ಸುಳ್ಯ: ಸುಳ್ಯ ನಗರದ ನಾವೂರು ವಾರ್ಡ್ ನಲ್ಲಿ ದಾರಿ ದೀಪಗಳು ಉರಿಯುತ್ತಿಲ್ಲ, ಮೂಲಭೂತ ಅಭಿವೃದ್ಧಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ನಾವೂರು ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ನೇತೃತ್ವದಲ್ಲಿ ನಗರ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಆಡಳಿತಾಧಿಕಾರಿ ತಹಶೀಲ್ದಾರ್ ಸ್ಥಳಕ್ಕೆ ಬಂದು ಭರವಸೆ ನೀಡಿ ಸಮಸ್ಯೆ ಪರಿಹರಿಸದಿದ್ದರೆ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
ನಾವೂರು ವಾರ್ಡ್ ನಲ್ಲಿ 45 ದಾರಿದೀಪ ಇದ್ದು ಬಹಿತೇಕ ದೀಪಗಳು ಕಳೆದ 15 ದಿನಗಳಿಂದ ಉರಿಯುವುದಿಲ್ಲ, ಸುಳ್ಯ ಕತ್ತಲಲ್ಲಿ ಮುಳುಗಿದೆ. ಸಮಸ್ಯೆ ಪರಿಹರಿಸದಿದ್ದರೆ ಉಗ್ರ ಹೋರಾಟ ಮುಂದುವರಿಸುವುದಾಗಿ ನ.ಪಂ.ಸದಸ್ಯ ಶರೀಫ್ ಕಂಠಿ ಹೇಳಿದರು.
ಎರಡು ದಿನದಲ್ಲಿ ಸಮಸ್ಯೆ ಪರಿಹರಿಸುವುದಾಗಿ ಅಧಿಕಾರಿಗಳು ನೀಡಿದ ಭರವಸೆಯ ಮೇರೆಗೆ ಪ್ರತಿಭಟನೆ ಹಿಂಪಡೆಯಲಾಯಿತು.
ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದಿಕ್ ಕೊಕ್ಕೊ, ಅಬ್ದುಲ್ ಲತೀಪ್, ಹನೀಪ್ ಬೀಜಕೊಚ್ಚಿ, ಹುಕ್ರ, ಜಯ, ಭವಾನಿ, ಅಫ್ರಿದಿ ಮತ್ತಿತರರು ಉಪಸ್ಥಿತರಿದ್ದರು.
ಹೊಸರುಚಿಯ ಮೂಲಕ ಈ ವಾರ ಪಪಾಯ ಹಣ್ಣು ಬರ್ಫಿಯ ಬಗ್ಗೆ ಹೇಳಿದ್ದಾರೆ ಗೃಹಿಣಿ…
ರಾಮಸೀತೆಯರೊಂದಾಗಿ ಕುಶಲವರಿಗೆ ತಂದೆ ತಾಯಿ ಲಭಿಸಿದ ಘಳಿಗೆಯು ಎಲ್ಲರಿಗೂ ಸಂಭ್ರಮಯೋಗ್ಯವಾಗಿ ಕಾಣುತ್ತದೆ. ಹಾಗಾಗಿ…
ಅಲ್ಪಾವಧಿ ಬೆಳೆ ಸಾಲದ ಬಗ್ಗೆ ಕಳೆದ ವಾರ ತಿಳಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ…
ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ತೆರೆದಿರುವ 10…
ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ರೈತರು ತಮ್ಮ ಬೆಳೆಗಳಲ್ಲಿ ಹೆಚ್ಚಿನ ರಾಸಾಯನಿಕಗಳು…
ಕಾರವಾರದ ರವೀಂದ್ರನಾಥ್ ಟಾಗೋರ್ ಕಡಲ ತೀರದ ಮಯೂರ ವರ್ಮ ವೇದಿಕೆಯಲ್ಲಿ ಏಪ್ರಿಲ್ 18…