಲ್‍ಗಳಲ್ಲಿ ಕೆಲಸ ಪಡೆಯಲು ಸಹಾಯ ಮಾಡಲಾಗುವುದು.

ಅರ್ಜಿದಾರರು ಸಲ್ಲಿಸಬೇಕಾದ ದಾಖಲೆಗಳು:  ನಿಗಧಿಪಡಿಸಿದ ಅರ್ಜಿ ನಮೂನೆಯಲ್ಲಿ ಇತ್ತೀಚಿನ 5 ಭಾವಚಿತ್ರದೊಂದಿಗೆ ಸಲ್ಲಿಸಬೇಕು. ಶೈಕ್ಷಣಿಕ ಅಂಕಪಟ್ಟಿ ಪ್ರತಿ, ಜಾತಿ ಪ್ರಮಾಣ ಪತ್ರ. ಬ್ಯಾಂಕ್ ಖಾತೆಯ ವಿವರ ಮತ್ತು ಆಧಾರ್ ಕಾರ್ಡ್‍ನ ಪ್ರತಿಯನ್ನು ಸಲ್ಲಿಸಬೇಕು. ತರಬೇತಿಯನ್ನು  ಫುಡ್ ಕ್ರಾಫ್ಟ್  ಇನ್ಸ್‍ಸ್ಟಿಟ್ಯೂಟ್, ಕನ್ನಡ ಕಾರಂಜಿ ಕಟ್ಟಡದ ಮೊದಲನೇ ಮಹಡಿ,  ದಸರಾ ವಸ್ತು ಪ್ರದರ್ಶನ ಆವರಣ, ದೊಡ್ಡಕೆರೆ ಮೈದಾನ, ಇಂದಿರಾನಗರ, ಮೈಸೂರು ಇಲ್ಲಿ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 6362018821, 0821-2445388, 2974388 ನ್ನು ಸಂಪರ್ಕಿಸಲು ಮೈಸೂರು, ಫುಡ್ ಕ್ರಾಫ್ಟ್ ಇನ್‍ಸ್ಟಿಟ್ಯೂಟ್, ಪ್ರಾಂಶುಪಾಲರ ಪ್ರಕಟಣೆ ತಿಳಿಸಿದೆ.    

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಉದ್ಯೋಗ ಮಾಹಿತಿಯ ಸೇವೆ | ಪುತ್ತಿಲ ಪರಿವಾರದಿಂದ ಯುವಕರಿಗೆ ಉದ್ಯೋಗದ ದಾರಿ |
September 12, 2024
10:39 PM
by: ದ ರೂರಲ್ ಮಿರರ್.ಕಾಂ
ದೇಶಸೇವೆ ಮಾಡಲಿಚ್ಚಿಸುವ ಯುವಕ ಯುವತಿಯರಿಗೆ ಸುವರ್ಣಾವಕಾಶ | ಅಗ್ನಿವೀರ್ ನೇಮಕಾತಿ ರ‍್ಯಾಲಿಗಾಗಿ ಅರ್ಜಿ ಆಹ್ವಾನ | 30 ಸಾವಿರ ಸಂಬಳದ ಜೊತೆಗೆ ಆಕರ್ಷಕ ಭತ್ಯೆ
February 15, 2024
2:44 PM
by: The Rural Mirror ಸುದ್ದಿಜಾಲ
ಮಂಗಳೂರು | ಕೃಷಿ ಇಲಾಖೆಯಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ
December 12, 2023
8:19 PM
by: ದ ರೂರಲ್ ಮಿರರ್.ಕಾಂ
ಕೃಷಿ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
November 17, 2023
8:43 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group