ಮಂಗಳೂರು : ಕರ್ನಾಟಕ ಸರ್ಕಾರ, ಕೌಶಲ್ಯ ಅಭಿವೃದ್ದಿ ಯೋಜನೆಯಡಿಯಲ್ಲಿ, ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಅರ್ಹ ನಿರುದ್ಯೋಗಿ ಯುವಕ-ಯುವತಿಯರಿಗೆ ಕೌಶಲ್ಯ ಅಭಿವೃದ್ದಿ ತರಬೇತಿಯನ್ನು ಉಚಿತವಾಗಿ ಹೋಟೆಲ್ ಮ್ಯಾನೇಜ್‍ಮೆಂಟ್ ಕ್ಷೇತ್ರದಲ್ಲಿ ಪ್ರಾರಂಭಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹೋಟೆಲ್ ಮ್ಯಾನೇಜ್‍ಮೆಂಟ್ ತರಬೇತಿಯ ಕ್ಷೇತ್ರಗಳು: ಫುಡ್ ಪ್ರೊಡಕ್ಷನ್, ತರಬೇತಿ ಅವಧಿ – 18 ವಾರಗಳು, ವಿದ್ಯಾರ್ಹತೆ 8 ನೇ ತರಗತಿ ಉತ್ತೀರ್ಣ, ರೂ. 2000 ಸ್ಟೈಫಂಡ್, ಬೇಕರಿ ಅಂಡ್ ಕನ್‍ಫೆಕ್ಷನರಿ ತರಬೇತಿ ಅವಧಿ – 6 ವಾರಗಳು, ವಿದ್ಯಾರ್ಹತೆ 8 ನೇ ತರಗತಿ ಉತ್ತೀರ್ಣ, ರೂ. 2000 ಸ್ಟೈಫಂಡ್. ಫುಡ್ ಅಂಡ್ ಬೆವರೇಜ್ ಸರ್ವೀಸ್, ತರಬೇತಿ ಅವಧಿ – 12 ವಾರಗಳು, ವಿದ್ಯಾರ್ಹತೆ 10 ನೇ ತರಗತಿ ಉತ್ತೀರ್ಣ, ರೂ. 1500 ಸ್ಟೈಫಂಡ್. ಫ್ರೆಂಟ್ ಆಫೀಸ್, ತರಬೇತಿ ಅವಧಿ- 14 ವಾರಗಳು, ವಿದ್ಯಾರ್ಹತೆ 12ನೇ ತರಗತಿ ಉತ್ತೀರ್ಣ, ರೂ. 1500 ಸ್ಟೈಫಂಡ್. ಹೌಸ್ ಕೀಪಿಂಗ್, ತರಬೇತಿ ಅವಧಿ – 12 ವಾರಗಳು, ವಿದ್ಯಾರ್ಹತೆ 5ನೇ ತರಗತಿ ಉತ್ತೀರ್ಣ, ರೂ. 1500 ಸ್ಟೈಫಂಡ್. ತರಬೇತಿ ಪಡೆಯುವ ಅಭ್ಯರ್ಥಿಗಳ ನಿರ್ದಿಷ್ಟ ವಯೋಮಿತಿ 18 ರಿಂದ 35 ವರ್ಷ ಇರಬೇಕು.
ತರಬೇತಿಯ ಅವಧಿಯಲ್ಲಿ ಮಧ್ಯಾಹ್ನದ ಊಟ, ಸಮವಸ್ತ್ರ ಹಾಗೂ ಕಲಿಕಾ ಸಾಮಗ್ರಿಗಳನ್ನು ಉಚಿತವಾಗಿ ನೀಡಲಾಗುವುದು. ಯಶಸ್ವಿಯಾಗಿ ತರಬೇತಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಪ್ರವಾಸೋದ್ಯಮ ಇಲಾಖೆ ಹಾಗೂ ಫುಡ್ ಕ್ರಾಫ್ಟ್ ಸಂಸ್ಥೆಯಿಂದ ಜಂಟಿಯಾಗಿ ಪ್ರಮಾಣ ಪತ್ರ ನೀಡಲಾಗುವುದು ಮತ್ತು ಪ್ರತಿಷ್ಠಿತ ಹೋಟೆಲ್‍ಗಳಲ್ಲಿ ಕೆಲಸ ಪಡೆಯಲು ಸಹಾಯ ಮಾಡಲಾಗುವುದು.
ಅರ್ಜಿದಾರರು ನಿಗದಿಪಡಿಸಿದ ಅರ್ಜಿ ನಮೂನೆಯಲ್ಲಿ ಇತ್ತೀಚಿನ 5 ಭಾವಚಿತ್ರದೊಂದಿಗೆ ಸಲ್ಲಿಸಬೇಕು. ಶೈಕ್ಷಣಿಕ ಅಂಕಪಟ್ಟಿ ಪ್ರತಿ, ಜಾತಿ ಪ್ರಮಾಣ ಪತ್ರ. ಬ್ಯಾಂಕ್ ಖಾತೆಯ ವಿವರ ಮತ್ತು ಆಧಾರ್ ಕಾರ್ಡ್‍ನ ಪ್ರತಿಯನ್ನು ಸಲ್ಲಿಸಬೇಕು. ತರಬೇತಿಯು ಫುಡ್ ಕ್ರಾಫ್ಟ್ ಇನ್ಸ್‍ಸ್ಟಿಟ್ಯೂಟ್, ಕನ್ನಡ ಕಾರಂಜಿ ಕಟ್ಟಡದ ಮೊದಲನೇ ಮಹಡಿ, ದಸರಾ ವಸ್ತು ಪ್ರದರ್ಶನ ಆವರಣ, ದೊಡ್ಡಕೆರೆ ಮೈದಾನ, ಇಂದಿರಾನಗರ, ಮೈಸೂರು ಇಲ್ಲಿ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 6362018821, 0821-2445388, 2974388 ನ್ನು ಸಂಪರ್ಕಿಸಲು ಮೈಸೂರು, ಫುಡ್ ಕ್ರಾಫ್ಟ್ ಇನ್‍ಸ್ಟಿಟ್ಯೂಟ್, ಪ್ರಾಂಶುಪಾಲರ ಪ್ರಕಟಣೆ ತಿಳಿಸಿದೆ.
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…
ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …
ರಾಸಾಯನಿಕಗಳನ್ನು ಹೊಂದಿರುವ ಗೊಬ್ಬರದ ಅತಿಯಾದ ಬಳಕೆಯಿಂದಾಗಿ ಭೂಮಿಯಲ್ಲಿ ಎರೆಹುಳು ಸೇರಿದಂತೆ ಎಲ್ಲ ಜೀವಿಗಳು…
ಕರ್ನಾಟಕದ ಹಲವೆಡೆ ಕಾಫಿ ನವೋದ್ಯಮಕ್ಕೆ ಅವಕಾಶಗಳನ್ನು ಸೃಷ್ಟಿಸಿ, ಸ್ವ ಸಹಾಯ ಗುಂಪುಗಳ ಸುಮಾರು…
ಕೃಷಿ ಸದೃಢವಾಗಿದ್ದರೆ ದೇಶ ಸದೃಢವಾಗಿರುತ್ತದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟಿದ್ದಾರೆ. …
ಬೇಸಿಗೆಯಲ್ಲಿ ಈ ಬಾರಿ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್…