ಉಜಿರೆ: ಧರ್ಮಸ್ಥಳದಲ್ಲಿರುವ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಮುಖ್ಯ ಶಿಕ್ಷಕಿ ಪರಿಮಳಾ ನೇತೃತ್ವದಲ್ಲಿ ಬೂಡುಜಾಲು ವಿಶ್ವನಾಥಗೌಡರ ಮನೆಗೆ ಭೇಟಿ ನೀಡಿ ಕೃಷಿ ಹಾಗೂ ಪೂರಕ ಚಟುವಟಿಕೆಗಳ ಬಗ್ಯೆ ಮಾಹಿತಿ ಕಲೆ ಹಾಕಿ ಖುಷಿ ಪಟ್ಟರು. ಶಿಕ್ಷಕಿಯರಾದ ಸೌಮ್ಯ, ಜಯಂತಿ ಮತ್ತು ಸಂತೋಷ ಸಹಕರಿಸಿದರು.
ತೋಟಗಾರಿಕಾ ಇಲಾಖೆಯ ಅಧಿಕಾರಿ ಮಲ್ಲಿಕಾರ್ಜುನ ಮತ್ತು ಅರಣ್ಯ ಇಲಾಖಾ ಅಧಿಕಾರಿ ಅಶೋಕ್ ಮಾಹಿತಿ, ಮಾರ್ಗದರ್ಶನ ನೀಡಿದರು.
ಜೇನು ಸಾಕಣೆ, ಕಸಿ ಕಟ್ಟುವ ಬಗ್ಯೆ ಪ್ರಾತ್ಯಕ್ಷಿಕೆಯನ್ನು ಕುತೂಹಲದಿಂದ ವೀಕ್ಷಿಸಿದರು. ವಿವಿಧ ಜಾತಿಯ ಹೂ, ಹಣ್ಣುಗಳು ಹಾಗೂ ತರಕಾರಿಗಳ ಬಗ್ಗೆಯೂ ಸಮಗ್ರ ಮಾಹಿತಿ ನೀಡಲಾಯಿತು. “ನೋಡಿ ತಿಳಿ, ಮಾಡಿ ಕಲಿ” ತತ್ವದಂತೆ ವಿದ್ಯಾರ್ಥಿಗಳು ತಮ್ಮ ಜ್ಞಾನಕ್ಷಿತಿಜವನ್ನು ವಿಸ್ತರಿಸಿಕೊಂಡು ಮುಂದೆ “ಕೃಷಿ -ಋಷಿ”ಗಳಾಗುವ ದೃಢ ಸಂಕಲ್ಪ ಮಾಡಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel