ಸುಳ್ಯ: ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ 15 ಸ್ಥಾನಗಳ ಪೈಕಿ 12ರಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಸುಳ್ಯ ಬಿಜೆಪಿ ಮಂಡಲ ಸಮಿತಿಯ ವತಿಯಿಂದ ವಿಜಯೋತ್ಸವ ಬಿಜೆಪಿ ಕಚೇರಿಯ ಬಳಿಯಲ್ಲಿ ನಡೆಯಿತು.
ವಿಜಯೋತ್ಸವವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಎಸ್. ಅಂಗಾರ ರಾಜ್ಯದಲ್ಲಿ ನಿರೀಕ್ಷೆಯಂತೆ ಗೆಲುವು ಬಿಜೆಪಿಗೆ ದೊರೆತಿದೆ. ಮತದಾರರು ಪಕ್ಷದ ಮೇಲೆ ಪ್ರೀತಿಯಿಟ್ಟು ದೊಡ್ಡ ಮಟ್ಟದ ಗೆಲುವು ನೀಡಿದ್ದಾರೆ. ಜನರು ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ತಿರಸ್ಕಾರ ಮಾಡಿದ್ದಾರೆ. ಈ ಸೋಲಿನಿಂದ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಅಸ್ತಿತ್ವವನ್ನು ಕಳೆದುಕೊಂಡಿದೆ ಎಂದು ಹೇಳಿದರು.
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮಾತನಾಡಿ ಬಿಜೆಪಿಗೆ ದೊಡ್ಡ ಮಟ್ಟದ ಗೆಲುವು ರಾಜ್ಯದ ಜನತೆ ನೀಡಿದ್ದಾರೆ. ಮುಂದಿನ ಮೂರು ವರ್ಷ ಯಡಿಯೂರಪ್ಪ ಸರಕಾರ ಅಭಿವೃದ್ದಿ ಪರವಾದ ಆಡಳಿತ ನೀಡಲಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್‍ನವರ ಹಗಲು ಕನಸಿಗೆ ರಾಜ್ಯದ ಜನ ತಣ್ಣೀರೆರಚಿದ್ದಾರೆ ಎಂದರು.
ವಿಜಯೋತ್ಸವದಲ್ಲಿ ತಾ.ಪಂ ಅದ್ಯಕ್ಷ ಚನಿಯ ಕಲ್ತಡ್ಕ ಸ್ಥಾಯಿ ಸಮಿತಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು, ಜಿ.ಪಂ ಸದಸ್ಯ ಎಸ್.ಎನ್.ಮನ್ಮಥ, ಸುಭೋದ್ ಶೇಟ್ಟಿ ಮೇನಾಲ, ನಗರ ಪಂಚಾಯಿತಿ ಸದಸ್ಯರಾದ ಬುದ್ದನಾಯ್ಕ, ಶಶಿಕಲಾ ನೀರಬಿದಿರೆ, ಕಿಶೋರಿ ಶೇಟ್, ಪೂಜಿತಾ ಕೆ.ಯು, ವಾಣಿಶ್ರೀ ಜಟ್ಟಿಪಳ್ಳ, ಶೀಲಾ ಅರುಣ್ ಕುರುಂಜಿ, ನಾರಾಯಣ ಶಾಂತಿನಗರ, ಶಿಲ್ಪಾ ಸುದೇವ್, ವಿನಯ ಕುಮಾರ್ ಕಂದಡ್ಕ, ಬಾಲಕೃಷ್ಣ ರೈ, ಸುಧಾಕರ ಕುರುಂಜಿಭಾಗ್, ಪ್ರಮುಖರಾದ ಉದಯಕುಮಾರ್ ಆಚಾರ್, ಜಯಪ್ರಕಾಶ್ ಕುಂಚಡ್ಕ, ಎನ್.ಟಿ.ಹೊನ್ನಪ್ಪ, ಜಯರಾಮ ರೈ ಜಾಲ್ಸೂರು, ಬೂಡು ರಾಧಾಕೃಷ್ಣ ರೈ, ಹರೀಶ್ ಬುಡುಪನ್ನೇ, ಶೀನಪ್ಪ ಬಯಂಬು, ವಿನುತಾ ಪಾತಿಕಲ್ಲು, ಹೇಮಂತ್ ಕಂದಡ್ಕ, ಮಹೇಶ್ ರೈ ಮೇನಾಲ, ಅಬ್ದುಲ್ ಕುಂಞ ನೆಲ್ಯಡ್ಕ, ನಾಗರಾಜ್ ಮುಳ್ಯ ಮೊದಲಾದವರು ಉಪಸ್ಥಿತರಿದ್ದರು
ಮಾನಸಿಕ ವಿಕಲಚೇತನರಾಗಿ ಉಡುಪಿಯಲ್ಲಿ ರಸ್ತೆ ಬದಿ ತಿರುಗಾಡುತ್ತಿದ್ದ ಬಿಹಾರದ ರಮಾದೇವಿ ಅವರು ವರ್ಷದ…
ಮಣ್ಣಿನಲ್ಲಿ ಬಿದ್ದ ಬೀಜವು ಜೀವಂತಿಕೆಯಿಂದ ತನ್ನ ಬೇರುಗಳನ್ನು ಸಿಕ್ಕಿದ ಬಿರುಕುಗಳಲ್ಲಿ ಹಬ್ಬಿಸುತ್ತ ತೆವಳುತ್ತ…
ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ…
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…
ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …